ಮುಂದುವರೆದ ಗಣಿಗಾರಿಕೆ ಮೇಲಿನ ದಾಳಿ
ಮಂಡ್ಯ

ಮುಂದುವರೆದ ಗಣಿಗಾರಿಕೆ ಮೇಲಿನ ದಾಳಿ

July 7, 2018

ಮಂಡ್ಯ:  ಶ್ರೀರಂಗಪಟ್ಟಣ ತಾಲೂಕಿನ ವಿವಿಧೆಡೆ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ, ಕ್ರಷರ್ ಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರವೂ ದಾಳಿ ನಡೆಸಿ 19 ಅಕ್ರಮ ಜಲ್ಲಿ ಕ್ರಷರ್‍ಗಳಿಗೆ ಬೀಗ ಜಡಿದಿದ್ದಾರೆ.

ನಿನ್ನೆ ಅರಕೆರೆ ವ್ಯಾಪ್ತಿಯ ಹಲವು ಅಕ್ರಮ ಕ್ರಷರ್‍ಗಳಿಗೆ ಬೀಗ ಜಡಿದಿದ್ದರು. ಇಂದು ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯ ಗಣಂಗೂರು, ಗೌಡಹಳ್ಳಿ, ಟಿ.ಎಂ.ಹೂಸೂರು, ಕಾಳೇನಹಳ್ಳಿ ಮತ್ತು ಜಕ್ಕನಹಳ್ಳಿ ವ್ಯಾಪ್ತಿ ಗಳಲ್ಲಿ ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ನಡೆಸುತ್ತಿದ್ದ ಶ್ರೀಮಹಾಲಕ್ಷ್ಮೀ ಸ್ಟೋನ್ ಕ್ರಷರ್, ಆರ್‍ಪಿಎನ್, ಬೋರೆ ದೇವರು, ಸೋಮೇಶ್ವರ, ಕ್ಲಾಸಿಕ್, ಹೈಟೆಕ್, ಚೌಡೇಶ್ವರಿ, ಎಂ.ಎಂ.ಯಾಕೂಬ್, ಸತ್ಯ ಸಾಯಿ, ಕಾವೇರಿ, ಕೆ.ಜೆ, ಜಯಲಕ್ಷ್ಮೀ, ಯೋಗ ನರಸಿಂಹ, ಹರ್ಷ ಲಕ್ಷ್ಮೀ ವೆಂಕಟೇಶ್ವರ, ರಾಮ, ವೆಂಕಟೇಶ್ವರ ಹಾಗೂ ರಾಯಲ್ ಜಲ್ಲಿ ಕ್ರಷರ್ ಸೇರಿ ಒಟ್ಟು 19 ಕ್ರಷರ್‍ಗಳಿಗೆ ಬೀಗ ಜಡಿದು ಮುದ್ರೆ ಒತ್ತಿದ್ದಾರೆ.
ತಾಲೂಕಿನಲ್ಲಿನ ಅಕ್ರಮ ಜಲ್ಲಿ ಕ್ರಷರ್‍ಗಳ ಮೇಲೆ ಕಳೆದ 2 ದಿನಗಳಿಂದ ದಾಳಿ ನಡೆಸುತ್ತಿರುವ ತಾಲೂಕು ಆಡಳಿತ ಮತ್ತು ಗಣಿ ಇಲಾಖೆ ದಾಳಿ ಮುಂದುವರೆಸಿದ್ದು, ಅಕ್ರಮವಾಗಿ ಪರವಾನಿಗೆ ಪಡೆಯದೆ ನಡೆ ಸುತ್ತಿದ್ದ ಕ್ರಷರ್‍ಗಳಗೆ ಬೀಗ ಹಾಕಲಾಗು ವುದು. ಕ್ರಷರ್ ನಡೆಸಬೇಕು ಎಂಬುವರು ಸೂಕ್ತ ದಾಖಲಾತಿ ಪತ್ರಗಳೊಂದಿಗೆ ಹಾಗೂ ಅಗತ್ಯ ಪರವಾನಿಗಿಯೊಂದಿಗೆ ತಾಲೂಕು ಕಚೇರಿಯಲ್ಲಿ ಒಪ್ಪಿಗೆ ಪಡೆದು ಕ್ರಷರ್ ತೆರಯಬಹುದು. ನಿಯಮ ಮೀರಿ ಕ್ರಷರ್ ತೆರೆದೆರೆ ಸೂಕ್ತ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗು ವುದು ಎಂದು ತಾಲೂಕು ದಂಡಾಧಿಕಾರಿ ಡಿ.ನಾಗೇಶ್ ಎಚ್ಚರಿಕೆ ನೀಡಿದ್ದಾರೆ.

ದಾಳಿಯ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ನಾಗಭೂಷಣ್, ತಾಲ್ಲೂಕು ತಹಸೀಲ್ದಾರ್ ಡಿ.ನಾಗೇಶ್, ಕಂದಾಯ ನೀರಿಕ್ಷಕ ಅನಂತ ಪದ್ಮನಾಭ, ವಿಎ ಮಂಜುನಾಥ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

Translate »