ಜಿಲ್ಲಾಮಟ್ಟದ ಅಂತರ್ ಶಾಲಾ ವಿಜ್ಞಾನ ವಸ್ತುಪ್ರದರ್ಶನ, ಚರ್ಚಾ ಸ್ಪರ್ಧೆ ಗಮನ ಸೆಳೆದ ವಿದ್ಯಾರ್ಥಿಗಳ ಮಾದರಿ ವಿಜ್ಞಾನ ವಸ್ತು ಪ್ರದರ್ಶನ
ಕೊಡಗು

ಜಿಲ್ಲಾಮಟ್ಟದ ಅಂತರ್ ಶಾಲಾ ವಿಜ್ಞಾನ ವಸ್ತುಪ್ರದರ್ಶನ, ಚರ್ಚಾ ಸ್ಪರ್ಧೆ ಗಮನ ಸೆಳೆದ ವಿದ್ಯಾರ್ಥಿಗಳ ಮಾದರಿ ವಿಜ್ಞಾನ ವಸ್ತು ಪ್ರದರ್ಶನ

December 3, 2018

ಕುಶಾಲನಗರ: ಸಮೀಪದ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿರುವ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಂತರ್ ಶಾಲಾ ಮಾದರಿ ವಿಜ್ಞಾನ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ವಿದ್ಯಾ ಸಂಸ್ಥೆಯ ಖಜಾಂಚಿ ಪಿ.ಎಸ್.ರಾಮ್ ದೇವಯ್ಯ ಉದ್ಘಾಟಿಸಿದರು. ಜಿಲ್ಲೆಯ ವಿವಿ ಧೆಡಗಳಿಂದ ಆಗಮಿಸಿದ್ದ 12ಕ್ಕೂ ಹೆಚ್ಚಿನ ಶಾಲಾ ವಿದ್ಯಾರ್ಥಿಗಳು ವಿವಿಧ ಮಾದರಿ ವಿಜ್ಞಾನ ವಸ್ತು ಪ್ರದರ್ಶನವನ್ನು ಸಿದ್ಧ ಪಡಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ವಿರಾಜಪೇಟೆ ಸೆಂಟ್ ಆನ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಶಕ್ತಿ ಸಂರಕ್ಷಣೆ ಮತ್ತು ತಂತ್ರ ಜ್ಞಾನ, ಮಡಿಕೇರಿ ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ತಂಡ ಕೃಷಿ ಮತ್ತು ತಂತ್ರಜ್ಞಾನ, ಮೂರ್ನಾಡು ಮಾರುತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಶಕ್ತಿ ಸಂರಕ್ಷಣೆ, ಪಿರಿಯಾಪಟ್ಟಣ ಪುಷ್ಪಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಚರಂಡಿ ನೀರು ಸಂರಕ್ಷಣಾ ಘಟಕ ಸ್ಥಾಪನೆ, ಗೋಣಿಕೊಪ್ಪ ಕಾಪ್ಸ್ ಶಾಲಾ ವಿದ್ಯಾರ್ಥಿಗಳು ಕೌಶಲ್ಯ ಭಾರತ ನಿರ್ಮಾಣ, ಕೂಡಿಗೆ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ತಂಡ ಬಿದಿರು ಹುಲ್ಲು, ಸಂಚಾರ ಸಿಗ್ನಲ್ಸ್, ಮುಕ್ತ ರಸ್ತೆಗಳ ಕುರಿತು, ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ತಂಡ ಉತ್ತಮ ರಸ್ತೆಗಳು, ಕೃಷಿ ಮತ್ತು ತಂತ್ರಜ್ಞಾನ, ಸೋಮವಾರಪೇಟೆ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ ವಿದ್ಯಾ ರ್ಥಿಗಳು ತತ್ರಜ್ಞಾನ, ಶಕ್ತಿ ಸಂರಕ್ಷಣೆ, ಗೋಣಿ ಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ತಂಡ ಆಕ್ವಾಪೋನಿಕ್ ಮಾದರಿ, ಅತ್ತೂರು ಜ್ಞಾನಗಂಗಾ ವಸತಿ ಶಾಲೆ ವಿದ್ಯಾರ್ಥಿಗಳ ತಂಡ ಶಿಕ್ಷಣ ಮತ್ತು ತಂತ್ರಜ್ಞಾನ ಕುರಿತು ವಿವಿಧ ಮಾದರಿಗಳನ್ನು ತಯಾರಿಸಿದ್ದರು.

ತೀರ್ಪುಗಾರರಾಗಿ ಚಿಕ್ಕಅಳುವಾರ ಸ್ನಾತ ಕೋತ್ತರ ಕೇಂದ್ರದ ಮೈಕ್ರೋಬಯೋ ಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಟಿ.ಕೆ.ಮಂಜುಳಾ, ಕುಶಾಲನಗರ ಕನ್ನಡ ಭಾರತಿ ಪಿಯು ಕಾಲೇಜಿನ ರಾಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಕೆ.ಟಿ.ಕೃಪಾ ಕಾರ್ಯನಿರ್ವಹಿಸಿದರು. ವಸ್ತುಪ್ರದರ್ಶ ನದ ಸಂಯೋಜಕರಾಗಿ ವಿಜ್ಞಾನ ಶಿಕ್ಷಕಿ ಎಚ್.ಪಿ.ರಂಜಿನಿ ಮತ್ತು ತಂಡ ಕಾರ್ಯ ನಿರ್ವಹಿಸಿದರು. ಈ ಸಂದರ್ಭ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಅನಂತ ಪದ್ಮನಾಭ, ಟ್ರಸ್ಟಿ ಟಿ.ಕೆ.ಸುದೀಶ್, ಪೊಲೀಸ್ ಇಲಾಖೆ ದಯಾನಂದ್ ಇದ್ದರು.

ವಿಜೇತರ ವಿವರ : ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನ ರೂ.15000 ಹಾಗೂ ಟ್ರೋಫಿ, ಜ್ಞಾನಗಂಗಾ ವಸತಿ ಶಾಲೆ ದ್ವಿತೀಯ ಸ್ಥಾನಗಳಿಸಿ ರೂ. 10,000 ನಗದು ಹಾಗೂ ಟ್ರೋಫಿ ಹಾಗೂ ಗೋಣಿಕೊಪ್ಪ ಕಾಪ್ಸ್ ಶಾಲಾ ತಂಡ ತೃತೀಯ ಸ್ಥಾನಗಳಿಸಿ ರೂ.7500 ಹಾಗೂ ಟ್ರೋಫಿಯನ್ನು ಬಹುಮಾನವಾಗಿ ಪಡೆದುಕೊಂಡರು.

ಚರ್ಚಾಸ್ಪರ್ಧೆ ಕಾರ್ಯಕ್ರಮ : ಅಂತರ್ ಜಿಲ್ಲಾಮಟ್ಟದ ಚರ್ಚಾಸ್ಪರ್ಧೆ ಕಾರ್ಯ ಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ 11 ಶಾಲಾ ತಂಡಗಳು ಪಾಲ್ಗೊಂಡಿದ್ದವು. ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆ ವಿದ್ಯಾ ರ್ಥಿಗಳ ತಂಡ ಪ್ರಥಮ ಸ್ಥಾನಗಳಿಸಿ ರೂ.15,000 ನಗದು ಹಾಗೂ ಟ್ರೋಫಿ, ಕೂಡಿಗೆ ಸೈನಿಕ ಶಾಲಾ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನಗಳಿಸಿ ರೂ.10,000 ನಗದು ಹಾಗೂ ಟ್ರೋಫಿ ಹಾಗೂ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲಾ ತಂಡ ತೃತೀಯ ಸ್ಥಾನಗಳಿಸಿ ರೂ.7500 ನಗದು ಹಾಗೂ ಟ್ರೋಫಿಯನ್ನು ಪಡೆದವು. ತೀರ್ಪುಗಾರರಾಗಿ ಮಡಿಕೇರಿ ಪಿಯು ಕಾಲೇಜಿನ ಆಂಗ್ಲ ಉಪನ್ಯಾಸಕಿ ಎಸ್.ಡಿ.ಅನಿತಾ, ಸೆಂಟ್ ಜೋಸೆಫ್ ಪಿಯು ಕಾಲೇಜಿನ ಉಪನ್ಯಾಸಕಿ ತೇಜ ಸ್ವಿನಿ ಕಾರ್ಯನಿರ್ವಹಿಸಿದರು. ಕಾರ್ಯ ಕ್ರಮ ಸಂಯೋಜಕರಾಗಿ ಶಿಕ್ಷಕಿ ಪದ್ಮಾವತಿ ಕಾರ್ಯನಿರ್ವಹಿಸಿದರು.

Translate »