ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ  ಮಠಕ್ಕೆ ವಾಪಸ್, ಚಿಕಿತ್ಸೆ ಮುಂದುವರಿಕೆ
ಮೈಸೂರು

ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ವಾಪಸ್, ಚಿಕಿತ್ಸೆ ಮುಂದುವರಿಕೆ

January 17, 2019

ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಬುಧವಾರ ಬೆಳಗ್ಗೆ ಮಠಕ್ಕೆ ವಾಪಸ್ ಕರೆತರಲಾಗಿದೆ.

ಶ್ವಾಸಕೋಶದ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗಾ ಶ್ರೀಗಳು ಮಠಕ್ಕೆ ಹೋಗಬೇಕೆಂದು ನಿನ್ನೆಯಿಂದ ಹಠ ಹಿಡಿದಿದ್ದರಿಂದ ಇಂದು ಮುಂಜಾನೆ ವೇಳೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆಯನ್ನು ಮಠದಲ್ಲಿ ಮುಂದುವರಿಸಲಾಗುವುದು ಎಂದು ಕಿರಿಯ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ಸ್ವಾಮೀಜಿಗಳ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ. ರಾತ್ರಿ ಯಿಂದ ಮಠಕ್ಕೆ ಹೋಗುವಂತೆ ಸ್ವಾಮೀಜಿ ಗಳು ಸೂಚನೆ ನೀಡುತ್ತಿದ್ದರು. ಇಂದು ಅಥವಾ ನಾಳೆ ಶಿಫ್ಟ್ ಮಾಡಬೇಕಂತ ಮಠದ ಹಿರಿಯರು ಹಾಗೂ ಎಸ್‍ಪಿ ಸೇರಿ ಸಭೆ ನಡೆಸಿ ನಿರ್ಧಾರ ಮಾಡಿದ್ದೆವು. ಆದರೆ ರಾತ್ರಿಯಿಂದ ಸ್ವಾಮೀಜಿಗಳು ಮಠಕ್ಕೆ ಹೋಗಬೇಕೆಂದು ಚಡಪಡಿಸುತ್ತಿದ್ದರು. ಆದ್ದರಿಂದ ಬೆಳಗಿನ ಜಾವ ಈ ರೀತಿ ನಿರ್ಧಾರ ತೆಗೆದುಕೊಂಡು ಶಿಫ್ಟ್ ಮಾಡಲಾ ಗಿದೆ ಎಂದು ಕಿರಿಯ ಶ್ರೀಗಳು ತಿಳಿಸಿದ್ದಾರೆ.

ಶ್ರೀಗಳಿಗೆ ನಿಶ್ಯಕ್ತಿ ಮತ್ತು ಉಸಿರಾಟದ ತೊಂದರೆ ಹೊರತುಪಡಿಸಿದರೆ ಬೇರೆ ಎಲ್ಲಾ ಪ್ಯಾರಾಮೀಟರ್ಸ್ ಸರಿಯಾಗಿದೆ. ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ. ಶಸ್ತ್ರಚಿಕಿತ್ಸೆ ಮಾಡಿದ ಗಾಯ ವಾಸಿಯಾ ಗಿದೆ. ಭಕ್ತಾದಿಗಳು ಆತಂಕಪಡುವ ಅವಶ್ಯ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರ ಮೇಶ್ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಇಂದು ಮುಂಜಾನೆ ಮೈಸೂರಿನ ಯದು ವೀರ್ ಒಡೆಯರ್ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದಾರೆ. ನಂತರ ಮಾಧ್ಯಮ ಗಳೊಂದಿಗೆ ಅವರು ಮಾತನಾಡಿ, ಶ್ರೀಗಳು ವಿಶ್ರಾಂತಿಯಲ್ಲಿ ಇದ್ದರು. ಹಾಗಾಗಿ ಮಾತ ನಾಡಲು ಸಾಧ್ಯವಾಗಿಲ್ಲ. ಆಶೀರ್ವಾದ ಪಡೆದುಕೊಂಡು ಬಂದೆ ಎಂದರು. ಸ್ವಾಮೀಜಿ ಗಳನ್ನು ಮಠಕ್ಕೆ ಕರೆತಂದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಳ ಭಕ್ತಾದಿಗಳು ಮಠದ ಬಳಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.

ಶ್ರೀಗಳ ಆರೋಗ್ಯ ವಿಚಾರಿಸಿದ ಹೆಚ್‍ಡಿಡಿ
ತುಮಕೂರು:ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈ ಡ್ರಾಮಾದ ನಡುವೆಯೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.

ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯ ಮಗಳ ಜೊತೆ ಮಾತನಾಡಿದ ಅವರು, ಗುರುಗಳಿಗೆ 111 ವರ್ಷವಾಗಿದೆ. ಈ ವಯಸ್ಸಿನಲ್ಲಿ ಸ್ವಾಭಾ ವಿಕವಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. 89 ವರ್ಷಗಳಿಂದ ಅವರು ಸಿದ್ದಗಂಗಾ ಪೀಠದಲ್ಲಿ ಸೇವೆ ಸಲ್ಲಿಸಿದ್ದಾರೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಹಾಗೂ ಅನ್ನ ದಾಸೋಹ ಮಾಡಿ ಪ್ರಪಂಚದೆಲ್ಲೆಡೆ ಹೆಸರುವಾಸಿಯಾಗಿ ದ್ದಾರೆ. ಹಲವಾರು ರೀತಿ ಧಾರ್ಮಿಕ ಉಪನ್ಯಾಸ ಮಾಡಿದ್ದಾರೆ ಎಂದು ನಡೆದಾಡುವ ದೇವರ ಕೆಲಸವನ್ನು ಶ್ಲಾಘಿಸಿದರು.

ಉತ್ತರಾಯಣ ಪುಣ್ಯಕಾಲ ಶುರುವಾಗಿದೆ. ಇನ್ನು 6 ತಿಂಗಳ ಕಾಲ ಇದೆ ಪುಣ್ಯ ಕಾಲ ಇರುತ್ತದೆ. ನಾವು ಹಲವಾರು ಬಾರಿ ಶ್ರೀಗಳ ಜೊತೆ ಕುಳಿತು ಊಟ ಮಾಡಿದ್ದೇವೆ. ಅದು ನನ್ನ ಪುಣ್ಯ. ಈ ಪುಣ್ಯಕಾಲದಲ್ಲಿ ನಡೆದಾಡುವ ದೇವರ ದರ್ಶನ ಮಾಡಲು ಬಂದಿದ್ದು ದರ್ಶನ ಸಿಕ್ಕಿದೆ. ಭಗವಂತ ಯಾವಾಗ ತೀರ್ಮಾನ ಮಾಡುತ್ತಾನೋ ನಮಗೆ ಗೊತ್ತಿಲ್ಲ. ಇನ್ನೂ ಶ್ರೀಗಳಿಗೆ ಉಸಿರಾಡುವ ಶಕ್ತಿ ಇದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಶ್ರೀಗಳ ಬಿಪಿ ಶುಗರ್ ಎಲ್ಲವೂ ಸರಿಯಾಗಿದೆ ಅಂತ ದೇವೇಗೌಡರು ತಿಳಿಸಿದರು.

ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಿರಿಯ ಶ್ರೀಗಳು
ತುಮಕೂರು:ಸಿದ್ದಗಂಗಾ ಮಠಕ್ಕೆ ಶ್ರೀಗಳನ್ನು ಶಿಫ್ಟ್ ಮಾಡಲಾಗಿದ್ದು, ಮಠ ದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಮಠದ ವಿದ್ಯಾರ್ಥಿಗಳಿಗೆ ಶ್ರೀಗಳ ದರ್ಶನ ಸಿಗದ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಕಿರಿಯ ಶ್ರೀಗಳು ಭಾವುಕರಾಗಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಕಿರಿಯ ಶ್ರೀಗಳು, ಶ್ರೀಗಳನ್ನು ಆಸ್ಪತ್ರೆ ಯಿಂದ ಮಠಕ್ಕೆ ಶಿಫ್ಟ್ ಆದ ಹಿನ್ನೆಲೆ ಯಲ್ಲಿ ಮಠದಲ್ಲೇ ಐಸಿಯೂ ಮಾದ ರಿಯ ಕೊಠಡಿ ನಿರ್ಮಾಣವಾಗಿದೆ. ಅದೇ ಕೊಠಡಿಯಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಶ್ರೀಗಳು ಆರೋಗ್ಯವಾಗಿ ಇದ್ದಾರೆ. ಯಾರೋ ಇಲ್ಲ ಸಲ್ಲದ ಮಾಹಿತಿ ನೀಡುತ್ತಿದ್ದಾರೆ. ಆದರೆ ಶ್ರೀಗಳಿಗೆ ಸತತವಾಗಿ ಚಿಕಿತ್ಸೆ ನಡೆಯು ತ್ತಿರುವುದರಿಂದ ಅವರಿಗೆ ತೊಂದರೆ ಯಾಗಬಾರದು. ಇಲ್ಲ ಸಲ್ಲದ ವದಂತಿಗೆ ಕಿವಿಗೊಡಬೇಡಿ ಎಂದು ಕಿರಿಯ ಶ್ರೀಗಳು ಜನರಲ್ಲಿ ಮನವಿ ಮಾಡಿಕೊಂಡರು.

ನನಗೂ ಮಕ್ಕಳಿಗೆ ಶ್ರೀಗಳ ದರ್ಶನ ಮಾಡಿಸಬೇಕು ಅಂತ ಆಸೆ ಇದೆ ಎಂದು ತಕ್ಷಣ ಕಿರಿಯ ಶ್ರೀಗಳು ಮೌನವಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ನಮ್ಮ ಸಿಬ್ಬಂದಿಯೇ ಶ್ರೀಗಳನ್ನು ದರ್ಶನ ಮಾಡಲು ಬಿಡು ತ್ತಿಲ್ಲ ಎಂದು ಬೇಸರ ಮಾಡಿಕೊಂಡಿ ದ್ದಾರೆ. ಜನರು ಕೂಡ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಆದರೆ ನಾವು ಶ್ರೀಗಳ ಆರೋಗ್ಯದ ಬಗ್ಗೆ ಯೋಚನೆ ಮಾಡಬೇಕು. ನಮಗೆ ಮಕ್ಕಳು, ಭಕ್ತರು ಮತ್ತು ಸಿಬ್ಬಂದಿಯೂ ಬೇಕು. ಚಿಕಿತ್ಸೆ ನೀಡುತ್ತಿರುವುದರಿಂದ ಎಲ್ಲರೂ ಸಹಕರಿ ಸಬೇಕು. ಎಲ್ಲರೂ ಸಹಕರಿಸುತ್ತಾರೆ ಎಂಬ ಭಾವನೆ ನನ್ನಲ್ಲಿದೆ ಎಂದು ಭಾವುಕರಾಗಿ ಹಳೆಯ ಮಠಕ್ಕೆ ಸಿದ್ದ ಲಿಂಗ ಸ್ವಾಮೀಜಿ ತೆರಳಿದರು.

Translate »