ನಾಳೆಯಿಂದ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ
ಹಾಸನ

ನಾಳೆಯಿಂದ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ

May 15, 2019

ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಬಿತ್ತನೆ ಬೀಜ ವಿತರಣೆ, ಶೇ. 50ರಷ್ಟು ಸಹಾಯಧನ

ಹಾಸನ: ಜಿಲ್ಲೆಯ ಪ್ರಮುಖ ಬೆಳೆ ಆಲೂಗಡ್ಡೆಯನ್ನು ಪ್ರಸಕ್ತ ವರ್ಷ ಅಂದಾಜು 15 ಸಾವಿರ ಹೆಕ್ಟೇರ್ ಪ್ರದೇಶ ದಲ್ಲಿ ಬಿತ್ತನೆ ಮಾಡುವ ನಿರೀಕ್ಷೆಯಿದ್ದು, ಮೇ 16ರಿಂದ ಎಪಿಎಂಸಿಯಲ್ಲಿ ರೈತರಿಗೆ ಮೇ 16ರಿಂದ ರೈತರಿಗೆ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತದೆ.

ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಮೇ 13ರಂದು ನಡೆದ ಸಭೆಯಲ್ಲಿ ಅಧಿ ಕಾರಿಗಳು, ಆಲೂಗಡ್ಡೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು, ರೈತರು ಮತ್ತು ವರ್ತಕರೊಂದಿಗೆ ಚರ್ಚಿಸಲಾಗಿದ್ದು, ಬಿತ್ತನೆಬೀಜ ಮಾರಾಟ ಪ್ರಾರಂಭಿಸಲು ತೀರ್ಮಾನಿಸಲಾಯಿತು. ಈಗಾಗಲೇ ಜಿಲ್ಲೆಯ 8 ಶೀತಲಗೃಹಗಳಲ್ಲಿ 20,324.60 ಮೆಟ್ರಿಕ್ ಟನ್ ಆಲೂಗಡ್ಡೆ ಸಂಗ್ರಹವಾಗಿದೆ.

ಜಿಲ್ಲೆಯಲ್ಲಿ ಬಿತ್ತನೆಗೆ ಸೂಕ್ತ ಮಳೆ ಯಾಗುತ್ತಿರುವ ಕುರಿತು ವಿವಿಧ ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಆಲೂಗಡ್ಡೆ ಬಿತ್ತನೆ ಬೀಜಕ್ಕೆ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು. ಈ ಕುರಿತು ರೈತರಿಗೆ ಕರಪತ್ರ ವಿತರಿಸುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ ಮೂಲಕ ಪ್ರಚಾರಕ್ಕೆ ಕ್ರಮವಹಿಸುವಂತೆ ಅಧಿ ಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಎಪಿಎಂಸಿಯಲ್ಲಿ ಆಲೂಗಡ್ಡೆ ಮಾರಾಟ ಸಮಯ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು. ಜಿಲ್ಲೆಯಲ್ಲಿ ಈಗಾ ಗಲೇ ಸ್ಥಳಗಳನ್ನು ಗುರುತಿಸಲಾಗಿದ್ದು, ತೆರೆದ ಮಾರುಕಟ್ಟೆಗಳ ಮೂಲಕ ಬಿತ್ತನೆ ಬೀಜಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ವಿತರಣಾ ಸಂದರ್ಭ ದಲ್ಲಿ ಯಾವುದೇ ರೀತಿಯ ಗಲಾಟೆಗೆ ಆಸ್ಪದ ನೀಡದಂತೆ ಎಚ್ಚರವಹಿಸಲು ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು.

ದರ ನಿಗದಿಗೆ ಸಂಬಂಧಿಸಿದಂತೆ ರೈತರು ಮತ್ತು ವರ್ತಕರ ಜೊತೆ ಚರ್ಚೆ ನಡೆಸಿ ಮಾತನಾಡಿದ ಅವರು, ರೈತರಿಗೆ ಹೊರೆ ಯಾಗದ ರೀತಿಯಲ್ಲಿ ದರ ನಿಗದಿ ಮಾಡು ವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ವರ್ತಕರು ಸಹಕರಿಸಬೇಕು ಎಂದರಲ್ಲದೆ, ರೈತರಿಂದ ಯಾವುದೇ ರೀತಿಯ ದೂರು ಗಳು ಬಾರದ ಹಾಗೆ ಬಿತ್ತನೆ ಬೀಜಗಳನ್ನು ನೀಡಲು ವರ್ತಕರಿಗೆ ಸೂಚಿಸಿದರು.

ಆಲೂಗಡ್ಡೆ ಬೆಳೆಗೆ ಅಗತ್ಯವಿರುವ ಸಸ್ಯ ಸಂರಕ್ಷಣೆ ಔಷಧಿಗಳು ಹಾಗೂ ರಾಸಾ ಯನಿಕ ಗೊಬ್ಬರಗಳು ಎಪಿಎಂಸಿ ಆವ ರಣದಲ್ಲೇ ರೈತರಿಗೆ ದೊರೆಯುವಂತೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಎಪಿ ಎಂಸಿ ಆವರಣದಲ್ಲಿ ಕಂದಾಯ ಇಲಾಖೆ ಯಿಂದ ಸಂಬಂಧಪಟ್ಟ ವೃತ್ತದ (ಖeveಟಿue ಅiಡಿಛಿಟe) ಅಧಿಕಾರಿಗಳ ಮೂಲಕ ರೈತರಿಗೆ ಪಹಣಿ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್‍ಸಿಂಗ್ ರಾಥೋಡ್ ಮಾತನಾಡಿ, ಆಲೂಗೆಡ್ಡೆ ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು. ವರ್ತಕರು ತಮ್ಮ ಒಂದು ಸಮಿತಿ ರಚನೆ ಮಾಡಿ ಆ ಮೂಲಕ ರೈತರ ವಾಗ್ವಾದ ಹಾಗೂ ಇನ್ನಿತರ ಸಮಸ್ಯೆ ಗಳು ಕಂಡು ಬಂದಲ್ಲಿ ಅವುಗಳನ್ನು ಬಗೆ ಹರಿಸಲು ಸಹಕರಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ತೋಟಗಾರಿಕೆ ಇಲಾ ಖೆಯ ಉಪನಿರ್ದೇಶಕ ಮಂಜುನಾಥ್, ತಹಸೀಲ್ದಾರ್ ಶ್ರೀನಿವಾಸಯ್ಯ, ವಿಜ್ಞಾನಿ ಗಳಾದ ಸಂಧ್ಯಾ, ಸೌಮ್ಯ, ಜಂಟಿ ಕೃಷಿ ನಿರ್ದೇಶಕ ಮಧುಸೂದನ್, ವರ್ತಕರ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.

ನಾಳೆಯಿಂದ ಸಸ್ಯ ಸಂತೆ ಕಾರ್ಯಕ್ರಮ
ಹಾಸನ: ತೋಟಗಾರಿಕೆ ಇಲಾಖೆಯಿಂದ ಮೇ 16ರಿಂದ 20ರವರೆಗೆ ಹಾಸನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸಸ್ಯಸಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಅರ್ಷಿಯಾ ತಬಸ್ಸುಂ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿರುವ ಉತ್ತಮ ಗುಣಮಟ್ಟದ ವಿವಿಧ ತೋಟಗಾರಿಕೆ ಬೆಳೆಗಳ ಕಸಿ- ಸಸಿಗಳನ್ನು ಇಲಾಖಾ ದರದಂತೆ ಮಾರಾಟ ಮಾಡಲಾಗುವುದು. ಆಸಕ್ತಿಯಿರುವ ರೈತರು ಮತ್ತು ಸಾರ್ವ ಜನಿಕರು ಸಸ್ಯಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಗುಣಮಟ್ಟದ ಸಸಿಗಳನ್ನು ಖರೀದಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ರೈತ ಬಾಂಧವರಲ್ಲಿ ಕೋರಿದೆ ಹಾಗೂ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಬೇಡಿಕೆಯನು ಸಾರ ಉತ್ತಮ ಗುಣಮಟ್ಟದ ತರಕಾರಿ ಸಸಿಗಳನ್ನು ಉತ್ಪಾದಿಸಿ ಮಾರಾಟ ಮಾಡಲಾಗುವುದು ಆದ್ದರಿಂದ ಆಸಕ್ತ ರೈತರು ತಮ್ಮ ಹೆಸರನ್ನು ನೋಂದಾಯಿಸಿ ಅವಶ್ಯಕತೆಯಿರುವ ಸಸಿ, ತಳಿಗಳ ಬೇಡಿಕೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ರಾಜ್ಯವಲಯ, ಹಾಸನ ಕಚೇರಿ ಅಥವಾ ದೂರವಾಣಿ ಸಂಖ್ಯೆ 08172-269995 ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ರೈತರಿಗಾಗಿ ಸಹಾಯವಾಣಿ
ತೋಟಗಾರಿಕೆ ಇಲಾಖೆಯಿಂದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ಮಾಹಿತಿ, ಸಲಹಾ ಕೇಂದ್ರದ ಅಧಿಕಾರಿಗಳನ್ನು, ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸುವುದು.

ತಾಂತ್ರಿಕ ವಿವರಗಳಿಗೆ: ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಹಾಸನ ದೂ. 08172-268387, 9448999223, ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಆಲೂರು-08170-218981, 8105860661, ಅರಕಲ ಗೂಡು- 08175-221491, 7019205501, ಅರಸೀಕೆರೆ- 08174-231808, 96327 45241, ಬೇಲೂರು- 08177-222070, 9916392080, ಚನ್ನರಾಯಪಟ್ಟಣ- 08176-252282, 9448238920, ಹಾಸನ- 08172-262390, 9900238655 ಹೊಳೆನರಸೀಪುರ- 08175-272970, 8453563540 ಅನ್ನು ಸಂಪರ್ಕಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆ ವಿವರ
ಆಲೂಗಡ್ಡೆ ಬೆಳೆ ಪ್ರೋತ್ಸಾಹಧನ ಪಡೆಯಲು ರೈತರು ಎಪಿಎಂಸಿಗೆ ಬರುವ ಸಮಯದಲ್ಲಿ ಅರ್ಜಿ ನಮೂನೆ, ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ (ಬ್ಯಾಂಕ್ ಪಾಸ್ ಪುಸ್ತಕದ ನಕಲು), ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತ ರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Leave a Reply

Your email address will not be published. Required fields are marked *