ಅನುಮಾನಾಸ್ಪದ ವ್ಯಕ್ತಿ: ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಹಾಸನ

ಅನುಮಾನಾಸ್ಪದ ವ್ಯಕ್ತಿ: ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

May 25, 2018

ಸಕಲೇಶಪುರ: ತಾಲೂಕಿನ ಬನವಾಸೆ ಗ್ರಾಮದಲ್ಲಿ ಅನುಮಾನಾಸ್ಪದ ವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಗ್ರಾಮಸ್ಥರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ನಡೆದಿದೆ.

ಮಕ್ಕಳ ಕಳ್ಳರು ಇದ್ದಾರೆಂಬ ಸಾಮಾಜಿಕ ಜಾಲ ತಾಣದಲ್ಲಿ ಇತ್ತೀಚೆಗೆ ವ್ಯಾಪಕ ವದಂತಿ ಹರಡಿದ್ದು, ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಗ್ರಾಮದಲ್ಲಿ ಬಿಹಾರ ಮೂಲದ ಯುವಕ ನೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತ ಮನೆಗಳ ಬಾಗಿಲು ಬಡಿಯುತ್ತಿದ್ದ ಎಂದು ಅವನನ್ನು ಗ್ರಾಮಸ್ಥರು ಹಿಡಿದು ಪೊಲೀಸ ರಿಗೆ ಒಪ್ಪಿಸಿದ್ದಾರೆ.
ಈ ಯುವಕನ ಜೊತೆಗೆ ಇನ್ನು ಮೂರು, ನಾಲ್ಕು ಮಂದಿ ಇದ್ದರೆಂದು ಹೇಳಲಾ ಗಿದ್ದು, ಅವರೆಲ್ಲ ಪರಾರಿಯಾಗಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆಯ ಪೆÇೀಲಿಸರು ವಿಚಾರಣೆ ನಡೆಸುತ್ತಿದ್ದಾರೆ.

Translate »