ಹೆಚ್‍ಡಿಡಿ, ರೇವಣ್ಣಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ
ಅರಸೀಕೆರೆ: ಬೆಳೆ ನಾಶದಿಂದ ಆರ್ಥಿಕ ಸಂಕಷ್ಟದಲ್ಲಿರುವ ತೆಂಗು ಬೆಳೆಗಾರ ರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇ ಗೌಡ ಹಾಗೂ ಸಚಿವ ಹೆಚ್.ಡಿ.ರೇವಣ್ಣ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ ದಿಂದ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಕ್ಷೇತ್ರದ ರೈತರ ಪರ ವಾಗಿ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಶಾಸಕ ಕೆ.ಎಂ.ಶಿವಲಿಂಗೇ ಗೌಡ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ರಾಜ್ಯದ ತೆಂಗು ಬೆಳೆಗಾರರ ನೆರವಿಗೆ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 200 ಕೋಟಿ ಸಹಾಯ ಧನವನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಈ ಯೋಜನೆಯಡಿ ತಾಲೂಕಿಗೆ 32 ಕೋಟಿ ಅನುದಾನ ಸಂದಾಯವಾಗಿದೆ. ಈ ಪೈಕಿ 40,021 ಫಲಾನುಭವಿಗಳಿಗೆ ಮರ ಒಂದಕ್ಕೆ 400 ರೂ. ನಂತೆ ನೇರವಾಗಿ ರೈತನ ಖಾತೆಗೆ ಪರಿಹಾರದ ಹಣ ಜಮೆ ಆಗಲಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯ ಸಹ ಭಾಗಿತ್ವದಲ್ಲಿ ತೆಂಗು ಬೆಳೆ ಅಥವಾ ಬಹು ವಾರ್ಷಿಕ ಬೆಳೆಗಳಾದ ಸಪೋಟ, ದಾಳಿಂಬೆ, ಗೋಡಂಬಿ ಮತ್ತಿತರ ತೋಟಗಾರಿಕಾ ಬೆಳೆ ಗಳನ್ನು ಬೆಳೆಯಲು ಎಕರೆಗೆ 17 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಯೋಜ ನೆಗೆ ಈಗಾಗಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಾಲೂಕಿನಾದ್ಯಂತ ಸರ್ವೇ ಕಾರ್ಯ ಮುಗಿಸಿದ್ದಾರೆ. ಯೋಜನೆ ಅನು ಷ್ಠಾನಕ್ಕೆ ತಾಲೂಕಿಗೆ 65 ಕೋಟಿ ಅನು ದಾನ ಕೋರಿದ್ದು, ಸಂಬಂಧಿಸಿದ ಸಚಿ ವರು ಮುಖ್ಯಮಂತ್ರಿಗಳೊಂದಿಗೆ ಸಮಾ ಲೋಚಿಸಿದ್ದು, ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ. ಈ ಎರಡೂ ಯೋಜನೆಗಳು ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಪಾಲಿಗೆ ಆಶಾಕಿರಣವಾಗಿವೆ. ತಾಲೂಕಿನ ರೈತರು ಇದರ ಸದುಪ ಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮರ ಕಳೆದುಕೊಂಡಿರುವ ತೆಂಗು ಬೆಳೆ ಗಾರರು ಹಾಗೂ ಪುನಶ್ಚೇತನ ಯೋಜ ನೆಯಡಿ ಬಹುವಾರ್ಷಿಕ ಬೆಳೆ ಬೆಳೆಯುವ ಆಸಕ್ತಿ ಹೊಂದಿರುವ ರೈತರು ತೋಟ ಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ದಾಖಲೆ ನೀಡುವ ಮೂಲಕ ತಮ್ಮ ಹೆಸರು ನೋಂದಾಯಿಸಿ ಕೊಳ್ಳುವಂತೆ ಕರೆ ನೀಡಿದ ಶಾಸಕರು, ತಾಲೂಕಿನ ಒಬ್ಬ ತೆಂಗು ಬೆಳೆಗಾರರಿಗೂ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಇನ್ನೂ ಎಷ್ಟೇ ಅನುದಾನ ಬೇಕಾದರೂ ಮಂಜೂರು ಮಾಡಿಸಿಕೊಂಡು ತಂದು ತಾಲೂಕಿನ ರೈತರ ಋಣ ತೀರಿಸುತ್ತೇನೆ ಇದರಲ್ಲಿ ಅನುಮಾನ ಬೇಡ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಜೆಡಿಎಸ್ ಮುಖಂಡರಾದ ಎ.ಎಸ್. ರಂಗರಾಜು, ಮೈಲೇನಹಳ್ಳಿ ಜಗದೀಶ್, ಲಿಂಗರಾಜು, ಚಿಕ್ಕಬಾಣವಾರ ವೆಂಕ ಟೇಶ್, ಮತ್ತಿತರರು ಉಪಸ್ಥತರಿದ್ದರು.