ಕುಡುಗೋಲು ಹಿಡಿದು ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸಿದ ಶಾಸಕ ರಾಮದಾಸ್
ಮೈಸೂರು

ಕುಡುಗೋಲು ಹಿಡಿದು ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸಿದ ಶಾಸಕ ರಾಮದಾಸ್

June 24, 2019

ಮೈಸೂರು, ಜೂ.23(ಆರ್‍ಕೆಬಿ)- ಕೃಷ್ಣ ರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಭಾನುವಾರ 62ನೇ ವಾರ್ಡ್‍ನ ಜೆ.ಪಿ.ನಗರ ಕಂದಾಯ ಕಾಲೋನಿ ವಿಠಲಧಾಮದ ಹಿಂಭಾಗದ ಅಡ್ಡ ರಸ್ತೆ ಗಳಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಸ್ವತಃ ಅವರೇ ಕುಡುಗೋಲಿನಿಂದ ಕತ್ತರಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನ ಕೈಗೊಂಡರು. ವಾರ್ಡ್ ಸದಸ್ಯೆ ಶಾಂತಮ್ಮ ವಡಿವೇಲು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಕಾಲೋನಿ ರಸ್ತೆಗಳಲ್ಲಿ ನೇರಳೆ, ಬೇವು, ಹೊಂಗೆ, ಹತ್ತಿ ಇನ್ನಿತರ ಗಿಡಗಳನ್ನು ಅಲ್ಲಿನ ನಿವಾಸಿಗಳಿಂ ದಲೇ ನೆಡಿಸಿ, ಅವುಗಳು ಬೆಳೆದು ಫಲ ನೀಡುವಂತೆ ಸಂರಕ್ಷಿಸುವಂತೆ ನಿವಾಸಿಗಳಿಗೆ ಮನವಿ ಮಾಡಿದರು. ಈ ವೇಳೆ ಕಂದಾಯ ಕಾಲೋನಿಯ ನಿವಾಸಿಗಳಾದ ನಾಗೇಂದ್ರ, ಬಸವರಾಜು, ಶಾಂತಕೃಷ್ಣ ಮೂರ್ತಿ, ಕಿರಣ್, ಚಂದ್ರಶೇಖರ್, ಗಂಗಾಧರಯ್ಯ, ಆನಂದ, ವಿದ್ಯಾಶಂಕರ್, ನಿಂಗೇಗೌಡ, ಶ್ರೀನಾಥ್, ಕುಮಾರ್, ಬಿಜೆಪಿ ಮುಖಂಡ ರಾದ ನಾಗೇಂದ್ರ, ದೇವರಾಜಗೌಡ, ಸುರೇಶ್, ಪ್ರಸನ್ನ, ವಾರ್ಡ್ ಅಧ್ಯಕ್ಷ ಕಲಿಯ ಮೂರ್ತಿ, ಪ್ರಧಾನ ಕಾರ್ಯದರ್ಶಿ ಜಿ.ಮುರು ಗೇಶ್, ಶಾಸಕರ ಆಪ್ತ ಸಹಾಯಕÀ ಮುದ್ದು ಕೃಷ್ಣ, ರಘು, ಕುಮಾರ್, ಜಗದೀಶ್, ರುದ್ರೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »