ಮೈಸೂರು ಪೊಲೀಸರಿಂದ ‘ಆಪರೇಷನ್ ಈಗಲ್’
ಮೈಸೂರು

ಮೈಸೂರು ಪೊಲೀಸರಿಂದ ‘ಆಪರೇಷನ್ ಈಗಲ್’

January 1, 2019

ಮೈಸೂರು: ಮೈಸೂರು ನಗರ ಪೊಲೀಸರು ರೌಡಿಶೀಟರ್‍ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ‘ಆಪರೇಷನ್ ಈಗಲ್’ (ಹದ್ದು) ಹೆಸರಿ ನಲ್ಲಿ ಸಮಾಜಘಾತುಕ ಶಕ್ತಿಗಳ ಮೇಲೆ ಅಕ್ಷರಶಃ ಹದ್ದಿನ ಕಣ್ಣಿಟ್ಟಿದ್ದಾರೆ.

‘ಆಪರೇಷನ್ ಈಗಲ್’ನ ಭಾಗವಾಗಿ ಡಿ. 29 ಮತ್ತು 30 ರಂದು 90 ರೌಡಿ ಶೀಟರ್‍ಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ ನಗರ ಪೊಲೀಸರು, ಮಾರಕಾಸ್ತ್ರಗಳಿಗಾಗಿ ತಪಾಸಣೆ ನಡೆಸಿದರು. ಇದೇ ವೇಳೆ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಅವರ ನಿರ್ದೇ ಶನದ ಮೇರೆಗೆ ಡಿಸಿಪಿ ಡಾ.ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಲಿಂಗಪ್ಪ, ರೌಡಿ ಪ್ರತಿಬಂ ಧಕ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಮಲ್ಲೇಶ್ ರೌಡಿಶೀಟರ್‍ಗಳ ಪರೇಡ್ ನಡೆ ಸಿದರು.

ಇನ್ನೊಂದೆಡೆ ಕೃಷ್ಣರಾಜ, ದೇವರಾಜ ಮತ್ತು ನರಸಿಂಹರಾಜ ವಿಭಾಗಗಳ ಲ್ಲಿಯೂ ಅಲ್ಲಿನ ಎಸಿಪಿಗಳ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಿ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗ ದಂತೆ ಸಾರ್ವಜನಿಕರಿಗೆ ಬೆದರಿಕೆ ಒಡ್ಡದಂತೆ, ಹಫ್ತಾ ವಸೂಲಿ ಮಾಡದಂತೆ, ಭೂ ವ್ಯಾಜ್ಯಗಳಲ್ಲಿ ಭಾಗಿಯಾಗದಂತೆ, ಗ್ಯಾಂಗ್ ವಾರ್‍ಗಳಿಗೆ ಅವಕಾಶ ಮಾಡಿಕೊಡದಂತೆ ಎಚ್ಚರಿಸಿ ಕಳುಹಿಸಲಾಗಿದೆ. ಮುಖ್ಯವಾಗಿ ಹೊಸ ವರ್ಷಾಚರಣೆ ನೆಪದಲ್ಲಿ ಸಮಾ ಜಕ್ಕೆ, ಸಾರ್ವಜನಿಕರಿಗೆ ತೊಂದರೆ ಮಾಡ ದಂತೆಯೂ ಎಚ್ಚರಿಕೆ ನೀಡಲಾಗಿದೆ ಎಂದು ಸುಬ್ರಹ್ಮಣ್ಯೇಶ್ವರರಾವ್ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

Translate »