ಕೊಳ್ಳೇಗಾಲ: ಆತ್ಮಹತ್ಯೆಗೆ ಶರಣಾದ ಇಬ್ಬರು ರೈತರ ಕುಟುಂಬಗಳಿಗೂ ತಲಾ 5 ಲಕ್ಷ ರೂ. ಪರಿಹಾರ ನೀಡಲು ರೈತ ಆತ್ಮಹತ್ಯಾ ಪರಿ ಹಾರ ಸಮಿತಿಯು ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಿದೆ.
ಸೆಪ್ಟಂಬರ್ 19ರಲ್ಲಿ ತೇರಂಬಳ್ಳಿ ಗ್ರಾಮದ ತಮ್ಮ ಮನೆಯಲ್ಲೆ ರೈತ ಲೋಕೇಶ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅದೇ ರೀತಿಯಲ್ಲಿ ಕೆಂಪನಪಾಳ್ಯ ಗ್ರಾಮ ದಲ್ಲಿ ಸೆಪ್ಟಂಬರ್ 25ರಂದು ರೈತ ಗುರು ಸ್ವಾಮಿ ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆ ಎರಡು ರೈತ ಕುಟುಂಬ ಗಳಿಗೂ ತಲಾ ಐದು ಲಕ್ಷದಂತೆ ಪರಿಹಾರ ನೀಡಲು ಮಂಗಳವಾರ ಉಪವಿಭಾಗಾಧಿ ಕಾರಿಗಳ ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ತೀರ್ಮಾನಿಸಲಾಯಿತು. ಈ ಸಂಬಂಧ ಬ್ಯಾಂಕ್‍ನಲ್ಲಿ ಅಡವಿಡಲಾಗಿದ್ದ ಆಭರಣ ಹಾಗೂ ಮಹಿಳಾ ಸಂಘಗಳು ಸಾಲ ಪಡೆದಿದ್ದಕ್ಕೆ ನೀಡಿದ ದಾಖಲೆಗಳನ್ನು ಪರಿಶೀಲಿಸಲಾಯಿತು.
ರೈತ ಲೋಕೇಶ್ ಅವರು ಲಕ್ಷಾಂತರ ರೂ. ಸಾಲ ಮಾಡಿದ್ದು, ಅದನ್ನು ತೀರಿ ಸಲು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿ ದ್ದರು. ಅಲ್ಲದೆ, 2.80 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಜಮೀನು ಭೋಗ್ಯಕ್ಕೆ ನೀಡಿದ್ದರು. ಬ್ಯಾಂಕ್ ನಲ್ಲಿಯೂ ಸಹಾ ಚಿನ್ನಾಭರಣವನ್ನು ಇಟ್ಟು 70ಸಾವಿರ ಸಾಲ ಪಡೆದಿರುವುದು ದೃಢ ಪಟ್ಟ ಹಿನ್ನೆಲೆ ಹಾಗೂ ಅದೇ ರೀತಿಯಲ್ಲಿ ಕೆಂಪನಪಾಳ್ಯ ಗ್ರಾಮದ ಗುರುಸ್ವಾಮಿ ಸಹ ತಮ್ಮ ಸೊಸೆ ಜ್ಯೋತಿ ಹೆಸರಲ್ಲಿ 25 ಸಾವಿರ ರೂ. ಸಾಲ, ನಬಾರ್ಡ್‍ನಲ್ಲಿಯೂ 50 ಸಾವಿರ ರೂ. ಹಾಗೂ ವರಮಹಾ ಲಕ್ಷ್ಮಿಸಂಘದಿಂದಲೂ 70ಸಾವಿರ ರೂ. ಸಾಲ ಪಡೆದಿರುವುದು ದೃಢಪಟ್ಟ ಹಿನ್ನೆಲೆ ಯಲ್ಲಿ ಎರಡು ಕುಟುಂಬಗಳಿಗೂ ಪರಿ ಹಾರ ನೀಡಬಹುದು ಎಂದು ಉಪವಿಭಾ ಗಾಧಿಕಾರಿ ಪೌಜಿಯಾ ತರುನ್ನಮ್ ಘೋಷಿ ಸಿದರು. ಅಲ್ಲದೆ ವಿಧವಾ ವೇತನ ಮಂಜೂರು ಮಾಡಲು ಸಹ ಆದೇಶಿಸಿದರು. ಸಭೆ ಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಯ್ಯ, ದಾಖಲೆಗಳನ್ನು ಪರಿ ಶೀಲಿಸಿದರೆ ಕಾನೂನು ಚೌಕಟ್ಟಿನಲ್ಲಿ ಪರಿ ಹಾರ ನೀಡಲು ಅವಕಾಶವಿದೆ. ಆತ್ಮಹತ್ಯೆ ಗೀಡಾದ ರೈತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಲಾಗಿದೆ. ಹಾಗಾಗಿ ಪರಿ ಹಾರ ನೀಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸಿಲ್ಜಾರ್ ರಾಯಪ್ಪ ಹುಣಸಗಿ, ಕೃಷಿ ಅಧಿಕಾರಿ ರಮೇಶ್ ಬಾಬು, ಗ್ರಾಮಾಂತರ ಠಾಣೆಯ ಪಿಎಸೈ ವನರಾಜು, ಆರೋ ಗ್ಯಾಧಿಕಾರಿ ಗೋಪಾಲ್, ಸಹಕಾರಿ ಬ್ಯಾಂಕ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ರಾವ್ ಇನ್ನಿತರರರು ಇದ್ದರು.