ಸಾಲಮನ್ನಾಕ್ಕೆ ಆಗ್ರಹಿಸಿ ರೈತರಿಂದ ರಸ್ತೆ ತಡೆ
ಮಂಡ್ಯ

ಸಾಲಮನ್ನಾಕ್ಕೆ ಆಗ್ರಹಿಸಿ ರೈತರಿಂದ ರಸ್ತೆ ತಡೆ

June 20, 2018

ಮಂಡ್ಯ: ರೈತರ ಎಲ್ಲಾ ಮಾದರಿಯ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿಂದು ಮೈಸೂರು ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾ ಸಮಿತಿ ನೇತೃತ್ವ ದಲ್ಲಿಂದು ಬೆಳಿಗ್ಗೆ ನಗರದ ಕಾವೇರಿ ವನದ ಎದುರು ಸಮಾವೇಶಗೊಂಡ ಪ್ರತಿಭಟ ನಾಕಾರರು ಅಲ್ಲೇ ಧರಣಿ ನಡೆಸಿ ರೈತರ ಸಾಲಮನ್ನಾಕ್ಕೆ ಮೀನಾಮೇಷ ಎಣಿಸುತ್ತಿ ರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಶಂಭೂನಹಳ್ಳಿ, ಹವಾಮಾನ ವೈಪರೀತ್ಯದಿಂದ ಮಳೆ ಇಲ್ಲದೆ ಕಳೆದ 16 ವರ್ಷಗಳಲ್ಲಿ 13 ಬರ ಗಾಲವನ್ನು ಕಂಡಿದ್ದೇವೆ. ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ 85 ಲಕ್ಷ ರೈತರು ಬ್ಯಾಂಕ್‍ಗಳಿಂದ ಕೃಷಿ ಸಾಲ ಪಡೆದಿದ್ದಾರೆ. ಪದೇ ಪದೇ ಎದು ರಾಗುತ್ತಿರುವ ಬರಗಾಲದಿಂದಾಗಿ ರೈತರ ಬದುಕು ಅತಂತ್ರವಾಗಿದೆ. ಬೆಳೆದ ಬೆಳೆಗೂ ಸೂಕ್ತ ಬೆಂಬಲ ಬೆಲೆಸಿಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅನ್ಯ ಮಾರ್ಗ ಗಳಿಲ್ಲದೇ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಬರಬೇಕಿದೆ. ಕೃಷಿ ಸಾಲಮನ್ನಾ ಮಾಡಿ ರಕ್ಷಿಸಬೇಕಿದೆ ಎಂದು ಆಗ್ರಹಿಸಿದರು.

ರೈತ ಬೆಳೆದ ಕಬ್ಬು, ಭತ್ತ, ರಾಗಿ, ರೇಷ್ಮೆ ಮತ್ತು ಹಾಲಿಗೆ ಸೂಕ್ತ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಪಡಿಸಬೇಕು. ರೈತರು ಮತ್ತು ಕಾರ್ಮಿಕರ ಜೀವನಾಡಿಯಾಗಿರುವ ಮೈಷುಗರ್ ಕಾರ್ಖಾನೆಯನ್ನು ತಕ್ಷಣ ದಿಂದಲೇ ಪ್ರಾರಂಭಿಸಬೇಕು. ಬಾಕಿ ಕಬ್ಬಿನ ಹಣವನ್ನು ಬಿಡುಗಡೆ ಮಾಡಬೇಕು. ಫಸಲು ಭೀಮಾ ಯೋಜನೆಯಡಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಒದಗಿಸಬೇಕೆಂದು ಅವರು ಒತ್ತಾಯಿ ಸಿದರು. ಹಾಲಿ ಬೆಳೆದಿರುವ ಬೆಳೆಗಳು ಸರಿಯಾದ ನೀರಿಲ್ಲದೆ ಒಣಗುತ್ತಿವೆ. ತಕ್ಷಣ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಒಣಗುತ್ತಿರುವ ಬೆಳೆ ರಕ್ಷಣೆಗ ಕೆಆರ್‍ಎಸ್‍ನಿಂದ ನೀರು ಬಿಡುಗಡೆ ಮಾಡಬೇಕು. ಮುಂದಿನ ಕೃಷಿಗೆ ಅನುಕೂಲ ವಾಗುವಂತೆ ಕೆರೆ ಕಟ್ಟೆಗಳಿಗೂ ನೀರು ತುಂಬಿಸಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಲತಾ, ಬೊಮ್ಮೇ ಗೌಡ, ಹರೀಶ್, ಬಳ್ಳಾರಿಗೌಡ, ರಾಜೇ ಗೌಡ ಮತ್ತಿತರರಿದ್ದರು.

Translate »