ಒಂದು ತಿಂಗಳ ಕಾಲ ಸಸಿ ನೆಡುವ `ಸಸ್ಯಾರಾಧನಾ’ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

ಒಂದು ತಿಂಗಳ ಕಾಲ ಸಸಿ ನೆಡುವ `ಸಸ್ಯಾರಾಧನಾ’ ಕಾರ್ಯಕ್ರಮಕ್ಕೆ ಚಾಲನೆ

June 6, 2019

ಮೈಸೂರು: ಹೆಬ್ಬಾ ಳಿನ 7 ವಾರ್ಡ್‍ಗಳಲ್ಲಿ ಪ್ರತಿ ವಾರ್ಡಿ ನಲ್ಲೂ ಒಂದು ತಿಂಗಳ ಅವಧಿಯಲ್ಲಿ ಸಾವಿರ ಸಸಿ ನೆಡುವ `ಸಸ್ಯಾರಾಧನಾ’ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಚಾಲನೆ ನೀಡಿದರು.
ಹೆಬ್ಬಾಳಿನ ಅನ್ನಪೂರ್ಣೇಶ್ವರಿ ದೇವ ಸ್ಥಾನ ಸಮೀಪದ ಖಾಲಿ ನಿವೇಶನದಲ್ಲಿ ಬೇವಿನ ಗಿಡವೊಂದನ್ನು ನೆಡುವ ಮೂಲಕ ಸಚಿವ ಜಿ.ಟಿ.ದೇವೇಗೌಡ ಮಹತ್ವದ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.

ವಿದ್ಯಾವರ್ಧಕ ಸಂಘ, ನವಭಾರತ್ ನಿರ್ಮಾಣ್ ಸೇವಾ ಟ್ರಸ್ಟ್ ಹಾಗೂ ಮತ್ತಿತ ರರ ಸಂಘ ಸಂಸ್ಥೆಗಳು ಮತ್ತು 7 ವಾರ್ಡಿನ ಪಾಲಿಕೆ ಸದಸ್ಯರ ಸಹಕಾರ ದೊಂದಿಗೆ `ಸಸ್ಯಾ ರಾಧನಾ ಸಮಿತಿ’ ರಚಿಸಿಕೊಂಡು ಈ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ.

ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ ಸಸ್ಯಾರಾಧನಾ ಸಮಿತಿ ಸಂಚಾಲಕರಾಗಿ ಕಾರ್ಯನಿರ್ವಹಿಸು ತ್ತಿದ್ದು, ಈ 7 ವಾರ್ಡ್‍ಗಳ ಖಾಲಿ ನಿವೇ ಶನ, ಮನೆ ಆವರಣ ಹಾಗೂ ರಸ್ತೆ ಬದಿಗಳಲ್ಲಿ ಗಿಡ ನೆಡಲು ಸಿದ್ಧತೆ ನಡೆದಿದೆ. ಒಂದು ತಿಂಗಳ ಅವಧಿಯಲ್ಲಿ ಪ್ರತಿ ವಾರ್ಡಿ ನಲ್ಲಿ ಸಾವಿರ ಸಸಿ ನೆಡಲು ಗುರಿ ಹಾಕಿಕೊಳ್ಳಲಾಗಿದೆ. ಗಿಡ ನೆಡುವುದು ಮಾತ್ರವಲ್ಲದೇ ಗಿಡ ನೆಟ್ಟು ಸಮೀಪದ ಮನೆಯವರ ಮನವೊಲಿಸಿ ಅವುಗಳ ಪೋಷಣೆಗೆ ಮುಂದಾಗುವಂತೆ ಮಾಡಲು ಸಮಿತಿ ಸಜ್ಜಾಗಿದೆ.

ಬೇವು, ಹೊಂಗೆ, ಕಾಡಾ ಬಾದಾಮಿ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತಿದ್ದು, ಉದ್ಯಾನವನದಲ್ಲಿ ನೆಡುವ ಗಿಡಗಳನ್ನು ಹೊರತುಪಡಿಸಿ ರಸ್ತೆಬದಿಗಳಲ್ಲಿ ನೆಡುವ ಗಿಡಗಳನ್ನು ದನಕರುಗಳು ತಿನ್ನದಂತೆ ಕಬ್ಬಿಣ ಸರಳು ಗಳ ಬೇಲಿ ಹಾಕಲು ಉದ್ದೇಶಿಸಲಾಗಿದೆ. ಅರಣ್ಯ ಇಲಾಖೆ ಗಿಡಗಳನ್ನು ಪೂರೈಸ ಲಿದ್ದು, ಕಬ್ಬಿಣದ ಬೇಲಿಗಳನ್ನು ದಾನಿಗಳು ನೀಡಲಿದ್ದಾರೆ. ಹೀಗೆ ಸಂಘಟನಾತ್ಮಕ ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿ ಕರು ಸಹಕರಿಸಬೇಕೆಂದು ಸಮಿತಿ ಸಂಚಾ ಲಕರು ಹಾಗೂ ಸದಸ್ಯರು ಕೋರಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಪತ್ನಿ ಅರ್ಪಿತಾ ಸಿಂಹ, ಪಾಲಿಕೆ ಸದಸ್ಯರಾದ ಕೆ.ವಿ. ಶ್ರೀಧರ್, ಪ್ರೇಮಾ ಶಂಕರೇಗೌಡ, ಮಾಜಿ ಸದಸ್ಯ ಕೆ.ಟಿ.ಚೆಲುವೇಗೌಡ, ಸಸ್ಯಾ ರಾಧನಾ ಸಮಿತಿ ಸಂಚಾಲಕ ಡಿ.ಮಾದೇ ಗೌಡ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ.ವಿಶ್ವನಾಥ್ ಮತ್ತಿತರರು ಹಾಜರಿದ್ದರು.

Translate »