ಅರಸೀಕೆರೆ ತಾಪಂ ಉಪಾಧ್ಯಕ್ಷರಾಗಿ ಎಸ್.ಬಿ.ಲಿಂಗರಾಜು ಆಯ್ಕೆ
ಹಾಸನ

ಅರಸೀಕೆರೆ ತಾಪಂ ಉಪಾಧ್ಯಕ್ಷರಾಗಿ ಎಸ್.ಬಿ.ಲಿಂಗರಾಜು ಆಯ್ಕೆ

July 29, 2018

ಅರಸೀಕೆರೆ: ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್.ಬಿ.ಲಿಂಗರಾಜು(ಶ್ಯಾನೆಗೆರೆ ಬಾಬು) ಅವಿ ರೋಧವಾಗಿ ಆಯ್ಕೆಯಾದರು.

ಹಿಂದಿನ ಉಪಾಧ್ಯಕ್ಷರಾಗಿದ್ದ ಬಸವಲಿಂಗಪ್ಪ ರಾಜೀ ನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಇಂದು ನಿಗದಿಯಾಗಿತ್ತು.

ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಸ್ಥಾನಕ್ಕೆ ಕೇವಲ ಎಸ್.ಬಿ.ಲಿಂಗರಾಜು ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಹಾಸನ ಉಪವಿಭಾಗಾಧಿಕಾರಿ ಹೆಚ್.ಎಲ್.ನಾಗರಾಜು ನಿಗದಿತ ಸಮಯಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸಿದರು.

ಲಿಂಗರಾಜು ಹೊರತು ಪಡಿಸಿ ಬೇರ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಎಸ್.ಬಿ. ಲಿಂಗರಾಜು ಅವರನ್ನು ಉಪಾಧ್ಯಕ್ಷರಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ವಿ.ನಟೇಶ್, ತಾಪಂ ಇಓ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷೆ ರೂಪಾ ಗುರುಮೂರ್ತಿ, ನಿಕಟಪೂರ್ವ ಉಪಾಧ್ಯಕ್ಷ ಬಸವ ಲಿಂಗಪ್ಪ, ತಾಪಂ ಸದಸ್ಯರಾದ ಪ್ರೇಮಾ ಧರ್ಮೇಶ್, ಕಾಂತರಾಜ್, ಮತ್ತಿತರರು ಉಪಸ್ಥಿತರಿದ್ದರು.

ನೂತನ ಉಪಾಧ್ಯಕ್ಷರನ್ನು ಶಾಸಕರೂ ಸೇರಿಂದತೆ ಎಲ್ಲಾ ಸದಸ್ಯರು ಹಾಗೂ ನೊಳಂಬ ಸಮಾಜದ ಮುಖಂಡರು ಅಭಿನಂದಿಸಿದರು. ನಂತರ ಅಭಿಮಾನಿಗಳು ಹರ್ಷೋದ್ಘಾರದೊಂದಿಗೆ ನಗರದ ಬಿ.ಹೆಚ್‍ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಸಾಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Translate »