ಹುತಾತ್ಮ ಯೋಧ ಮೇ.ಸಂದೀಪ್ ಉನ್ನಿಕೃಷ್ಣನ್ 43ನೇ ಜನ್ಮದಿನ: ಯುವ ಬಳಗದಿಂದ ಆಚರಣೆ
ಮೈಸೂರು

ಹುತಾತ್ಮ ಯೋಧ ಮೇ.ಸಂದೀಪ್ ಉನ್ನಿಕೃಷ್ಣನ್ 43ನೇ ಜನ್ಮದಿನ: ಯುವ ಬಳಗದಿಂದ ಆಚರಣೆ

March 16, 2020

ಮೈಸೂರು, ಮಾ.15(ಎಂಕೆ)- ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ 43ನೇ ಜನ್ಮದಿನದಂಗವಾಗಿ `ಯುವ ಭಾರತ್ ಮತ್ತು ವೀರ ಸಾವರ್ಕರ್ ಯುವ ಬಳಗ’ದ ಸದಸ್ಯರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಭಾನುವಾರ ಮೇಣದ ಬತ್ತಿ ಬೆಳಗಿಸಿ ಸ್ಮರಿಸಿದರು.

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಭಾವಚಿತ್ರಗಳನ್ನು ಹಿಡಿದು ಜೈಕಾರ ಕೂಗಿದ ಯುವಜನತೆ, ವೀರ ಸೇನಾನಿಗೆ ನಮನ ಸಲ್ಲಿಸಿದರು. ಮೈಸೂರು ಮಹಾನಗರ ಪಾಲಿಕೆಯು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪುತ್ಥಳಿ ಸ್ಥಾಪಿಸಬೇಕು. ರಸ್ತೆ ಅಥವಾ ವೃತ್ತವೊಂದಕ್ಕೆ ಅವರ ಹೆಸರಿಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಯುವಕರೇ ಸೇರಿ ವೃತ್ತವೊಂದಕ್ಕೆ ಮೇಜರ್ ಹೆಸರಿಟ್ಟು ಗೌರವಿಸಿದ್ದಾರೆ. ಅವರನ್ನು ಜನತೆ ಸದಾ ನೆನೆಯುವಂತೆ ಮಾಡಿದ್ದಾರೆ. ಅದನ್ನು ನಗರಪಾಲಿಕೆ ಶಾಶ್ವತವಾಗಿಸಬೇಕಿದೆ ಎಂದು ಒತ್ತಾಯಿಸಿದರು.

ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಬಿಜೆಪಿ ಮುಖಂಡ ಬಿ.ಎಂ. ರಘು, ಯುವ ಮುಖಂಡರಾದ ಜೋಗಿ ಮಂಜು, ವಿಕ್ರಂ ಐಯ್ಯಂ ಗಾರ್, ರಾಕೇಶ್ ಭಟ್, ಸಚಿನ್, ಲೋಹಿತ್, ಅಪೂರ್ವ ಸುರೇಶ್, ಗುರುರಾಜ್ ಶೆಟ್ಟಿ, ಬಸಪ್ಪ, ಸುಚೀಂದ್ರ, ಅಜಯ್ ಶಾಸ್ತ್ರಿ, ಸ್ಮಾರ್ಟ್ ಮಂಜು, ಚಕ್ರಪಾಣಿ, ಅರುಣ್, ಸಂತೋಷ ಮತ್ತಿತರಿದ್ದರು.

Translate »