ಇಂದು ಬ್ರಾಹ್ಮಣ ಸಂಘದ   ಅಧ್ಯಕ್ಷ ಡಿ.ಟಿ.ಪ್ರಕಾಶ್ ಹುಟ್ಟುಹಬ್ಬ
ಮೈಸೂರು

ಇಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹುಟ್ಟುಹಬ್ಬ

January 1, 2019

ಮೈಸೂರು, ಡಿ. 31- ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಹಾಗೂ ಶಾಶ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಡಿ.ಟಿ. ಪ್ರಕಾಶ್ ಅವರು ನಾಳೆ (ಜ. 1) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದರ ಅಂಗವಾಗಿ ಸೋಮವಾರ ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ವಿಪ್ರ ಸಹಾಯವಾಣಿ ವತಿಯಿಂದ ಡಿ.ಟಿ. ಪ್ರಕಾಶ್ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್. ಶ್ರೀಧರಮೂರ್ತಿ, ವಿಪ್ರ ಸಹಾಯವಾಣಿ ಸಂಚಾಲಕ ಜಯಸಿಂಹ ಶ್ರೀಧರ್, ವಿಕ್ರಂ ಅಯ್ಯಂಗಾರ್, ಕೆ.ಎಂ. ನಿಶಾಂತ್, ರಂಗನಾಥ್, ಶ್ರೀನಿವಾಸಪ್ರಸಾದ್, ರವೀಶ್ ಇನ್ನಿತರರಿದ್ದರು.

ನಾಳೆ ಅವರ ಹುಟ್ಟುಹಬ್ಬದ ಅಂಗವಾಗಿ ಉತ್ತನಹಳ್ಳಿ ರಿಂಗ್ ರಸ್ತೆಯಲ್ಲಿರುವ ಭಾರತೀ ಯೋಗಧಾಮದಲ್ಲಿ ಬೆಳಿಗ್ಗೆ 11 ಗಂಟೆಗೆ ವಿಶೇಷ ಪೂಜೆ ಮತ್ತು ಗೋವುಗಳಿಗೆ ಫಲ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಚಾಮುಂಡಿಪುರಂನಲ್ಲಿರುವ ಬಾಲಬೋಧಿನಿ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.
ಮಾಡಲಾಗಿದೆ. ಚಾಮ ರಾಜನಗರ ವನ್ಯಜೀವಿ ಉಪವಿಭಾಗದ ಎಸಿಎಫ್ ಪಿ. ರೂಥರ್ ಅವರಿಗೆ ಪದೋನ್ನತಿ ನೀಡಿ ಕುದುರೆಮುಖ ವೈಲ್ಡ್‍ಲೈಫ್ ವಿಭಾಗದ ಡಿಎಫ್‍ಓ ಆಗಿ ವರ್ಗಾವಣೆ ಮಾಡಲಾಗಿದೆ.

Translate »