ವಿಷ ಪ್ರಸಾದ ಆರೋಪಿಗಳ ಪರ ವಕಾಲತು ವಿರೋಧಿಸಿ ಪ್ರತಿಭಟನೆ
ಮೈಸೂರು

ವಿಷ ಪ್ರಸಾದ ಆರೋಪಿಗಳ ಪರ ವಕಾಲತು ವಿರೋಧಿಸಿ ಪ್ರತಿಭಟನೆ

January 1, 2019

ಮೈಸೂರು,ಡಿ.31(ಎಂಟಿವೈ)- ಚಾಮರಾಜ ನಗರ ಜಿಲ್ಲೆಯ ಹನೂರು ಹೋಬಳಿ ಕಿಚ್ ಗುತ್ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿ 17 ಜನರ ಸಾವಿಗೆ ಕಾರಣ ರಾದ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಮೈಸೂರಿನ ನ್ಯಾಯಾ ಲಯದ ಮುಂದೆ ಮಹಾತ್ಮಗಾಂಧಿ ಪುತ್ಥಳಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಆರೋಪಿಗಳ ಪರ ವಕಾಲತ್ತು ವಹಿಸ ಬಾರದೆಂದು ಚಾಮರಾಜನಗರ ಜಿಲ್ಲೆಯ ವಕೀಲರ ಸಂಘ ನಿರ್ಣಯ ಕೈಗೊಂಡಿದೆ. ಮೈಸೂರು ಜಿಲ್ಲಾ ವಕೀಲರ ಸಂಘವೂ ಇದೇ ನಿರ್ಣಯ ಅಂಗೀಕರಿಸಿ ಆರೋಪಿ ಗಳ ಪರ ವಕಾಲತು ವಹಿಸದಂತೆ ವಕೀಲ ರಿಗೆ ಸೂಚನೆ ನೀಡಬೇಕು. ಆ ಮೂಲಕ, ಘೋರ ಪ್ರಮಾದವೆಸಗಿರುವ ನಿರ್ದಯಿ ಗಳಿಗೆ ತಕ್ಕ ಶಿಕ್ಷೆ ಕೊಡಿಸುವಂತೆ ವೇದಿ ಕೆಯ ಅಧ್ಯಕ್ಷ ಬಾಲಕೃಷ್ಣ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಸದಸ್ಯರಾದ ಗೋಪಿ, ಸಿದ್ದೇಗೌಡ, ಮಾದಪ್ಪ, ಗೈಡ್ ಚಂದ್ರು, ಕಾವೇರಮ್ಮ ಮತ್ತಿತರರಿದ್ದರು.

Translate »