ಸಮರ್ಪಕ ಕಸ ವಿಲೇವಾರಿಗೆ ನಿವಾಸಿಗಳ ಆಗ್ರಹ
ಮೈಸೂರು

ಸಮರ್ಪಕ ಕಸ ವಿಲೇವಾರಿಗೆ ನಿವಾಸಿಗಳ ಆಗ್ರಹ

July 10, 2019

ಮೈಸೂರು,ಜು.9(ಎಂಕೆ)-ಕಸ ವಿಲೇ ವಾರಿ ಮಾಡುವ ನಗರಪಾಲಿಕೆ ವಾಹನ ಗಳು ರಸ್ತೆಯಲ್ಲೆಲ್ಲಾ ಕಸ ಚೆಲ್ಲಾಡು ವುದರಿಂದ ಪಾದಚಾರಿಗಳಿಗೆ ತೊಂದರೆ ಯಾಗುತ್ತಿದ್ದು, ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದು ವಿದ್ಯಾರಣ್ಯ ಪುರಂ ನಿವಾಸಿಗಳು ಆಗ್ರಹಿಸಿದ್ದಾರೆ.

ನಗರದ ಎಲ್ಲಾ ವಾರ್ಡಿನ ಕಸವನ್ನು ವಿದ್ಯಾರಣ್ಯಪುರಂ 2ನೇ ಮುಖ್ಯ ರಸ್ತೆ ಹಾಗೂ ಸುಯೇಜ್ ಫಾರಂ ರಸ್ತೆ ಮೂಲ ಕವೇ ಎಕ್ಸೆಲ್ ಪ್ಲಾಂಟ್‍ಗೆ ಸಾಗಿಸಲಾಗು ತ್ತದೆ. ದಿನದಲ್ಲಿ ನೂರಾರು ವಾಹನಗಳು ಕಸ ಸಾಗಿಸುವುದರಿಂದ ರಸ್ತೆಯ ಇಕ್ಕೆಲ ಗಳಲ್ಲಿ ಕಸ ಬೀಳುತ್ತಿದೆ. ಅಲ್ಲದೆ ಸುಯೇಜ್ ಫಾರಂ ರಸ್ತೆಯಲ್ಲಿ 5 ಶಾಲೆಗಳು ಹಾಗೂ ವೃದ್ಧಾಶ್ರಮವಿದ್ದು, ಮಕ್ಕಳು ಮತ್ತು ಹಿರಿಯ ನಾಗರಿಕರು ತಿರುಗಾಡಲು ತೊಂದರೆಯಾ ಗುತ್ತಿದೆ ಎಂದು ಆರೋಪಿಸಿದ್ದಾರೆ.

ಪರ್ಯಾಯ ಮಾರ್ಗವಿದೆ: ಕಸ ವಿಲೇ ವಾರಿಯನ್ನು ನಂಜನಗೂಡು ಹಾಗೂ ಮಾನಂದವಾಡಿ ರಸ್ತೆಯ ಮೂಲಕ ಮಾಡ ಬಹುದು. ಈ ರಸ್ತೆಗಳಲ್ಲಿ ವಾಹನಗಳು ಬಿಟ್ಟರೆ ಪಾದಚಾರಿಗಳ ಸಂಚಾರ ಕಡಿಮೆ ಇದೆ. ಅಲ್ಲದೆ ರಸ್ತೆಗಳು ವಿಶಾಲವಾಗಿದ್ದು, ಯಾವುದೇ ಅನಾಹುತಗಳು ಸಂಭವಿ ಸುವುದಿಲ್ಲ. ಆದರೆ, ಎಕ್ಸೆಲ್ ಪ್ಲಾಂಟ್‍ಗೆ ಹತ್ತಿರವಿರುವ ಕಾರಣಕ್ಕೆ ಈ ಮಾರ್ಗದಲ್ಲಿ ಸಂಚರಿಸುತ್ತಿವೆ ಎನ್ನುತ್ತಿದ್ದಾರೆ.

ಯಾರು ಕೇಳುವವರಿಲ್ಲ: ಬೆಳಿಗ್ಗೆಯಿಂದ ಸಂಜೆವರೆಗೆ ಒಂದೇ ಸಮನೆ ಕಸ ವಿಲೇ ವಾರಿ ಲಾರಿಗಳು, ಟ್ರಾಕ್ಟರ್‍ಗಳು ಹಾಗೂ ಗೂಡ್ಸ್ ಆಟೋಗಳು ಓಡಾಡುತ್ತವೆ. ಈ ವೇಳೆ ಸಾಕಷ್ಟು ಅಪಘಾತಗಳು ನಡೆದಿವೆ. ಆದರೆ, ಯಾರು ಕೇಳುವವರಿಲ್ಲದೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಜನಪ್ರತಿ ನಿಧಿಗಳು ಕಣ್ಣರೇ ಕಂಡರು ಗೊತ್ತೆ ಇಲ್ಲ ದಂತೆ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಕಸ ಸಾಗಿಸುವ ವಾಹನಗಳಿಗೆ ನಂಬರ್ ಪ್ಲೇಟಿಲ್ಲ: ನಗರಪಾಲಿಕೆ ಕಸ ವಿಲೇವಾರಿ ಮಾಡುವ ವಾಹಗಳಲ್ಲಿ ಕೆಲವು ವಾಹನ ಗಳಿಗೆ ನಂಬರ್ ಪ್ಲೇಟ್ ಇಲ್ಲ. ಅಪ ಘಾತಗಳು ನಡೆದಾಗ ಯಾರನ್ನು ಕೇಳ ಬೇಕು, ವಾಹನ ಯಾರದ್ದು ಎಂಬುದೇ ತಿಳಿಯುವುದಿಲ್ಲ. ಅಲ್ಲದೆ ಕಂಡೀಷನ್ ಇಲ್ಲದ ವಾಹನಗಳ ಹೊಗೆಯಿಂದ ಉಸಿ ರಾಟಕ್ಕೂ ತೊಂದರೆಯಾಗುತ್ತಿದೆ. ಹತ್ತಿರ ದಲ್ಲಿಯೇ ಇರುವ ಎಕ್ಸೆಲ್ ಪ್ಲಾಂಟ್‍ನಿಂದ ದುರ್ವಾಸನೆ ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆಗಳ ಭಯದಲ್ಲಿ ಬದುಕುತಿದ್ದೇವೆ ಎಂದು ‘ಮೈಸೂರು ಮಿತ್ರ’ನಲ್ಲಿ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

Translate »