ರಾಮನಾಥಪುರ: ಇಲ್ಲಿನ ಸುಪ್ರಸಿದ್ಧ ಚರ್ತುಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನ ಶಿಥಿಲ ಗೊಳ್ಳುತ್ತಿದ್ದು ಮುಜರಾಯಿ ಇಲಾಖೆ ಸೇರಿದಂತೆ ಸಂಬಂಧಪಟ್ಟವರು ಜೀರ್ಣೋ ದ್ಧಾರಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ.
ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಹೊಂದಿ ರುವ ಶ್ರೀ ಕ್ಷೇತ್ರ ಶತಮಾನಗಳಷ್ಟು ಹಳೆ ಯದಾದ ಶ್ರೀ ರಾಮೇಶ್ವರಸ್ವಾಮಿ ದೇವ ಸ್ಥಾನವು ಜೀವನದಿ ಕಾವೇರಿ ದಡದಲ್ಲಿದ್ದು, ಸಾವಿರ ವರ್ಷದ ಇತಿಹಾಸ ಹೊಂದಿದೆ. ಸದ್ಯ ಈ ಪುರಾತನ ದೇವಸ್ಥಾನ ಶಿಥಿಲಾವಸ್ಥೆ ಹಂತ ತಲುಪುತ್ತಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಶ್ರೀರಾಮೇಶ್ವರಸ್ವಾಮಿ ದೇಗುಲದ ಗರ್ಭಗುಡಿ ಗೋಪುರ ಹಾಗೂ ರಾಜ ಗೋಪುರ ಶಿಥಿಲಗೊಂಡಿದ್ದು, ದೇವ ಸ್ಥಾನದ ಸುತ್ತಲ ತಡೆ ಗೋಡೆಗಳ ಮೇಲೆ ಸುತ್ತಲೂ ಗಿಡಗಂಟಿ ಬೆಳೆದು ಕಟ್ಟಡಕ್ಕೆ ಹಾನಿಯೂಂ ಟಾಗಿದೆ. ಅಲ್ಲದೆ ದೇವಸ್ಥಾನದ ಗರ್ಭಗುಡಿ, ಒಳಭಾಗ, ದೇವಸ್ಥಾನದ ಸುತ್ತ ಪೌಳಿ, ಶ್ರೀಚಕ್ರ ಸೇರಿದಂತೆ ಬಹು ತೇಕ ಭಾಗಗಳಲ್ಲಿ ನೀರು ಸಂಗ್ರಹವಾಗು ವಂತಾಗಿದ್ದು, ಮಳೆ ಬಂದರೆ ಸೋರುವುದು ಸಾಮಾನ್ಯವ್ಯಾಗಿದೆ.
ಸದ್ಯ ಮುಂಗಾರು ಆರಂಭಗೊಂಡಿದ್ದು, ಜೀರ್ಣೋದ್ಧಾರಕ್ಕೆ ಮುಂದಾಗಿದ್ದರೆ ದೇಗುಲಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಅತ್ಯಾಕರ್ಷಕವಾಗಿ ನಿರ್ಮಿತಗೊಂಡಿರುವ ದೇವ ಸ್ಥಾನದ ಬಹುಭಾಗದ ಗೋಡೆ ಈಗಾ ಗಲೇ ಕುಸಿಯುವ ಹಂತದಲ್ಲಿದ್ದು, ಆತಂಕ ಎದುರಾಗಿದೆ. ದೇವಾಲಯಲ್ಲಿ ನೂರಾರು ಶಿವಲಿಂಗಗಳು, ಸಾವಿರಾರು ಶಿಲಾ ಶಾಸನಗಳಿದ್ದು, ಸಂರಕ್ಷಿಸುವ ಅನಿವಾರ್ಯತೆ ಇದೆ.
ಚತುರ್ಯುಗ ಮೂರ್ತಿ ಶ್ರೀರಾಮೇಶ್ವರ ಸ್ವಾಮಿಯು ಈ ಕ್ಷೇತ್ರದ ಅಧಿಪತಿಯಾಗಿ ರುವುದರಿಂದ ಈ ಗ್ರಾಮಕ್ಕೆ ರಾಮ ನಾಥಪುರ ಎಂಬ ಹೆಸರು ಬಂದಿದೆ. ಇಲ್ಲಿ ನಡೆಯುವ ವಿಶೇಷ ಧಾರ್ಮಿಕ ಉತ್ಸವ ಗಳು ಪೂಜಾ ವಿಧಾನಗಳು ಎಂಥವರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಈ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ದೇಗುಲದ ಪೂಜಾ ಕೈಂಕರ್ಯ, ವಾತಾವರಣ ನೆಮ್ಮದಿ ನೀಡಲಿದ್ದು, ರಾಮನಾಥಪುರ ಪ್ರವಾಸಿ ಕ್ಷೇತ್ರವಾಗಿ ರೂಪುಗೊಳ್ಳುವಲ್ಲಿ ಸಂಬಂಧ ಪಟ್ಟವರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಶಿಥಿಲವಾಗಿರುವ ಶ್ರೀರಾಮೇಶ್ವರಸ್ವಾಮಿ ದೇಗುಲ ಜೀರ್ಣೋ ದ್ಧಾರಗೊಳಿಸಿ, ಕ್ಷೇತ್ರದಲ್ಲಿ ಅಗಸ್ತ್ಯೇಶ್ವರಸ್ವಾಮಿ ಹಾಗೂ ಲಕ್ಷ್ಮಣೇಶ್ವರಸ್ವಾಮಿ ದೇವಸ್ಥಾನಕ್ಕೆ ರಸ್ತೆ ಸೌಕರ್ಯ ಕಲ್ಪಿಸಬೇಕಿಸಿದೆ. ಭಕ್ತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಹಾಗೂ ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ, ಸ್ಥಳೀಯ ಗ್ರಾಪಂ ಆಡಳಿತ ಕಾರ್ಯ ಪ್ರವೃತ್ತವಾಗಬೇಕೆಂಬುದು ಭಕ್ತರು ಹಾಗೂ ನಾನಾಸಂಘ ಸಂಸ್ಥೆಗಳು ಆಶಯವಾಗಿದೆ.