ಬ್ರಿಟಿಷರೇ ಭಾರತ ಬಿಟ್ಟು ತೊಲಗಿ…
ಮೈಸೂರು

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ…

August 10, 2018

ಮೈಸೂರು:  `ಮಾಡು ಇಲ್ಲವೇ ಮಡಿ…!’ ಇದು 1942ರ ಆಗಸ್ಟ್ 9ರ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದ ಘೋಷ ವಾಕ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧಿಜೀಯವರು ಹೋರಾಟಗಾರರಿಗೆ ನೀಡಿದ ಮಂತ್ರಘೋಷವೂ ಹೌದು.

ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹೋರಾಟದ ಕಿಚ್ಚು ಹಚ್ಚಲು ಗಾಂಧೀಜಿಯವರು ನೀಡಿದ ಈ ಘೋಷ ವಾಕ್ಯದ ಪರಿಣಾಮ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿ ದೇಶ ವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಮಹತ್ವದ ಹಂತವಾಯಿತು ಎಂದೇ ಇತಿಹಾಸ ಕಾರರು ವಿಶ್ಲೇಷಿಸಿದ್ದಾರೆ.

ಇಂತಹ ಮಹತ್ವದ ಚಳವಳಿಯ 76ನೇ ವರ್ಷದ ಸ್ಮರಣೆ ಮೈಸೂರು ನಗರದಲ್ಲಿ ಸಂಘ-ಸಂಸ್ಥೆಗಳ ವತಿಯಿಂದ ನಡೆಯಿತು. ಇದರಲ್ಲಿ ಮೈಸೂರು ಮೈಸೂರು ನಗರ ಮತ್ತು ಜಿಲ್ಲಾ ಸ್ವಾತಂತ್ರ್ಯ ಹೋರಾಟ ಗಾರರ ಸಂಘದ ವತಿಯಿಂದ ನಡೆದ ಸ್ಮರಣಾ ಕಾರ್ಯಕ್ರಮ ವಿಶೇಷ. ಕಾರಣ ಈ ಕಾರ್ಯಕ್ರಮ ಆಚರಿಸಿದವರು ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು, ದೇಶದ ಸ್ವಾತಂತ್ರ್ಯಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿರುವ ಹಿರಿಯ ಜೀವ ಗಳು-ಸ್ವಾತಂತ್ರ್ಯ ಸೇನಾನಿಗಳು. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಭಾಗದಲ್ಲಿ ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿದ್ದ ಸುಬ್ಬರಾಯನಕರೆ ಇಂದು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಉದ್ಯಾನವನವಾ ಗಿದ್ದು, ಇಲ್ಲಿ ಗುರುವಾರ ಏರ್ಪಡಿಸಿದ್ದ ಸ್ಮರಣಾ ಕಾರ್ಯಕ್ರಮ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣ ಮೂರ್ತಿ ನೇತೃತ್ವದಲ್ಲಿ ನಡೆಯಿತು. ಸಂಘದ ಮಾಜಿ ಅಧ್ಯಕ್ಷ ಜಗದೀಶ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಸ್ವಾತಂತ್ರ್ಯ ಸಂಗ್ರಾಮದ ಅರಿವಿಲ್ಲ: ಇಂದಿನ ತಲೆಮಾರಿನ ರಾಜಕಾರಣದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ಬಗ್ಗೆ ಅರಿವು ಇಲ್ಲವಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಬೇಸರ ವ್ಯಕ್ತ ಪಡಿಸಿದರು. ಬಹುತೇಕ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಂದಿನ ರಾಜಕೀಯ ಪಕ್ಷಗಳ ಸಮಾವೇಶಗಳಿಗೆ ಹಣ ಕೊಟ್ಟು ಜನರನ್ನು ಕರೆತರುವ ಕೆಟ್ಟ ಸಂಸ್ಕøತಿಗೆ ಇಂದಿನ ರಾಜಕಾರಣ ಬುನಾದಿ ಹಾಕಿದೆ. ಆದರೆ ಅಂದು ಗಾಂಧೀಜಿಯ ವರು ಒಂದು ಕರೆ ನೀಡಿದರೆ ಇಡೀ ದೇಶದ ಜನತೆ ಚಳವಳಿಗೆ ನಾಂದಿ ಹಾಡುತ್ತಿದ್ದರು ಎಂದು ಸ್ಮರಿಸಿದರು.

ಜಿಲ್ಲೆಯಲ್ಲಿ 30 ಮಂದಿ ಸ್ವಾತಂತ್ರ್ಯ ಹೋರಾಟಗಾರರು: ನನಗೀಗ 88 ವರ್ಷ ವಾಗಿದ್ದು, 1947ರ ಆ.9ರಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆ ಯಲ್ಲಿ ಜೈಲು ವಾಸ ಅನುಭವಿಸಿದ್ದೆ ಎಂದು ಸ್ಮರಿಸಿದ ಅವರು, ನಮ್ಮ ಸಂಘ ಸ್ಥಾಪನೆ ಗೊಂಡು 60 ವರ್ಷಗಳ ಮೇಲಾಗಿದೆ. ಪ್ರಾರಂಭದಲ್ಲಿ 270 ಮಂದಿ ಸದಸ್ಯರಿ ದ್ದರು (ಸ್ವಾತಂತ್ರ್ಯ ಹೋರಾಟಗಾರರು). ಇದೀಗ 30ಕ್ಕೆ ಇಳಿದಿದೆ. ಅದರಲ್ಲಿ ಕೇವಲ 12 ಮಂದಿ ಮಾತ್ರ ನಡೆದಾಡುವಷ್ಟು ಆರೋಗ್ಯದಿಂದ ಇದ್ದೇವೆ. ಉಳಿದವರು ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ ಎಂದು ಡಾ.ಎಂ.ಜಿ. ಕೃಷ್ಣಮೂರ್ತಿ ವಿವರಿಸಿದರು.

ಇಡೀ ದೇಶ ಸ್ಮರಿಸಬೇಕಿತ್ತು: ಸ್ವಾತಂತ್ರ್ಯ ಹೋರಾಟಕ್ಕೆ ಕ್ವಿಟ್ ಇಂಡಿಯಾ ಚಳುವಳಿ ಪ್ರೇರಣಶಕ್ತಿ. ಈ ದಿನವನ್ನು ಇಡೀ ದೇಶದ ಜನತೆ ಸ್ಮರಿಸಿಕೊಳ್ಳಬೇಕು. ಆದರೆ ಇಂದಿಗೂ ಸ್ವಾತಂತ್ರ್ಯ ಹೋರಾಟಗಾರರು ಮಾತ್ರ ಸ್ಮರಣೆ ಮಾಡಿಕೊಳ್ಳುವಂತಾಗಿದೆ. ಈ ಚಳುವಳಿಯ ಸ್ಮರಣೆಯನ್ನು ದೇಶದ ನಾಗರಿಕರು ಸ್ವಯಂ ಪ್ರೇರಣೆಯಿಂದ ಆಚರಿಸಬೇಕು. ದುರಾದೃಷ್ಟವಶಾತ್ ನಾವುಗಳು ಮತ್ತು ನಮ್ಮ ಕುಟುಂಬ ದವರೇ ಆಚರಿಸಿಕೊಂಡು ಬರುವಂತಾ ಗಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ವೆಂಕಟಾಚಲಯ್ಯ ಬೇಸರ ವ್ಯಕ್ತಪಡಿಸಿದರು.

1942ರ ಕ್ವಿಟ್ ಇಂಡಿಯಾ ಚಳವಳಿ ಯಂದು ಇದರ ಅಂಗವಾಗಿ ಚಾಮರಾಜ ನಗರದಲ್ಲಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, 1947ರ ವೇಳೆಯಲ್ಲಿ ಮೈಸೂರಲ್ಲಿ ನೆಲೆಸಿದ್ದ ನಾನು ಇಲ್ಲಿ ನಡೆಯು ತ್ತಿದ್ದ ಎಲ್ಲಾ ಹೋರಾಟದಲ್ಲೂ ಭಾಗವಹಿ ಸುತ್ತಿದ್ದೆ ಎಂದು 93 ವರ್ಷದ ಟಿ.ವೆಂಕಟಾ ಚಲಯ್ಯ ಇದೇ ವೇಳೆ ಸ್ಮರಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎನ್.ಅಶ್ವಥನಾರಾಯಣ ಮಾತನಾಡಿ, ಬ್ರಿಟಿಷರು ನಮ್ಮ ದೇಶದ ಸಂಪತ್ತು ಲೂಟಿ ಮಾಡಿದರು. ಇವರ ಈ ದೌರ್ಜನ್ಯ ವಿರೋಧಿಸಿ ಸಂಗೋಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಸೇರಿ ಹಲವರು ಹೋರಾಡಿ ಬಲಿದಾನ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಕ್ವಿಟ್ ಇಂಡಿಯಾ ಮಹತ್ವ ಚಳವಳಿ ಯಾಗಿದ್ದು, ಗಾಂಧೀಜಿ ಅವರ ನೇತೃತ್ವ ದಲ್ಲಿ ನಡೆದ ಅಹಿಂಸಾತ್ಮಕ ಹೋರಾಟದ ಫಲವಾಗಿ 1947ರಲ್ಲಿ ಸ್ವಾತಂತ್ರ್ಯ ದೊರೆ ಯಿತು ಎಂದು ಸ್ಮರಿಸಿದರು. ಸಂಘದ ಪದಾಧಿಕಾರಿಗಳಾದ ಸಿ.ಆರ್.ರಂಗಶೆಟ್ಟಿ, ಟಿ.ಪುಟ್ಟಣ್ಣ, ಸಂಚಾಲಕ ಬಿ.ಕರುಣಾಕರನ್, ಕನ್ನಡಪರ ಹೋರಾಟಗಾರರ ಬಾಲಕೃಷ್ಣ ಮತ್ತಿತರರು ಹಾಜರಿದ್ದರು.

Translate »