ಗುಂಡ್ಲುಪೇಟೆಯಲ್ಲಿ ಸಂಕಷ್ಟಹರ ಚತುರ್ಥಿ ಪೂಜೆ
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಸಂಕಷ್ಟಹರ ಚತುರ್ಥಿ ಪೂಜೆ

October 1, 2018

ಗುಂಡ್ಲುಪೇಟೆ:  ಪಟ್ಟಣದಲ್ಲಿರುವ ಪುರಾತನ ದೇವಾಲಯವಾದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿಯ ಹಿನ್ನೆಲೆಯಲ್ಲಿ ದೇವಾಲಯ ದಲ್ಲಿರುವ ಶ್ರೀ ಗಣಪತಿ ಮೂರ್ತಿಗೆ ವಿಶೇಷ ಭಸ್ಮಾಲಂಕಾರವನ್ನು ಮಾಡಲಾಗಿತ್ತು.

ಪ್ರತಿ ತಿಂಗಳ ಸಂಕಷ್ಟ ಹರ ಚತುರ್ಥಿಯಂತೆ ಈ ಬಾರಿಯೂ ಸಹ ದೇವಾಲ ಯವನ್ನು ಶುದ್ಧೀಕರಿಸಿ ವಿವಿಧ ಹೂವು ಮತ್ತು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಯದಲ್ಲಿರುವ ಶ್ರೀಗಣಪತಿ ಮತ್ತು ಈಶ್ವರ ಮತ್ತು ಪಾರ್ವತಮ್ಮ ನವರ ಮೂರ್ತಿ ಗಳಿಗೆ ವಿಶೇಷ ಅಲಂಕಾರ ಮತ್ತು ಬಣ್ಣ ಬಣ್ಣದ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ಪ್ರಧಾನ ಅರ್ಚಕರಾದ ಶಂಕರನಾರಾಯಣಜೋಯಿಸ್ ಮತ್ತು ಕಣ್ಣನ್ ನೇತೃತ್ವದಲ್ಲಿ ಚಂದ್ರೋದಯದ ವೇಳೆಯಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗಿದವು. ಪಟ್ಟಣದ ವಿವಿಧ ಬಡಾವಣೆಯ ಭಕ್ತಾದಿಗಳು ಶ್ರೀ ಗಣಪತಿಗೆ ಪೂಜೆ ಸಲ್ಲಿಸುವುದರೊಂದಿಗೆ ದೇವರ ದರ್ಶನ ಮಾಡಿ ಪುನೀತರಾದರು.

Translate »