ರಾಷ್ಟ್ರೀಯ ಜಾನುವಾರು ಗಣತಿಗೆ ಸಹಕರಿಸಲು ಮನವಿ
ಚಾಮರಾಜನಗರ

ರಾಷ್ಟ್ರೀಯ ಜಾನುವಾರು ಗಣತಿಗೆ ಸಹಕರಿಸಲು ಮನವಿ

October 5, 2018

ಚಾಮರಾಜನಗರ:  ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಕೃಷಿ ಮಂತ್ರಾಲಯದ ವತಿಯಿಂದ ಜಿಲ್ಲೆಯಲ್ಲಿ 20ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯ ಕ್ರಮವನ್ನು ಆರಂಭಿಸಿದ್ದು, ಡಿಸೆಂಬರ್ 31ರವರೆಗೆ ನಡೆಯಲಿದೆ. ಈ ಸಮಯದಲ್ಲಿ ರೈತರು, ಜಾನುವಾರು ಮಾಲೀಕರು ಮಾಹಿತಿ ನೀಡಿ ಸಹಕರಿಸುವಂತೆ ಕೋರಲಾಗಿದೆ.

ಜಾನುವಾರು ಗಣತಿದಾರರು ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶದ ಎಲ್ಲ ಮನೆಗಳಿಗೆ ತೆರಳಿ ಜಾನುವಾರುಗಳು ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವರು.

ಈ ಮಾಹಿತಿಯು ಯೋಜನೆಗಳ ನಿರೂಪಣೆ, ಜಾನುವಾರು ಆರೋಗ್ಯ ರಕ್ಷಣೆ, ಹೊಸ ಪಶು ಚಿಕಿತ್ಸಾಲಯಗಳ ಪ್ರಾರಂಭ, ಜಾನುವಾರು ತಳಿ ಅಭಿವೃದ್ಧಿ, ಮೀನುಗಾರಿಕೆ ಅಭಿವೃದ್ಧಿ ಮುಂತಾದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಕ್ಷೇತ್ರಗಳ ಸಮಗ್ರ ಹಾಗೂ ಸರ್ವಾಂಗೀಣ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅತ್ಯಗತ್ಯವಾಗಿರುತ್ತದೆ.

Translate »