ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ: ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶ
ಮೈಸೂರು

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ: ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶ

June 23, 2019

ಬೆಂಗಳೂರು, ಜೂ.22- ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪದ ಆರೋಪ ಕೇಳಿಬಂದಿರುವ ಹಿನ್ನೆಲೆ ಯಲ್ಲಿ ಅಲ್ಲಿನ ಭದ್ರತಾ ವ್ಯವಸ್ಥೆಯ ಕುರಿತು ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿದೆ. ಕಳೆದ ಸೋಮ ವಾರ ನಾಲ್ವರು ಮಹಿಳೆಯರು ಸೇರಿ ದಂತೆ ಎರಡು ತಂಡಗಳ ಏಳು ಪ್ರಯಾಣಿಕರಿಗೆ ಸುರಕ್ಷತಾ ತಪಾಸಣೆ ನಡೆಸದೆಯೇ ನಿಲ್ದಾಣ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂಬ ಆರೋ ಪದ ಹಿನ್ನೆಲೆಯಲ್ಲಿ ಸಚಿವಾಲಯ ತನಿಖೆಗೆ ಆದೇಶಿಸಿದೆ. ಈ ಪ್ರಯಾ ಣಿಕರು ಯಾವುದೇ ಸುರಕ್ಷತಾ ತಪಾ ಸಣೆಗೊಳಪಡದೆ ಪುಣೆಯ ವಿಮಾನ ವನ್ನೇರಿದ್ದರು. ಈ ಘಟನೆ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದ್ದು, ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‍ಎಫ್) ಹಿರಿಯ ಅಧಿಕಾರಿಗಳು ಅದನ್ನು ಪರಿಶೀಲಿಸಿ ದಾಗ ಈ ಪ್ರಮಾದ ಬೆಳಕಿಗೆ ಬಂದಿದೆ. ಈ ಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ವಿಮಾನ ನಿಲ್ದಾಣ ಪ್ರಾಧಿ ಕಾರಕ್ಕೆ ಸಚಿವಾಲಯ ಸೂಚಿಸಿದೆ.

Translate »