ಡಾ.ವಿ.ರಂಗನಾಥ್ ಅವರ ‘ಸಿಂದೂ ದರ್ಶನ’ ಕೃತಿ ಬಿಡುಗಡೆ
ಮೈಸೂರು

ಡಾ.ವಿ.ರಂಗನಾಥ್ ಅವರ ‘ಸಿಂದೂ ದರ್ಶನ’ ಕೃತಿ ಬಿಡುಗಡೆ

July 8, 2019

ಮೈಸೂರು,ಜು.7-ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ವಿಜಯ ಪೌಂಡೇಷನ್ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯ ಕ್ರಮದಲ್ಲಿ ಸ್ವಾಮಿ ದಯಾನಂದ ಸರಸ್ವತಿ ಯವರ ಕುರಿತಾದ ಲೇಖಕ ಅವಿನಾಶ ಲಿಂಗಮ್ ಅವರ ‘ಲೈಟ್ ಆನ್ ವೇದಾಂತ’ ಹಾಗೂ ‘ಮೈಸೂರು ಮಿತ್ರ’ ಪತ್ರಿಕೆ ಅಂಕಣ ಕಾರ ಡಾ.ವಿ.ರಂಗನಾಥ್ ಅವರ ‘ಸಿಂದೂ ದರ್ಶನ’ ಕೃತಿಗಳನ್ನು ಆರ್ಷ ವಿದ್ಯಾ ಪೀಠದ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಸ್ವಾಮಿ ದಯಾನಂದ ಸರಸ್ವತಿಯವರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ವೇದಾಂತ ಸಾಗರವೆಂದೇ ಪ್ರಸಿದ್ದವಾದ ಸಿಂದೂ ನದಿಯ ಕುರಿತಾದ ಎರಡು ಪುಸ್ತಕಗಳನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಎರಡು ಪುಸ್ತಕಗಳು ಒಂದಕ್ಕೊಂಡು ಅವಿನಾಭಾವ ಸಂಬಂಧವನ್ನು ಹೊಂದಿದ್ದು ಅತ್ಯುತ್ತಮ ಕೃತಿಗಳಾಗಿವೆ ಎಂದು ಹೇಳಿದರು.

ಸಿಂದೂ ನದಿ ಪವಿತ್ರ ನದಿಯಾಗಿದ್ದು, ಪ್ರತಿಯೊಬ್ಬರು ನೋಡಬೇಕು. ಅದಕ್ಕಿಂತ ಮೊದಲು ಪ್ರವಾಸದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಿಂದೂ ನದಿಯ ದರ್ಶನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಸಿಂದೂ ನದಿಯ ಇತಿಹಾಸವನ್ನು ಅರಿಯಲು ‘ಸಿಂದೂ ದರ್ಶನ’ ಕೃತಿ ಸಹಕಾರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಲೇಖಕ ಅವಿನಾಶಲಿಂಗಮ್, ಅಂಕಣಕಾರ ಡಾ.ವಿ.ರಂಗನಾಥ್, ವಿಜಯ ಪೌಂಡೇ ಷನ್‍ನ ಮುಖ್ಯಸ್ಥ ಬಿ.ಆರ್.ಪೈ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು

Translate »