ಮೈಸೂರು,ಜ.17-ಖ್ಯಾತ ಸಂಗೀತ ವಿದ್ವಾನ್ `ಮಹಾಮಹೋಪಾಧ್ಯಾಯ’ ಡಾ. ಆರ್.ಸತ್ಯನಾರಾಯಣ ಅವರು ನಿನ್ನೆ ರಾತ್ರಿ 9.45ರ ಸಮಯದಲ್ಲಿ ಮೈಸೂರಿನ ಜಯ ನಗರದ ಸಂಕೇತಿ ಹಾಸ್ಟೆಲ್ ಬಳಿಯಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಡಾ. ಸತ್ಯನಾರಾಯಣ ಅವರು ಪುತ್ರ ಆರ್.ಎಸ್.ನಂದಕುಮಾರ್, ಪುತ್ರಿ ರೋಹಿಣಿ ಸುಬ್ಬರತ್ನಮ್, ಸೊಸೆ ಡಾ.ರಾಧಿಕಾ ನಂದ ಕುಮಾರ್, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಲ್ಲದೆ ಸಾವಿರಾರು ಮಂದಿ ಶಿಷ್ಯಂದಿರು ಹಾಗೂ ಲಕ್ಷಾಂತರ ಶ್ರೋತೃಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬೆಂಗಳೂರು ರಸ್ತೆ ಯಲ್ಲಿರುವ ಕೆಂಗಲ್ ಗ್ರಾಮದ `ಸಾಧನ ಧಾಮ’ದಲ್ಲಿ ಶುಕ್ರವಾರ ಸಂಜೆ ನೆರವೇ ರಿತು. ಈ ಧಾಮವು ಕಣ್ವ ಜಲಾಶಯದ ಹಿಂಭಾಗದಲ್ಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಹಾಮಹೋಪಾಧ್ಯಾಯ ಡಾ. ಸತ್ಯ ನಾರಾಯಣ ಅವರು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಸಂಗೀತಗಾರರಾಗಿದ್ದು, ಸಂಯೋಜಕ ಸಂತ ಸದ್ಗುರು ತ್ಯಾಗ ರಾಜರ ಪರಂಪರೆಗೆ ಸೇರಿದವರಾಗಿದ್ದಾರೆ. ಮೂಲತಃ ರಾಮನಗರದವರಾದ ಇವರು ಮೇ 9, 1927ರಂದು ಜನಿಸಿದರು.
ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ ಪಡೆದ ಇವರು, ಉಪಾಧ್ಯಾಯರು, ಸಂಶೋಧ ಕರು, ಆಡಳಿತಗಾರರು, ವಾಗ್ಮಿಗಳು, ಬರಹ ಗಾರ ಮತ್ತು ಹಲವಾರು ದಶಕಗಳಿಂದ ಶೋಷಣೆಗೊಳಗಾದವರಿಗೆ ಮಾರ್ಗ ದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಹಲವಾರು ಸಂಶೋಧನಾ ಪ್ರಬಂಧ ಹಾಗೂ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅವರ ಒಟ್ಟು ಪ್ರಕಟಣೆಗಳು ಸುಮಾರು 20,000 ಮುದ್ರಿತ ಪುಟಗಳನ್ನು ಮೀರಿವೆ. ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿನ ಇವರ ಅಸಾಧಾ ರಣ ಕೊಡುಗೆಯನ್ನು ಗುರುತಿಸಿ ಇವರಿಗೆ 2018 ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಅಲ್ಲದೆ ಡಾ.ಸತ್ಯನಾರಾಯಣ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಫೆಲೋ ಸಂಗೀತ ನಾಟಕ ಅಕಾಡೆಮಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, ಚೆನ್ನೈನ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಶಾಸ್ತ್ರಜ್ಞ ಹಾಗೂ ಇನ್ನೂ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೈಸೂರಿನ ಶಾರದಾ ವಿಲಾಸ ಕಾಲೇ ಜಿನಲ್ಲಿ 1949 ಮತ್ತು 1984ರ ನಡುವೆ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಹಾಗೂ ಕರ್ನಾಟಕ ಸಂಗೀತವನ್ನೂ ಕೂಡ ಬೋಧಿ ಸಿದ್ದಾರೆ. ಇವರು ನೃತ್ಯ ಮತ್ತು ಸಂಗೀ ತದ ಮೇಲೆ ಸಂಸ್ಕøತ ಭಾಷೆಯಲ್ಲಿ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ. ಅವುಗಳಲ್ಲಿ `ಪುಂಡರಿಕಮಲ, ಶ್ರುತಿ : ದಿ ಸ್ಕಾಲಿಕ್ ಫೌಂಡೇಷನ್, ಸುಲಾಡಿಸ್ ಅಂಡ್ ಉಗಬೋಗಾಸ್ ಆಫ್ ಕರ್ನಾ ಟಕ ಮ್ಯೂಸಿಕ್ ಮತ್ತು ಕರ್ನಾಟಕ ಸಂಗೀತ ವಾಹಿನಿ ಇವರ ಪ್ರಮುಖ ಕೃತಿಗಳಾಗಿವೆ.