ರಂಗಕರ್ಮಿ ಮುದ್ದುಕೃಷ್ಣ ದಂಪತಿಗೆ ಶ್ರದ್ಧಾಂಜಲಿ
ಮೈಸೂರು

ರಂಗಕರ್ಮಿ ಮುದ್ದುಕೃಷ್ಣ ದಂಪತಿಗೆ ಶ್ರದ್ಧಾಂಜಲಿ

July 12, 2019

ಮೈಸೂರು,ಜು.11(ವೈಡಿಎಸ್)- ರಂಗ ಕರ್ಮಿ ಮುದ್ದುಕೃಷ್ಣ ಅವರು ಹಳೆಯ ನಾಣ್ಯ ಸಂಗ್ರಹಕಾರರಲ್ಲೇ ಅಪರೂಪದ ಸಂಗ್ರಹಕಾರರಾಗಿದ್ದರು ಎಂದು ಹಿರಿಯ ರಂಗನಿರ್ದೇಶಕ ಪ್ರೊ.ಹೆಚ್.ಎಸ್. ಉಮೇಶ್ ಸ್ಮರಿಸಿಕೊಂಡರು.

ಮೈಸೂರಿನ ರಂಗಾಯಣದ ಭೂಮಿ ಗೀತದಲ್ಲಿ ಗುರುವಾರ ಆಯೋಜಿಸಿದ್ದ ರಂಗಕರ್ಮಿ ಕೆ.ಮುದ್ದುಕೃಷ್ಣ ಮತ್ತು ಡಾ. ಡಿ.ಇಂದ್ರಾಣಿ ದಂಪತಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುದ್ದುಕೃಷ್ಣ ಅವರು ತಾವು ಸಂಪಾದಿಸಿದ ಹಣಕ್ಕೆಲ್ಲಾ ಹಳೇ ನಾಣ್ಯಗಳನ್ನು ಕೊಂಡು, ಅವುಗಳ ಹಿಂದಿರುವ ಚರಿತ್ರೆ ತಿಳಿದು ಕೊಳ್ಳುತ್ತಿದ್ದರು ಎಂದರು.

ರಂಗಭೂಮಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮುದ್ದುಕೃಷ್ಣ, ಅನೇಕ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದರು. ಅವರಿಗೆ ಸಂಗೀತ ಬರ ದಿದ್ದರೂ ಪ್ರೀತಿಸುತ್ತಿದ್ದರು. ಯಾರಿಗೂ ಕೆಟ್ಟದ್ದನ್ನು ಬಯಸಿದವರಲ್ಲ. ನಗುಮೊಗದ ಮುದ್ದುಕೃಷ್ಣನ ದುಃಖದ ದಿನಗಳನ್ನೂ ನಾನು ನೋಡಿದ್ದೇನೆ ಎಂದು ತಿಳಿಸಿದರು.

ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತ ನಾಡಿ, ಮುದ್ದುಕೃಷ್ಣ ಅವರು ಪತ್ನಿ ಸಮೇತ ಬದುಕಿನ ಪಯಣವನ್ನು ಮುಗಿಸಿರುವುದು ನಗರದಲ್ಲಿ ಸಣ್ಣ ಶೂನ್ಯವನ್ನೇ ಸೃಷ್ಟಿಸಿದೆ. ಮುದ್ದುಕೃಷ್ಣರೊಂದಿಗೆ ನಿಕಟ ಸಂಪರ್ಕ ಇಲ್ಲದಿದ್ದರೂ ರಂಗಾಯಣಕ್ಕೆ ಬಂದಾಗ ಮಾತನಾಡುತ್ತಿದ್ದೆವು. ಆದರೆ ಅವರೊಮ್ಮೆ ನನಗೆ ಮುಜುಗರ ತರುವ ಸಂಗತಿಯೊಂ ದನ್ನು ಬರೆಯಲು ಬಯಸಿದ್ದರು. ನಾನು ಬೇಡವೆಂದಾಗ ಸುಮ್ಮನಾದರು. ಅಂದರೆ, ಅವರಲ್ಲಿ ಸತ್ಯವನ್ನು ಹೇಳಬೇಕೆಂಬ ತಹ ತಹ ಇದ್ದರೂ ಹಠಮಾರಿತನ ಇರಲಿಲ್ಲ. ಔಚಿತ್ಯಪ್ರಜ್ಞೆ ಅವರಲ್ಲಿತ್ತು ಎಂದರು.

ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿಕದಂ ಮಾತನಾಡಿ, ರಂಗಾಯಣ ಆರಂಭವಾದ ದಿನದಿಂದ ಇಂದಿನವರೆಗೆ ಇದರ ಬೆಳವಣಿಗೆಗೆ ಮುದ್ದುಕೃಷ್ಣ ಸಹ ಕಾರ ನೀಡಿದ್ದಾರೆ. ಇಂದು ಮುದ್ದುಕೃಷ್ಣ ದಂಪತಿಯನ್ನು ಒಟ್ಟಿಗೆ ಕಳೆದುಕೊಂಡಿ ರುವ ದುರ್ದೈವ. ಅವರ ಮಕ್ಕಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ರಂಗಾಯಣ ಮಾಜಿ ನಿರ್ದೇಶಕ ಹೆಚ್. ಜನಾರ್ಧನ್ ಮಾತನಾಡಿ, ಮುದ್ದುಕೃಷ್ಣ ಅವರದ್ದು ಜವಾಬ್ದಾರಿಯುತವಾದ ವ್ಯಕ್ತಿತ್ವ ವಾಗಿತ್ತು. ನಮ್ಮೆಲ್ಲರದು ಸಾಮಾಜಿಕ ಸಂಸಾರವಾಗಿತ್ತು. ಆ ಸಂಸಾರದ ಹಿರಿಯನ ಜವಾಬ್ದಾರಿಯನ್ನು ಮುದ್ದುಕೃಷ್ಣ ವಹಿಸಿ ದ್ದರು. ಅವರ ಚಲನೆ, ಚಟುವಟಿಕೆಗಳು ಬಹಳ ಮುದ್ದಾಗಿದ್ದವು. ಇವತ್ತಿನ ಕ್ರೌರ್ಯ, ಸಾಮಾಜಿಕ ತಲ್ಲಣ, ಸಾಂಸ್ಕøತಿಕ ಬಿಕ್ಕಟ್ಟಿನ ಬಗ್ಗೆ ಆಳವಾದ ಆಲೋಚನೆ ಅವರಲ್ಲಿತ್ತು ಎಂದರು. ಹಿರಿಯ ಸಮಾಜವಾದಿ ಪ. ಮಲ್ಲೇಶ್, ಚಿಂತಕ ಪ್ರೊ.ಕಾಳೇಗೌಡ ನಾಗ ವಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಸಾಹಿತಿ ಬನ್ನೂರು ಕೆ.ರಾಜು, ಧನಂಜಯ ಎಲಿ ಯೂರು, ಕೆ.ಆರ್.ಗೋಪಾಲಕೃಷ್ಣ, ನಂದಾ ಹಳೆಮನೆ, ಮೈಮ್ ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »