ಬಿಜೆಪಿ ಕೈ ಹಿಡಿದ ಕಾಯಕ ಸಮುದಾಯ: ರಘು ಆರ್.ಕೌಟಿಲ್ಯ
ಮಂಡ್ಯ

ಬಿಜೆಪಿ ಕೈ ಹಿಡಿದ ಕಾಯಕ ಸಮುದಾಯ: ರಘು ಆರ್.ಕೌಟಿಲ್ಯ

December 11, 2019

ಕೆ.ಆರ್.ಪೇಟೆ, ಡಿ.10- ಪ್ರಬಲ ಸಮುದಾಯಗಳ ನಡುವೆ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಕಾಯಕ ಸಮಾಜಗಳು ಬಿಜೆಪಿ ಕೈ ಹಿಡಿದಿದ್ದರಿಂದ ಪಕ್ಷದ ಅಭ್ಯರ್ಥಿ ನಾರಾಯಣಗೌಡರು ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ರಘು ಆರ್.ಕೌಟಿಲ್ಯ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಡಿ.ಯಡಿಯೂರಪ್ಪನವರ ಪುತ್ರ ಹಾಗೂ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ತಾಲೂಕಿನ ಮಡಿವಾಳ, ವಿಶ್ವಕರ್ಮ, ಗಾಣಿಗ, ಕುಂಬಾರ, ನಯನಕ್ಷತ್ರಿಯ, ನೇಕಾರ, ಉಪ್ಪಾರ, ಈಡಿಗ ಮತ್ತಿತರ ಸಣ್ಣ ಸಮುದಾಯಗಳ ಪ್ರತ್ಯೇಕ ಸಮಾವೇಶ ನಡೆಸಿ ಬಿಜೆಪಿ ಸರ್ಕಾರದಿಂದ ಆಗುವ ಅನುಕೂಲಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಕಾಯಕ ಸಮಾಜಗಳು ಉಪಚುನಾವಣೆಯಲ್ಲಿ ಬಿಜೆಪಿಯತ್ತ ಮುಖ ಮಾಡಿದವು. ಇದರಿಂದ ಒಕ್ಕಲಿಗರ ಪ್ರಾಬಲ್ಯವಿರುವ ಜೆಡಿಎಸ್ ಭದ್ರಕೋಟೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಸುಲಭ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದಿದ್ದಾರೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಕಡಿಮೆ ಮತಗಳಿವೆ ಎಂದು ಕಾಯಕ ಸಮುದಾಯವನ್ನು ಗಣನೆಗೆ ತೆಗೆದು ಕೊಳ್ಳುತ್ತಿರಲಿಲ್ಲ. ಇದರಿಂದ ಈ ಸಮುದಾಯಗಳು ತಮ ಗಿಷ್ಟ ಬಂದ ಪಕ್ಷಕ್ಕೆ ಮತ ನೀಡುತ್ತಿದ್ದವು. ಆದರೆ ಈ ಉಪ ಚುನಾವಣೆಯಲ್ಲಿ ಇದರ ಸಂಪೂರ್ಣ ಲಾಭ ಪಡೆದ ಬಿಜೆಪಿ ಆಯಾ ಸಮುದಾಯಕ್ಕೆ ಸೇರಿದ ಪಕ್ಷದ ಮುಖಂಡರನ್ನು ಕ್ಷೇತ್ರಕ್ಕೆ ಕರೆಸಿ ಸಭೆ ಸಮಾರಂಭಗಳ ಮೂಲಕ ಬಿಜೆಪಿ ಸರ್ಕಾರದಿಂದ ಆಗಬಹುದಾದ ಹಾಗೂ ಈಗಾಗಲೇ ಆಗಿರುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ಹಿಂದಿನ ಚುನಾವಣೆ ಗಳಲ್ಲಿ ಬೇರೆ ಬೇರೆ ಪಕ್ಷಗಳಿಗೆ ಹರಿದು ಹಂಚಿ ಹೋಗುತ್ತಿದ್ದ ಕಾಯಕ ಸಮುದಾಯಗಳು ಈ ಚುನಾವಣೆಯಲ್ಲಿ ಬಿಜೆಪಿಯತ್ತ ಒಲವು ತೋರಿದವು. ಪರಿಣಾಮ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಈ ಉಪಚುನಾವಣೆಯಲ್ಲಿ ಜಯ ಸಾಧಿಸಿ ಮೊದಲ ಬಾರಿಗೆ ಜಿಲ್ಲೆಯ ರಾಜಕೀಯ ಇತಿ ಹಾಸದಲ್ಲಿ ಕಮಲ ಅರಳಲು ಕಾರಣರಾದರು ಎಂದರು.

Translate »