ಆಡಂಬರದ ಭಕ್ತಿಗಿಂತ ಪರಿಶುದ್ಧ ಭಕ್ತಿ ಅತ್ಯಂತ ಶ್ರೇಷ್ಠ
ಹಾಸನ

ಆಡಂಬರದ ಭಕ್ತಿಗಿಂತ ಪರಿಶುದ್ಧ ಭಕ್ತಿ ಅತ್ಯಂತ ಶ್ರೇಷ್ಠ

November 20, 2018

ರಾಮನಾಥಪುರ: ಆಡಂಬರದ ಭಕ್ತಿಗಿಂತ ಪರಿ ಶುದ್ಧವಾದ ಭಕ್ತಿ ಅತ್ಯಂತ ಶ್ರೇಷ್ಠವಾದುದು. ಸ್ವಾರ್ಥ ಬದುಕಿಗಿಂತ ಜನರ ಬದುಕು ಉತ್ತಮವಾಗಬೇಕು ಎಂದು ಮಾಜಿ ಸಚಿವ ಎ.ಮಂಜು ಹೇಳಿದರು.

ರಾಮನಾಥಪುರ ಹೋಬಳಿ ಜೆ. ಹೊಸಹಳ್ಳಿ ಗ್ರಾಮದಲ್ಲಿ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಗ್ರಾಮ ದೇವತೆ ದೊಡ್ಡಮ್ಮತಾಯಿ ಮತ್ತು ಚಿಕ್ಕಮ್ಮತಾಯಿಯವರ ದೇವಸ್ಥಾನದ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ನೀರಾವರಿ ಸಚಿವರು ದಿವಂಗತ ಎಚ್.ಎನ್. ನಂಜೇಗೌಡ ಅವರ ಅವಧಿಯಲ್ಲಿ ನೂತನ ಈ ಗ್ರಾಮಕ್ಕೆ ನೂತನವಾಗಿ ಚಾಲನೆ ಸಿಕ್ಕಿತ್ತು. ನನ್ನ ಅವಧಿಯಲ್ಲಿ ಈ ನೂತನ ಗ್ರಾಮಕ್ಕೆ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದೇನೆ, ನನ್ನ ಅವಧಿಯಲ್ಲಿ ಜೆ. ಹೊಸಹಳ್ಳಿ ಗ್ರಾಮಕ್ಕೆ ಸುಮಾರು 5 ಕೋಟಿ ರೂ ನೀಡಿ ಗ್ರಾಮದಲ್ಲಿ ದೇವ ಸ್ಥಾನವು ಸೇರಿದಂತೆ ವಿವಿಧ ಕಾಮಾಗಾರಿಗಳು ನಡೆಯು ತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶೀತಪೀಡಿತವಾಗಿ ಸ್ಥಳಾಂತರವಾದ ಜೆ. ಹೊಸಹಳ್ಳಿ ಗ್ರಾಮವು ನಾಲಾ ಹಂತದ ತಳ ಭಾಗದಲ್ಲಿದ್ದು ಇದರಿಂದ ಇಲ್ಲಿಯ ಮನೆಗಳು ತೇವಾಂಶಕ್ಕೆ ಶಿಥಿಲವಾದ್ದರಿಂದ ಪುನರ್‍ವಸತಿ ಯೋಜನೆಯಡಿ (ರುದ್ರ ಪಟ್ಟಣ ಕ್ರಾಸ್‍ನಲ್ಲಿ) ನೂತನ ಹೊಸ ದಾಗಿ ಎಚ್.ಎನ್.ನಂಜೇಗೌಡರ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ನನ್ನ ಅವಧಿಯಲ್ಲಿ ವಿವಿಧ ಕಾಮಗಾರಿಗಳಿಗೆ 5 ಕೋಟಿ ರೂ ವೆಚ್ಚದಲ್ಲಿ ಇಲ್ಲಿಯ ದೇವಸ್ಥಾನ, ಹತ್ತಾರು ರಸ್ತೆಗಳ ನಿರ್ಮಾಣ, ಅಲ್ಲದೇ ಈ ಗ್ರಾಮದ ಪಕ್ಕದಲ್ಲಿ ಸುಮಾರು 180 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯೆ ತಾರಾಮಂಜು, ಕೃಷಿ ಸಮಾಜ ಅಧ್ಯಕ್ಷ ದೊಡ್ಡಮಗ್ಗೆ ರಂಗಸ್ವಾಮಿ, ತಾ.ಪಂ. ಸದಸ್ಯ ಜಿ.ಸಿ. ಮಂಜೇಗೌಡ, ಗ್ರಾ.ಪಂ.ಸದಸ್ಯ ಚಂದ್ರೇಗೌಡ, ಮುಖಂಡ ರಾದ ನಾರಾಯಣಗೌಡ, ಸ್ವಾಮಣ್ಣ, ಜನಾರ್ಧನ್, ಸತ್ಯನಾರಾ ಯಣ, ತಮ್ಮಣ್ಣ, ನಾಗರಾಜು, ತಮ್ಮಯ್ಯ, ಕಂಟ್ರ್ಯಾಕ್ಷರ್ ಮೈಸೂರು ನಾಗರಾಜು, ಭಾಸ್ಕರ್‍ರೆಡ್ಡಿ ಮುಂತಾದವರು ಭಾಗವಹಿಸಿದ್ದರು.

Translate »