ಪಂಡಿತ ಡಾ. ರಾಜೀವ ತಾರಾನಾಥ ಅವರಿಗೆ ನಾಡೋಜ ಪದವಿ ಪ್ರದಾನ
ಮೈಸೂರು

ಪಂಡಿತ ಡಾ. ರಾಜೀವ ತಾರಾನಾಥ ಅವರಿಗೆ ನಾಡೋಜ ಪದವಿ ಪ್ರದಾನ

May 25, 2018

ಮೈಸೂರು: ಕನ್ನಡ ವಿಶ್ವವಿದ್ಯಾಲಯವು ಕೊಡ ಮಾಡುವ ಈ ಸಾಲಿನ ಗೌರವ ನಾಡೋಜ ಪದವಿಯನ್ನು ವಿಶ್ರಾಂತ ಪ್ರಾಧ್ಯಾಪಕರು ಮತ್ತು ಖ್ಯಾತ ಸರೋದ್ ವಾದಕರಾದ ಪಂಡಿತ ಡಾ. ರಾಜೀವ ತಾರಾನಾಥ ಅವರಿಗೆ ಮೇ 29ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಅವರ ಸ್ವಗೃಹದಲ್ಲಿ (#154, 11ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570009 ದೂ.0821-2302932, ಮೊ. 9845641932) ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಪ್ರದಾನ ಮಾಡುವರು ಎಂದು ವಿಶ್ವವಿದ್ಯಾ ನಿಲಯ ಮಾಹಿತಿ ಕೇಂದ್ರದ ಉಪನಿದೇರ್ಶಕಿ ಡಾ. ಡಿ.ಮೀನಾಕ್ಷಿ ಅವರು ತಿಳಿಸಿದ್ದಾರೆ.

Translate »