ಆಲೂರಿನಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯನವರ ಸಂಸ್ಮರಣೆ
ಚಾಮರಾಜನಗರ

ಆಲೂರಿನಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯನವರ ಸಂಸ್ಮರಣೆ

February 14, 2019

ಚಾಮರಾಜನಗರ: ಮಾಜಿ ರಾಜ್ಯಪಾಲ ದಿವಂಗತ ಬಿ. ರಾಚಯ್ಯ ಅವರ 19ನೇ ವರ್ಷದ ಸಂಸ್ಮರಣಾ ಯನ್ನು ರಾಚಯ್ಯನವರ ಸ್ಮಾರಕ ನಿರ್ಮಾಣ ಕಾಮಗಾರಿ ತಾಲೂ ಕಿನ ಆಲೂರಿನ ತೋಟದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಪಂ ಸದಸ್ಯ ಆರ್. ಬಾಲರಾಜು, ಕುಟುಂಬದವರು ಮತ್ತು ಅಭಿಮಾನಿಗಳು ಗುರುವಾರ ಸರಳವಾಗಿ ಪೂಜೆ ಸಲ್ಲಿಸಿ, ರಾಚಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಪ್ರತಿ ವರ್ಷದಂತೆ ಈ ಬಾರಿಯು ರಾಚಯ್ಯ ಅವರ ಪುಣ್ಯ ಭೂಮಿಗೆ ತೆರಳಿ ಅವರ ಪುತ್ರುರು, ಪುತ್ರಿಯರು ಮತ್ತು ಕುಟುಂಬದವರು ಪೂಜೆ ಸಲ್ಲಿಸಿ ರಾಚಯ್ಯ ಅವರ ನೆನಪು ಮಾಡಿಕೊಂಡರು. ಈ ಭಾಗದ ಅನೇಕ ಮುಖಂಡರು ಹಾಗೂ ಅಭಿಮಾನಿಗಳು ತೆರಳಿ ಪುಷ್ಪ ನಮನ ಸಲ್ಲಿಸಿದರು. ದಡದಹಳ್ಳಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಹೊಂಗನೂರಿನ ಮಣಿ ಮಾಸ್ಟರ್ ಮಾತನಾಡಿ, ಮಾಜಿ ರಾಜ್ಯಪಾಲ ದಿವಗಂತ ಬಿ. ರಾಚಯ್ಯ ಅವರು ಮೇರು ವ್ಯಕ್ತಿತ್ವಯುಳ್ಳವರಾಗಿದ್ದಾರೆ. ಚಂದಕವಾಡಿ ಹಾಗು ಆಲೂರು ಭಾಗದಲ್ಲಿ ಹೆಚ್ಚಿನ ಕಾರ್ಯ ಗಳನ್ನು ಮಾಡುವ ಮೂಲಕ ಜನ ಮಾನಸದಲ್ಲಿ ಇನ್ನು ಸಹ ಉಳಿಸಿದ್ದಾರೆ. ರಾಚಯ್ಯ ಅವರು ಮೈಸೂರು ಪ್ರಾಂತ್ಯ ದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅವಿಭಾಜಿತ ಮೈಸೂರು ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿ ದ್ದರು. ಸಚಿವ ಸಂಪುಟದಲ್ಲಿ ಎಲ್ಲಾ ಖಾತೆಯನ್ನು ನಿಭಾ ಯಿಸುವ ಜೊತೆಗೆ ಉತ್ತಮ ಹೆಸರು ಪಡೆದುಕೊಂಡಿ ದ್ದರು. ಹೊಂಗನೂರು ಹಿರಿಕೆರೆ ಏತ ನೀರಾವರಿ, ಸೇರಿದಂತೆ ಹೆಚ್ಚಿನ ಒತ್ತು ನೀಡುತ್ತಿದ್ದ ಮಹಾನ್ ಪುರುಷರು ಎಂದು ಗುಣಗಾನ ಮಾಡಿದರು. ಜಿಪಂ ಸದಸ್ಯ ಸಿ.ಎನ್. ಬಾಲರಾಜು ಮಾತನಾಡಿ, ರಾಚಯ್ಯ ಅವರು ಸರಳ ವ್ಯಕ್ತಿತ್ವಯುಳ್ಳರಾ ಗಿದ್ದು, ಸಾಮಾಜಿಕ ನ್ಯಾಯವನ್ನು ಪಾಲನೆ ಮಾಡಿದ ನಾಯ ಕರು. ಸಾಮಾಜಿಕ ಬದಲಾವಣೆ ಹಾಗು ದಲಿತರು, ಹಿಂದು ಳಿದವರು ಹಾಗು ಬಡವ ವರ್ಗದ ಪರವಾಗಿ ದುಡಿದ ವರು. ಜಿಲ್ಲೆಯ ಅಭಿವೃದ್ದಿಯಲ್ಲಿ ಅವರ ಪಾತ್ರ ಮಹತ್ವದಾ ಗಿದೆ. ಇಂಥ ನಾಯಕರು ಮತ್ತೊಮ್ಮೆ ಹುಟ್ಟಿ ಬರಲಿ. ಅವರ ಪುತ್ರರಾದ ಕೃಷ್ಣಮೂರ್ತಿ, ಬಾಲರಾಜು ಅವರು ರಾಚಯ್ಯ ಅವರ ಹಾದಿಯಲ್ಲಿ ಸಾಗುತ್ತಿದ್ದು, ಅವರಿಗೆ ರಾಜಕೀಯ ಯಶಸ್ಸು, ಜನರ ಆಶೀರ್ವಾದ ಹೆಚ್ಚು ದೊರೆಯಲಿ ಎಂದರು

ಜಿಪಂ, ಮಾಜಿ ಅಧ್ಯಕ್ಷ ಆಲೂರು ನಟರಾಜು ಮಾತನಾಡಿ, ಸುಮಾರು ಮೂರು ದಶಕಗಳ ಕಾಲ ರಾಚಯ್ಯನವರ ಒಡನಾಟ ಇತ್ತು. ಅವರ ಶಿಷ್ಯರಾಗಿ ರಾಜಕೀಯ ಏಳಿಗೆಗೆ ದುಡಿದ ಖುಷಿ, ಆಲೂರು ಗ್ರಾಮದಲ್ಲಿ ಜನಿಸಿದ್ದ ರಾಚಯ್ಯ ಅವರು ಉತ್ತಮ ಸೇವೆ ಸಲ್ಲಿಸುವ ಮೂಲಕ ದೇಶವೇ ಆಲೂರಿನತ್ತ ನೋಡುವಂತೆ ಮಾಡಿದವರು ಎಂದರು.

ಜಿಪಂ ಸದಸ್ಯ ಹಾಗೂ ರಾಚಯ್ಯನವರ ಕಿರಿಯ ಪುತ್ರ ಆರ್. ಬಾಲರಾಜು ಅವರು ಮಾತನಾಡಿ, ಪೂಜ್ಯ ತಂದೆ ಯವರಾದ ಬಿ.ರಾಚಯ್ಯ ಅವರು ನಮ್ಮನ್ನಗಲಿ ಇಂದಿಗೆ 19 ವರ್ಷಗಳು ಕಳೆದವು. ಅವರ ಸಂಸ್ಮರಣೆ ದಿನವಾದ ಇಂದು ಸ್ಮಾರಕ ನಿರ್ಮಾಣ ಕಾಮಗಾರಿ ನಡೆಯು ತ್ತಿರುವ ಕಾರಣಕ್ಕಾಗಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಪೂಜ್ಯ ರಾಚಯ್ಯ ಅವರು ಈ ಭಾಗದಲ್ಲಿ ದೀನ ದಲಿತರು, ಹಿಂದು ಳಿದ ವರ್ಗದವರು ಹಾಗು ಎಲ್ಲಾ ವರ್ಗದ ಬಡವರ ಅಭಿ ವೃದ್ದಿಗಾಗಿ ಶ್ರಮಿಸಿದ್ದರು. 1952ರಿಂದ ಇಲ್ಲಿಯ ತನಕ ಬಿ. ರಾಚಯ್ಯ ಅವರ ಕುಟುಂಬದ ಬಗ್ಗೆ ಅಪಾರವಾದ ಅಭಿಮಾನ ವನ್ನು ಹೊಂದಿ ಅವರನ್ನು ರಾಜಕೀಯಾಗಿ ಬೆಳೆಸಿ ಕೊಂಡು ಬರುವ ಜೊತೆಗೆ ಉತ್ತಮ ಸೇವೆಯನ್ನು ಸಲ್ಲಿಸು ವಂತಹ ವಾತಾವರಣವನ್ನು ತಾವುಗಳು ನೀಡಿದ್ದೀರಿ. ಮುಂದೆಯೂ ಸಹ ಇದೇ ರೀತಿಯ ಪ್ರೀತಿ ಅಭಿಮಾನ ನಮ್ಮ ಕುಟುಂಬದ ಪರವಾಗಿ ಇರಲಿ. ರಾಜಕೀಯ ಅಧಿಕಾರ ಬರುತ್ತದೆ, ಹೋಗು ತ್ತದೆ. ಅದರೆ, ಜನರ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಮ್ಮ ಕುಟುಂಬ ನಡೆದುಕೊಂಡು ಬರುತ್ತಿದೆ. ಮುಂದೆ ಒಳ್ಳೆಯ ದಿನಗಳು ಬರಲಿದೆ. ಸಮಾಧಾನದಿಂದ ಕಾಯುವ ಮನೋ ಭಾವವನ್ನು ನಾವೆಲ್ಲರು ಬೆಳೆಸಿಕೊಳ್ಳೋಣ ಎಂದರು.

ಕಾರ್ಯಕ್ರಮದಲ್ಲಿ ಕೋಡಿಮೋಳೆ ರಾಜಶೇಖರ್, ಎಸ್. ಸೋಮನಾಯಕ, ಆಲೂರು ಪ್ರವೀಣ್, ಹೊಂಗನೂರು ಪುಟ್ಟ ಸ್ವಾಮಿ, ಆರ್.ಮಹದೇವ್, ಪ್ರಭುಪ್ರಸಾದ್, ಟಿ.ನಿಂಗಯ್ಯ, ತಾಪಂ ಮಾಜಿ ಅಧ್ಯಕ್ಷ ಹೊಂಗನೂರು ಚಂದ್ರು, ಸದಸ್ಯರಾದ ಗೌಡರ ಮಹದೇವಸ್ವಾಮಿ, ಸಿ.ಮಹದೇವ್, ನಾಗಸುಂದ್ರಮ್ಮ, ಮಾಜಿ ಸದಸ್ಯ ಉಮ್ಮತ್ತೂರು ನಾಗೇಶ್, ಅಲೂರು ರಮೇಶಬಾಬು, ಆಲೂರು ನಾಗೇಂದ್ರ, ಪ್ರದೀಪ್, ಅಣಗಹಳ್ಳಿ ಬಸವರಾಜು, ದಡದಹಳ್ಳಿ ಗೋವಿಂದರಾಜು, ಕಮರವಾಡಿ ರೇವಣ್ಣ, ಉಮ್ಮತ್ತೂರು ಶಿವಣ್ಣ, ಶ್ರೀಕಂಠಸ್ವಾಮಿ, ಮಹದೇವ ಪ್ರಸಾದ್ ಪಸಿ, ಕುಟುಂಬದವರಾದ ಎ.ಆರ್. ಪ್ರಭಾ, ಎ.ಆರ್.ವೇದಾವತಿ, ತ್ರಿವೇಣಿ, ಆರತಿ, ಉಮಾ, ಜಿಪಂ ಸದಸ್ಯ ನಿಕಲ್ ಚಕ್ರವರ್ತಿ, ಶ್ರೀವರ್ಧನ್, ರೋಷಿಣಿ, ಎಸ್.ಮಹದೇವಯ್ಯ, ಎ.ಎಸ್.ಮಲ್ಲಣ್ಣ, ಹೊಂಗನೂರು ಚೇತನ್ ಮೊದಲಾಧವರು ಇದ್ದರು.

Translate »