ಮೈಸೂರು,ಜ.18(ಪಿಎಂ)-ಪ್ರಸಕ್ತ ಸಾಲಿನ ಮೈಸೂರು ರಂಗಾಯಣದ ಬಹುರೂಪಿ ನಾಟಕೋತ್ಸವ ಫೆ.14ರಿಂದ 19ರವರೆಗೆ ನಡೆಯಲಿದ್ದು, ನಾಟಕೋತ್ಸವವು ಬಸ ವಣ್ಣ ಸೇರಿದಂತೆ ಹಲವು ಮಹನೀಯರ ಆಶಯ ಗಳನ್ನು ಬಿಂಬಿಸಲಿದೆ ಎಂದು ರಂಗಾಯಣ ನಿರ್ದೇ ಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು.
ಮೈಸೂರು ಆರ್ಟ್ ಗ್ಯಾಲರಿ ವತಿಯಿಂದ ಶಾಲಾ ಮಕ್ಕಳಿಗೆ ನಡೆಸಿದ `ಬಸವಣ್ಣನವರ ರೇಖಾಚಿತ್ರಗಳಿಗೆ ಬಣ್ಣ ಹಚ್ಚುವ ಸ್ಪರ್ಧೆ’ಯಲ್ಲಿ ಆಯ್ಕೆಯಾದ ಚಿತ್ರಗಳ ಪ್ರದರ್ಶನಕ್ಕೆ ಮೈಸೂರಿನ ಶಂಕರ ಮಠದ ರಸ್ತೆಯ ನಟರಾಜ ಸಭಾಭವನದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಬಹುರೂಪಿ ನಾಟಕೋ ತ್ಸವದ ಪೂರ್ವಭಾವಿಯಾಗಿ ಫೆ.13ರಂದು ಜನ ಪದೋತ್ಸವ ಆಯೋಜಿಸಲಾಗಿದೆ ಎಂದರು.
ಬಸವಣ್ಣ ಸೇರಿದಂತೆ ಎಲ್ಲಾ ಮಹನೀಯರು ಇಡೀ ಸಮಾಜದ ಸ್ವತ್ತೇ ಹೊರತು ಕೇವಲ ಒಂದು ಸಮು ದಾಯಕ್ಕೆ ಸೀಮಿತವಲ್ಲ. ಬಸವಣ್ಣ ನವರ ಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆ ಯಲ್ಲಿ ಸುಮಾರು 12 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂಬುದು ಸಾಮಾನ್ಯ ಸಂಗತಿಯಲ್ಲ. ನಾವು ಪಠ್ಯದಲ್ಲಿ ಬಸವಣ್ಣ, ಬುದ್ಧ, ಅಂಬೇಡ್ಕರ್ ಹಾಗೂ ಗಾಂಧಿ ಸೇರಿ ದಂತೆ ಎಲ್ಲಾ ಮಹನೀಯರ ಬಗ್ಗೆ ಓದಿಕೊಂಡಿದ್ದೇವೆ. ಆದರೆ ಓದಿ ಕೊಂಡಿದ್ದರೂ ನಮ್ಮ ಯುವಪೀಳಿಗೆ ಯಲ್ಲಿ ಬಹುತೇಕ ಮಂದಿ ಮಹನೀ ಯರ ಆದರ್ಶಗಳನ್ನು ಮರೆತು ಮೊಬೈಲ್ ಮತ್ತಿತರರ ವಸ್ತುಗಳ ವ್ಯಾಮೋಹಕ್ಕೆ ಒಳಗಾಗಿದ್ದಾರೆ ಎಂದು ವಿಷಾದಿಸಿದರು.
ಟಿಆರ್‍ಪಿ ಹಿಂದೆ ಬಿದ್ದಿರುವ ಬಹುತೇಕ ವಿದ್ಯುನ್ಮಾನ ಮಾಧ್ಯಮಗಳು ಸಂಸಾರದ ಗಲಾಟೆಗಳನ್ನೇ ಬಿತ್ತರಿ ಸಲು ಆದ್ಯತೆ ನೀಡುತ್ತಿವೆ. ಸಮಾಜ ವನ್ನು ಅರಳಿಸಬೇಕೇ ಹೊರತು ಕೆರಳಿಸಬಾರದು. ಆದರೆ ಇಂದು ವಿಶ್ವವಿದ್ಯಾನಿಲಯಗಳಲ್ಲಿ ಕೆರಳಿಸುವ ವಾತಾವರಣ ನಿರ್ಮಾಣವಾಗುತ್ತಿದೆ. `ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿ ದೇಶದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿದ್ದಲ್ಲದೆ, ಅದನ್ನೇ ದೇಶಪ್ರೇಮ ಎನ್ನುವ ಹುಚ್ಚು ಮನಸ್ಸುಗಳು ಹೆಚ್ಚಾಗುತ್ತಿವೆ. ಮಹನೀಯರ ಆದರ್ಶಗಳನ್ನು ಮಕ್ಕಳ ಮನಸ್ಸಿಗೆ ತುಂಬಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕಾದ ದೊಡ್ಡ ಜವಾ ಬ್ದಾರಿ ನಮ್ಮ ಮುಂದಿದೆ ಎಂದರು.
ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ದ್ದವರು. ಈಗಿನ ಮಂತ್ರಿಗಳು, ರಾಜಕಾರಣಿಗಳು ಬಸವಣ್ಣ ನವರ ಆದರ್ಶ ರೂಢಿಸಿಕೊಂಡರೆ ಸಮಾಜದಲ್ಲಿ ಉನ್ನತ ಬದಲಾವಣೆ ಆಗಲಿದೆ. ಆದರೆ ಇಂದು ಸ್ವಾಮೀಜಿ ಸ್ಥಾನದಲ್ಲಿರುವವರೇ ನಮ್ಮ ಸಮುದಾಯದವರನ್ನು ಮಂತ್ರಿ ಮಾಡಿ ಎಂದು ವೇದಿಕೆಯಲ್ಲಿ ಆಗ್ರಹಿಸುತ್ತಿ ದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ಯಾಲರಿ ಸ್ಥಾಪಕ ಅಧ್ಯಕ್ಷ ಎಲ್.ಶಿವಲಿಂಗಪ್ಪ ಮಾತ ನಾಡಿ, 2019ರ ಏಪ್ರಿಲ್‍ನಿಂದ ಡಿಸೆಂಬರ್‍ವರೆಗೂ ಮೈಸೂರು ನಗರ, ಗ್ರಾಮಾಂತರ ಭಾಗದ 70ಕ್ಕೂ ಹೆಚ್ಚು ಶಾಲೆಗಳಲ್ಲಿ ಬಸವಣ್ಣನವರ ರೇಖಾಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆ ನಡೆಸಿದ್ದೇವೆ ಎಂದರು. ಸ್ಪರ್ಧೆಯಲ್ಲಿ ಉತ್ತಮ ಫಲಿ ತಾಂಶ ಪಡೆದ ಶಾಲೆಗಳಿಗೆ ಪ್ರಾಯೋಜಕತ್ವದಲ್ಲಿ 4 ವಿಶೇಷ ಬಹುಮಾನ ನೀಡಲಾಯಿತು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಮೈಸೂರು ವಿವಿ ಬಸವೇಶ್ವರ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಚಂದ್ರಶೇಖ ರಯ್ಯ, ಸಾಹಿತಿ ಬನ್ನೂರು ಕೆ.ರಾಜು, ಪತ್ರಕರ್ತ ಶಿವ ಮೂರ್ತಿ ಜುಪ್ತಿಮಠ ಮತ್ತಿತರರು ಹಾಜರಿದ್ದರು.