ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಉಳಿಸಿ: ಶಾಸಕರ ಕರೆ
ಚಾಮರಾಜನಗರ

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಉಳಿಸಿ: ಶಾಸಕರ ಕರೆ

June 18, 2018

ಗುಂಡ್ಲುಪೇಟೆ: ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಮಾರಕ ವಾಗುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆಯನ್ನು ನಾವು ನಿಲ್ಲಿಸುವುದ ರೊಂದಿಗೆ ಪರಿಸರದ ಸಮ ತೋಲನೆಯನ್ನು ಕಾಪಾಡಲು ಮುಂದಾಗಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ಪಟ್ಟಣದ ಪುರಸಭೆಯ ವತಿಯಿಂದ ಆಯೋಜಿಸಿದ್ದ ಪ್ಲಾಸ್ಟಿಕ್ ನಿಷೇಧ ಹಾಗೂ ಅವುಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದರು. ನಮ್ಮ ದಿನ ನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ.ಇದರಿಂದ ನಾವು ಪರಿಸರಕ್ಕೆ ಹಾನಿ ಮಾಡುತ್ತಿದ್ದೇವೆ ಎಂದು ಗೊತ್ತಿದ್ದರೂ ಸಹ ಒಮ್ಮೆ ತಾನೆ ಎಂದು ಪ್ಲಾಸ್ಟಿಕ್ ಕವರ್, ಲೋಟ ಇತ್ಯಾದಿಗಳನ್ನು ಬಳಕೆ ಮಾಡಿ ಬಿಡುತ್ತೇವೆ. ಆದರೆ ನಾವು ಬಳಸುವ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೇ ಇರುವುದರಿಂದ ಅದು ಹಾಗೆಯೇ ಇರುವ ಕಾರಣ ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಎಂದರು.

ಆದ್ದರಿಂದ ನಾವು ಇನ್ನು ಮುಂದೆಯಾ ದರೂ ಸಹ ಪ್ರತಿ ನಿತ್ಯದ ಪ್ಲಾಸ್ಟಿಕ್ ಬಳಕೆ ಯನ್ನು ನಿಷೇಧಿಸಿಕೊಂಡು ಪರಿಸರ ಸ್ನೇಹಿಯಾಗಿ ಬದುಕು ನಡೆಸಿದಾಗ ಮಾತ್ರ. ಉತ್ತಮ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ ಎಂದರು.

ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಪಿ.ಗಿರೀಶ್ ವಹಿಸಿ ಮಾತನಾಡುತ್ತ, ಪರಿಸರದ ಸಂರಕ್ಷಣೆಯ ದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಗೊಂಡಿದೆ. ಈ ನಿಟ್ಟಿನಲ್ಲಿ ಪುರಸಭೆ ಸಿಬ್ಬಂದಿ ಗಳು ಪಟ್ಟಣದ ಹಲವು ಅಂಗಡಿಗಳಿಗೆ ದಿಢೀರ್ ದಾಳಿ ನಡೆಸುವುದರೊಂದಿಗೆ ಪ್ಲಾಸ್ಟಿಕ್ ಲೋಟ, ಕವರ್, ರೋಲ್ ಸೇರಿದಂತೆ ಹಲವು ಪ್ಲಾಸ್ಟಿಕ್ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಪದಾರ್ಥ ಗಳನ್ನು ಮಾರಾಟ ಮತ್ತು ಬಳಕೆಯಿಂದ ಆಗುವ ಪರಿಣಾಮಗಳ ಬಗ್ಗೆ ಪುರಸಭೆ ಬೀದಿನಾಟಕವನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಪುಟ್ಟರಂಗನಾಯಕ್, ಸದಸ್ಯ ಎನ್.ರಮೇಶ್, ಮಲ್ಲರಾಜು, ಕುಮಾರ್, ಮುಖ್ಯಾಧಿಕಾರಿ ಎ.ರಮೇಶ್, ಪರಿಸರ ಇಂಜಿನಿಯರ್ ಸಾಗರ್, ಕಿರಿಯ ಇಂಜಿನಿ ಯರ್ ಮಂಜುನಾಥ್, ಆರೋಗ್ಯ ನಿರೀಕ್ಷಕ ಗೋಪಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Translate »