10 ಕೋಟಿ ವೆಚ್ಚದಲ್ಲಿ ಹಾರಂಗಿ ದುರಸ್ತಿ ಕಾಮಗಾರಿ
ಕೊಡಗು

10 ಕೋಟಿ ವೆಚ್ಚದಲ್ಲಿ ಹಾರಂಗಿ ದುರಸ್ತಿ ಕಾಮಗಾರಿ

May 29, 2018

ಕುಶಾಲನಗರ: ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹಾರಂಗಿ ಅಣೆಕಟ್ಟೆ ಯನ್ನು ರೂ.10 ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ಕಾವೇರಿ ಕಣ ವೆಯ ಪ್ರಮುಖ ಜಲಾ ಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾ ಶಯಕ್ಕೆ 35 ವರ್ಷಗಳ ಬಳಿಕ ಕಾಯಕಲ್ಪಕ್ಕೆ ಮುಂದಾಗಿರುವ ನೀರಾವರಿ ಇಲಾಖೆ ಸಂಪೂರ್ಣ ದುರಸ್ತಿ ಪಡಿಸುತ್ತಿದೆ.

ಜಲಾಶಯದಲ್ಲಿ ಪ್ರತಿ ವರ್ಷ ಮಳೆ ಗಾಲದಲ್ಲಿ ಜಲಾಶಯ ಭರ್ತಿಯಾದ ನಂತರ ಅಣೆಕಟ್ಟೆಯಲ್ಲಿ ನೀರು ಸೋರಿಕೆ ಯಾಗುತ್ತಿತ್ತು. ಈ ಬಗ್ಗೆ ನೀರಾವರಿ ಅಧಿ ಕಾರಿಗಳು ಕೂಡ ಸರ್ಕಾರಕ್ಕೆ ಅಣೆಕಟ್ಟೆ ರಿಪೇರಿಗಾಗಿ ಪ್ರಸ್ತಾವನೆ ಕೂಡ ಸಲ್ಲಿಸಿತ್ತು. ಈಗ ವಲ್ಡ್ ್ ಬ್ಯಾಂಕ್ ನೆರವಿನೊಂದಿಗೆ ಅಣೆಕಟ್ಟೆ ಹಾಗೂ ಗ್ರೇಸ್ಟ್ ಗೇಟ್ ಗಳ ಹಾಗೂ ನಾಲೆಗಳ ದುರಸ್ತಿ ಕಾರ್ಯ ಕೈಗೊಳ್ಳ ಲಾಗಿದ್ದು, ಈಗಾಗಾಲೇ ಬಹುತೇಕ ಕಾಮ ಗಾರಿ ಪೂರ್ಣಗೊಂಡಿದೆ.

ಎಸ್.ನಾರಾಯಣ ರೆಡ್ಡಿ ಎಂಬು ವವರು ದುರಸ್ತಿ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಇದೀಗ ದುರಸ್ತಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೇ 73 ರಷ್ಟು ಕೆಲಸ ಮುಗಿದಿದೆ. ಶೇ22 ರಷ್ಟು ಕಾಮಗಾರಿ ಬಾಕಿ ಉಳಿದಿದೆ. ಯಾದಗಿರಿ ಯಿಂದ 30 ಮಂದಿ ನುರಿತ ಕೆಲಸಗಾ ರರು ದುರಸ್ತಿ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ಈಗಾಗಲೇ.7.5 ಕೋಟಿ ಹಣ ಬಿಡುಗಡೆಯಾಗಿದ್ದು, ಉಳಿದ ಅನುದಾನ ಕಾಮಗಾರಿ ಪೂರ್ಣಗೊಂಡ ನಂತರ ಹಣ ಬಿಡುಗಡೆಯಾಗಲಿದೆ ಎಂದು ಅಣೆಕಟ್ಟೆ ವಿಭಾಗದ ಕಾರ್ಯ ಪಾಲಕ ಎಂಜಿನಿಯರ್ ಧರ್ಮರಾಜ್ ತಿಳಿಸಿದ್ದಾರೆ. ಅಣೆಕಟ್ಟೆ ಎಲ್ಲ ಕೆಲಸ ಕಾರ್ಯಗಳು ವಿಶ್ವಬ್ಯಾಂಕ್ ಅಧೀಕಾರಿಗಳ ನಿರ್ದೇಶನದಂತೆ ನಡೆಯುತ್ತಿದೆ. ಕೆಲಸ ಮುಗಿದ ನಂತರ ವಿದೇಶದಿಂದ ತಜ್ಞರ ಸಮಿತಿ ಬಂದು ಪರಿಶೀಲಿಸಲಿದೆ ಎಂದು ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ನಾಗರಾಜು ‘ಮೈಸೂರು ಮಿತ್ರ’ಗೆ ತಿಳಿಸಿದರು.

Translate »