ಮೈಸೂರು,ಡಿ.31(ಎಂಟಿವೈ)- ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೃಷಿ ಸಾಲಮನ್ನಾ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸೋಮವಾರ ಪತ್ರ ಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಆರಂಭದ ದಿನದಿಂದಲೂ ಕೃಷಿ ವಲಯ ಹಾಗೂ ರೈತ ವಿರೋಧಿ ನೀತಿ ತಾಳುತ್ತಿದ್ದಾರೆ. ಕೇವಲ ಭಾಷಣದ ಮೂಲಕ ರೈತರ ಮೂಗಿಗೆ ತುಪ್ಪ ಸವರುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಮೋದಿ ಬಳಿ ನಿಯೋಗ ಕರೆದು ಕೊಂಡು ಹೋಗಿದ್ದೆ. ಸುಳ್ಳು ಭರವಸೆ ಯಷ್ಟೇ ರೈತರ ನಿಯೋಗಕ್ಕೆ ಸಿಕ್ಕಿತ್ತು. ಇದು ರೈತ ಸಮುದಾಯಕ್ಕೆ ಚೆನ್ನಾಗಿ ತಿಳಿದಿದೆ. ಪ್ರಧಾನಿಯಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಬಹುದಾಗಿತ್ತು. ಆದರೆ ಮಾತಿನಲ್ಲಿಯೇ ಕಾಲ ಕಳೆದರು. ಇದರಿಂದ ಮೋದಿ ರೈತ ವಿರೋಧಿ ಎನ್ನುವುದು ಸಾಬೀತಾಗಿದೆ ಎಂದರು.
ಲಾಲಿ ಪಾಪ್ ನೀಡಿಲ್ಲ: ಪ್ರಧಾನಿ ಮೋದಿ ಇತ್ತೀಚೆಗೆ ಕಾಂಗ್ರೆಸ್‍ನವರು ರೈತರಿಗೆ ಲಾಲಿ ಪಾಪ್ ಕೊಟ್ಟಿದ್ದಾರೆ ಎಂದು ಅಣಕವಾಡಿದ್ದಾರೆ. ಮೋದಿ ಕನಿಷ್ಠ ಲಾಲಿ ಪಾಪನ್ನಾದರೂ ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದರು.
ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂಬ ತಮ್ಮ ಹೇಳಿಕೆಗೆ ಸಂಸದೆ ಶೋಭ ಕರಂ ದ್ಲಾಜೆ ಕ್ಷಮೆ ಯಾಚಿಸುವಂತೆ ಆಗ್ರಹಿಸಿರು ವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆಗೆ ರಾಜ್ಯದ ಬಗ್ಗೆ ಏನು ಗೊತ್ತು? ಬಿಜೆಪಿಯವರು ಕುದುರೆ ವ್ಯಾಪಾರ ನಡೆಸುತ್ತಿರುವುದಕ್ಕೆ ನನ್ನ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಆ ಬಗ್ಗೆ ಸಮಯ ಬಂದಾಗ ಹೇಳುತ್ತೇನೆ ಎಂದರು.
ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇನೆ: ಪಿರಿಯಾಪಟ್ಟಣದ ಶಾಸಕ ಕೆ.ಮಹದೇವು, ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ.ವೆಂಕಟೇಶ್ ವಿರುದ್ಧ ಅವಹೇಳನಕಾರಿ ಯಾಗಿ ಮಾತನಾಡಿರುವುದಕ್ಕೆ ಪ್ರತಿಕ್ರಿಯಿ ಸಿದ ಸಿದ್ದರಾಮಯ್ಯ, ಟೀಕೆ ಮಾಡುವ ವೇಳೆ ಅವಹೇಳನಕಾರಿಯಾಗಿ ಮಾತ ನಾಡುವುದು ಸರಿಯಲ್ಲ. ಶಾಸಕ ಮಹ ದೇವು ವರ್ತನೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಾತ ನಾಡುತ್ತೇನೆ ಎಂದರು.
ಮೈಸೂರಲ್ಲಿ ಪ್ರೊ. ಬಿ.ಕೆ.ಎಸ್.ಅಯ್ಯಂಗಾರ್ ಜನ್ಮ ದಿನಾಚರಣೆ
ಮೈಸೂರು,ಡಿ.31-ವಿಶ್ವ ಯೋಗಾಚಾರ್ಯ ಪೆÇ್ರ.ಬಿ.ಕೆ.ಎಸ್. ಅಯ್ಯಂಗಾರ್ ಅವರ 100ನೇ ಜನ್ಮದಿನದ ಪ್ರಯುಕ್ತ ನಗರದ ಅಕ್ಕನಬಳಗ ಶಾಲೆಯಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿ ಯಿಂದ ನಡೆದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರುಗಳಾದ ಯೋಗ ಪ್ರಕಾಶ್, ಅನಂತ್, ಕೆ.ಅಜಿತ್, ಯೋಗ ನರಸಿಂಹ(ಮುರಳಿ), ಅಪೂರ್ವ ಸುರೇಶ್ ಅವರಿಗೆ ಬಿಕೆಎಸ್ ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವಕ ಕೆ.ರಘುರಾಂ ವಾಜ ಪೇಯಿ ಮಾತನಾಡಿ, ಜಗತ್ತಿನ ಎಲ್ಲ ಭಾಷೆ ಮತ್ತು ಸಂಸ್ಕೃತಿಗಳ ನಡುವೆ ‘ಬಿ.ಕೆ.ಎಸ್. ಅಯ್ಯಂಗಾರ್ ಸ್ಕೂಲ್ ಆಫ್ ಯೋಗ’ ಪರಿಕಲ್ಪನೆಯನ್ನು ಜನಮಾನಸದಲ್ಲಿ ನೆಲೆ ಯೂರುವಂತೆ ಮಾಡಿದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಹುಪಾಲು ಯೋಗ ಶಿಕ್ಷಕರು ಗುರೂಜಿ ಪೆÇ್ರ.ಬಿ.ಕೆ. ಅಯ್ಯಂ ಗಾರ್ ಅವರಿಂದ ಪ್ರೇರಿತರಾದವರು. ಇಂದು ವಿಶ್ವದಾದ್ಯಂತ ಯೋಗ ಎಂಬ ಭಾರತೀಯ ಕಲ್ಪನೆಯು ಹೆಚ್ಚು ಹೆಚ್ಚು ಸಾಕಾರಗೊಳ್ಳು ವಲ್ಲಿ ಪೆÇ್ರ.ಬಿ.ಕೆ.ಎಸ್. ಅಯ್ಯಂಗಾರ್ ಅವರ ಕೊಡುಗೆ ಅಪರಿಮಿತವಾದುದು ಎಂದರು.
ಅಯ್ಯಂಗಾರ್ ಅವರು ಬಾಲ್ಯದಲ್ಲಿ ಅನಾ ರೋಗ್ಯದಿಂದ ತತ್ತರಿಸಿ ಮೈಸೂರಿನಲ್ಲಿದ್ದ ತಮ್ಮ ಸೋದರಮಾವ ಪ್ರಸಿದ್ಧ ಯೋಗಿ ತಿರುಮಲ ಕೃಷ್ಣಮಾಚಾರ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾದರು. ಹೀಗೆ ಯೋಗ ಶಿಕ್ಷಣದ ಬಗ್ಗೆ ಒಲವು ಮತ್ತು ಶ್ರದ್ಧೆಯನ್ನು ಬೆಳೆಸಿಕೊಂಡ ಅಯ್ಯಂಗಾರ್ ಅವರು ಇದಕ್ಕೆ ಸಂಬಂಧಿಸಿದಂತೆ ಮಹತ್ವ ಪೂರ್ಣವಾದ ಕಾಯಕವನ್ನು ಮಾಡ ಬೇಕು ಎಂದು ಪುಣೆಗೆ ಹೋದರು. ಭಾಷೆ ಗೊತ್ತಿ ಲ್ಲದ ಪ್ರದೇಶದಲ್ಲಿ ತಮ್ಮ ಅಸ್ತಿತ್ವವನ್ನು ಕಂಡು ಕೊಂಡರು. ಕೆಲವೇ ವರ್ಷಗಳಲ್ಲಿ ತಮ್ಮ ಸತತ ಯೋಗಾಧ್ಯಯನ ಮತ್ತು ನಿರಂತರ ಪರಿಶ್ರಮವುಳ್ಳ ಕಾಯಕ ಸಾಧನೆಗಳಿಂದ ದೇಶ ವಿದೇಶಗಳಿಗೆ ಪರಿಚಿತರಾದರು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಬಿಕೆಎಸ್ ಅಯ್ಯಂಗಾರ್‍ರವರ ಜೀವನ ಚರಿತ್ರೆಯ ಪುಸ್ತಕವನ್ನು ವಿತರಿಸಿ ಯೋಗದ ಬಗ್ಗೆ ಅರಿವು ಮೂಡಿಸಲಾಯಿತು. ವೆಂಗೀಪುರಂ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್‍ನ ಎನ್.ಎಸ್.ಸತ್ಯನಾರಾಯಣ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಸುಯೋಗ್ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಪಿ. ಯೋಗಣ್ಣ, ಅಕ್ಕನ ಬಳಗ ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣವತೀ, ಜಯಸಿಂಹ ಶ್ರೀಧರ್ ಇತರರು ಉಪಸ್ಥಿತರಿದ್ದರು.