ಮಳೆ, ಗಾಳಿಗೆ ರಸ್ತೆಗೆ ಉರುಳಿದ ಭಾರೀ ಮರ
ಚಾಮರಾಜನಗರ

ಮಳೆ, ಗಾಳಿಗೆ ರಸ್ತೆಗೆ ಉರುಳಿದ ಭಾರೀ ಮರ

February 20, 2019

ಬೇಗೂರು: ಇತ್ತೀಚಿಗೆ ಸುರಿದ ಮಳೆ, ಗಾಳಿಗೆ ಬೇಗೂರು-ಸರಗೂರು ರಸ್ತೆಯ ಕೊತ್ತನಹಳ್ಳಿ ಬಳಿ ಬಾರಿ ಗಾತ್ರದ ಆಲದ ಮರವೊಂದು ರಸ್ತೆ ಮಧ್ಯಕ್ಕೆ ಉರುಳಿ ಬಿದ್ದಿದ್ದು ವಾಹನ ಸವಾರರು ಪರದಾಡು ವಂತಾಗಿದೆ.

ಮರಬಿದ್ದು ನಾಲ್ಕೈದು ದಿನ ಕಳೆದಿದ್ದರೂ ಇದನ್ನು ತೆರವುಗೊಳಿಸುವ ಪ್ರಯತ್ನ ಮಾಡಿಲ್ಲ, ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದರೆ ಯುಂಟಾಗಿದ್ದು. ಈ ರಸ್ತೆಯು ಬೇಗೂರು ಬಳಿ ರಾಷ್ಟ್ರೀಯ ಹೆದ್ದಾರಿ 716ಕ್ಕೆ ಸಂಪರ್ಕ ಕಲ್ಪಿಸುವುದರಿಂದ ಹೆಚ್.ಡಿ.ಕೋಟೆ, ಸರಗೂರಿನಿಂದ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ. ಮುಂದಾಗುವ ಅಪಾಯವನ್ನು ತಪ್ಪಿಸಲು ಕೂಡಲೇ ಮರವನ್ನು ತೆರವುಗೊಳಿಸಬೇಕೆಂದು ಸಂಬಂಧಪಟ್ಟವರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Translate »