ಈಡಿಗರ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ.
ಮೈಸೂರು

ಈಡಿಗರ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ.

September 7, 2018

ಹುಣಸೂರು:  ತಾಲೂಕು ಆರ್ಯ ಈಡಿಗರ ಸಂಘದ ಸಮುದಾಯ ಭವನ ನಿರ್ಮಿಸಲು ಸಂಸದರ ನಿಧಿಯಿಂದ 25ಲಕ್ಷ ಹಣ ನೀಡುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ಎರ್ಪಡಿಸಲಾಗಿದ್ದ ಶ್ರೀ ನಾರಾಯಣ ಗುರುಗಳ 164ನೇ ಜಯಂತೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿವೇಕನಾಂದ ಹಾಗೂ ನಾರಾಯಣಗುರು ಸಮಕಾಲೀನರು. ಸಮಾಜದ ಅಂಕು-ಡೊಂಕುಗಳನ್ನು ತೊಡೆದು ಹಾಕಲು ಬುದ್ದ-ಬಸವ-ಗಾಂಧಿ-ಅಂಬೇಡ್ಕರರಂತೆ ಸಮಾಜ ಮುಖಿ ಕೆಲಸಗಳಿಗೆ ತಮ್ಮನ್ನು ಮುಡುಪಾಗಿಸಿಕೊಂಡಿದ್ದರು ಎಂದರು.

ಕೇರಳ ರಾಜ್ಯದಲ್ಲಿ ಹಿಂದೂ ಧರ್ಮ ಉಸಿರಾಡುತ್ತಿದ್ದರೆ ನಾರಾಯಣಗುರು ಕಾರಣ ಎಂದು ಅವರು ಹೆಸರಿನ ಮುಂದೆ ಇರುವ ಸರ್ ನೇಮ್ ತೆಗೆಯಿರಿ ಆಗ ನಿಮ್ಮ ಜಾತಿ ಕಂಡುಹಿಡಿಯಲು ಸಾಧ್ಯವಿಲ್ಲ ಎಂದರು, ನಾವು ಮನುಷ್ಯರಾಗಿ ಹುಟ್ಟಿದ್ದೇವೆ ಮನುಷ್ಯತ್ವ ಹಾಗೂ ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ ಜಾತಿಯ ಹೆಸರನ್ನು ಹೇಳಲು ನಾಚಿಕೆ ಪಡುವ ಸ್ಥಿತಿಯಲ್ಲಿದ್ದಾಗ ಹುಟ್ಟಿದವರೇ ನಾರಾಯಣಗುರು ಅಂತಹವರ ಜಯಂತಿಯನ್ನು ಸಂಭ್ರಮದಿಂದ ಎಲ್ಲರೂ ಆಚರಿಸಬೇಕು ಎಂದರು. ಈಡಿಗರ ಕುಲದಲ್ಲಿ ಹುಟ್ಟಿದ ಡಾ.ರಾಜಕುಮಾರ್ ಹಾಗೂ ಬಂಗಾರಪ್ಪ ಸಮಾಜದ ಕಣ್ಮಣಿಗಳಾಗಿ ಸಮಾಜದ ಏಳಿಗೆಗೆ ದುಡಿದ ಮಹಾ ಪುರುಷರು ಅದೇ ರೀತಿ ಜನಾರ್ದನ ಪೂಜಾರಿಯು ಸಹ ಈ ಸಮಾಜಕ್ಕೆ ಸೇವೆ ಮಾಡಿದ್ದಾರೆಂದು ಸ್ಮರಿಸಿದರು.

ಸಮುದಾಯ ಭವನಕಟ್ಟಲು ಬೇಕಾದ ನಿವೇಶನಕ್ಕೆ ಸಂಬಂಧಿಸಿದಂತೆ ನಗರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಾಜದ ಮುಖಂಡರನ್ನು ಕರೆಸಿ ನಿವೇಶನ ಗುರುತಿಸಿ ಕೊಡುವ ಭರವಸೆ ನೀಡಿದರು, ನಗರದ ಯಾವುದಾದರು ಒಂದು ರಸ್ತೆಗೆ ಡಾ.ರಾಜ್‍ಕುಮಾರ್ ಹಾಗೂ ನಾರಾಯಣಗುರು ಹೆಸರು ಇಡುವ ವಿಚಾರಕ್ಕೆ ನಗರಸಭೆ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ತೀರ್ಥಹಳ್ಳಿ ನಾರಾಯಣಗುರು ಮಹಾ ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಸಮಾಜದ ಬಂಧುಗಳಿಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎಂ.ಕೆ.ಪೋತ್‍ರಾಜ್, ನಗರಸಭೆ ಅಧ್ಯಕ್ಷ ಎಂ.ಶಿವಕುಮಾರ್, ತಾ.ಪಂ ಅಧ್ಯಕ್ಷ ಪದ್ಮಮ, ಸಿಟಿ ಕೋ ಅಪರೇಟ್ ಬ್ಯಾಂಕ್‍ನ ನಿರ್ದೇಶಕ ಎಂ.ಧ್ರುವರಾಜ್, ಎಸ್.ಎನ್.ಡಿ.ಪಿ. ಅಧ್ಯಕ್ಷರಾದ ಸೈದಪ್ಪಗುತ್ತೇದಾರ್, ಈಡಿಗಯುವ ವೇದಿಕೆ ಅಧ್ಯಕ್ಷ ಸೋಮಶೇಖರ್, ದಿವಾಕರ್, ಜಿ.ಪಂ ಮಾಜಿ ಸದಸ್ಯರಾದ ಡಿ.ಕೆ.ಕುನ್ನೇಗೌಡ, ನಾಗರಾಜ್ ಮಾಲ್ಲಾಡಿ, ಬಿ.ಕೆ.ಪರಮೇಶ್, ಇ.ಓ. ಕೃಷ್ಣಕುಮಾರ್, ತಹಶೀಲ್ದಾರ್ ಮೋಹನ್‍ಕುಮಾರ್, ಮುಖಂಡರಾದ ನಗರಸಭೆ ಸದಸ್ಯ ಹೆಚ್,ವೈ.ಮಹದೇವು, ಮಾಜಿ ಸದಸ್ಯ ಶಿವಯ್ಯ, ಮಲ್ಲೇಶ್, ಚಿಕ್ಕಮಲ್ಲೇಗೌಡ, ಶಿವಪ್ಪ, ವಿಶ್ವನಾಥ್, ವಕೀಲ ವೆಂಕಟೇಶ್, ಹೆಚ್.ಟಿ.ಗೋವಿಂದರಾಜ್ ಮಂಡ್ಯಕುಮಾರ್, ಸುಮರಾಜ್‍ಕುಮಾರ್, ವಿಶ್ವನಾಥ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.ಇದಕ್ಕೂ ಮುನ್ನ ನಾರಾಯಣಗುರುಗಳ ಭಾವಚಿತ್ರದೊಂದಿಗೆ ನಗರದ ಪ್ರಮುಖ ರಸ್ತಗಳಲ್ಲಿ ವಿವಿಧ ಮಂಗಳವಾದ್ಯ ಗಳೊಂದಿಗೆ ಮೆರವಣೆಗೆ ನಡಸಿ ನಗರ ಸಭೆ ಮೈದಾನದಲ್ಲಿ ಸಮಾವೇಶಗೊಳ್ಳಲಾಯಿತು.

Translate »