ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಹಾಸನ

ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

May 15, 2019

ಅರಸೀಕೆರೆ: ವಾಸವಿ ಜಯಂತಿ ಕಾರ್ಯಕ್ರಮದ ಅಂಗವಾಗಿ ನಗರದ ಪೇಟೆ ಬೀದಿಯಲ್ಲಿರುವ ಶ್ರೀ ಕನ್ನಿಕಾ ಪರಮೇ ಶ್ವರಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಮಂಗಳವಾರ ನೆರವೇರಿತು.

ವಿಶೇಷ ಹೂವಿನ ಅಲಂಕಾರ ಮಾಡ ಲಾಗಿದ್ದ ಅಮ್ಮನವರಿಗೆ ಪ್ರಾತಃಕಾಲದ ಲ್ಲಿಯೇ 102 ಕಳಸಗಳೊಂದಿಗೆ ಮಹಿಳೆ ಯರು ಗಂಗೆಯನ್ನು ತರುವುದರ ಮೂಲಕ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಿಸಲಾ ಯಿತು. ಎಲ್ಲಾ ದೇವರುಗಳಿಗೆ ಫಲ ಸಮ ರ್ಪಣೆ, ಶ್ರೀಮಹಾಗಣಪತಿ ಹೋಮ, ಮೂಲ ಮಂತ್ರ ಹೋಮದೊಂದಿಗೆ ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು.

ಪೂರ್ಣಾಹುತಿ ನಂತರ ತೊಟ್ಟಿಲು ಸೇವೆ, ಕುಂಭಾಭಿಷೇಕ, ಪಂಚಾಮೃತಾಭಿ ಷೇಕ, ಬಾಲನಾಗರ ಸೇವೆ, ಅಷ್ಟಾವಧನ ಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ವಿದ್ಯುತ್ ದೀಪಗಳ ಅಲಂಕೃತ ರಥದಲ್ಲಿ ಅಮ್ಮನವ ರನ್ನು ಕುಳ್ಳಿರಿಸಿ ನಗರದ ಪ್ರಮುಖ ಬೀದಿ ಗಳಲ್ಲಿ ಉತ್ಸವ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಶಿವ ಲಿಂಗೇಗೌಡ, ತಹಸೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಆಯುಕ್ತ ಚಲಪತಿ ಇವರುಗಳು ಭಾಗವಹಿಸಿ ದೇವಿ ದರ್ಶನ ಪಡೆದರು. ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಸ್.ಅರುಣ್‍ಕುಮಾರ್, ಮುಖಂಡ ರಾದ ಕೆಪಿಎಸ್ ವಿಶ್ವನಾಥ್, ಪಾರ್ಥಸಾರಥಿ, ಮುರಳೀಧರ್, ಎಸ್‍ಬಿಟಿ ಬಾಬು, ಟಿ.ಎಸ್. ಜಗದೀಶ್, ಅಶೋಕ್ ಸೇರಿದಂತೆ ವಾಸವಿ ಮಹಿಳಾ ಮತ್ತು ಯುವಕ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Translate »