ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ದಂಪತಿಗೆ ಅಭಿನಂದನೆ
ಮೈಸೂರು

ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ದಂಪತಿಗೆ ಅಭಿನಂದನೆ

May 15, 2019

ಮೈಸೂರು: ತೋಂಟದಾರ್ಯ ಅಭಿನಂದನಾ ಸಮಿತಿ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಹಿರಿಯ ವಕೀಲ ತೋಂಟದಾರ್ಯ ಅವರನ್ನು ಮಂಗಳ ವಾರ ಅಭಿನಂದಿಸಲಾಯಿತು.

ಮೈಸೂರಿನ ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಶ್ರೀ ಜ್ಞಾನಯೋಗಾ ಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಮ್ಮುಖ ಮತ್ತು ವಿವಿಧ ಕ್ಷೇತ್ರಗಳ ಗಣ್ಯರು, ಹಿತೈಷಿ ಗಳು ಹಾಗೂ ಅಭಿಮಾನಿಗಳ ಉಪಸ್ಥಿತಿ ಯಲ್ಲಿ ಪತ್ನಿ ಡಾ.ಕಮಲಾಕುಮಾರಿ ಅವ ರೊಂದಿಗೆ ತೋಂಟದಾರ್ಯ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ಅಭಿನಂದನಾ ಸಮಾರಂಭ ಉದ್ಘಾಟಿ ಸಿದ ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ ಮಾತನಾಡಿ, ರಾಜಕಾರಣಿಗಳ ಬಗ್ಗೆ ಒಳ್ಳೆಯ ಅಭಿ ಪ್ರಾಯ ಬಹಳ ಅಪರೂಪ. ಅಂತಹ ಅಪರೂಪದ ವ್ಯಕ್ತಿತ್ವ ತೋಂಟದಾರ್ಯ ಅವರದು. ರಾಷ್ಟ್ರದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿ ದೇಶಾಭಿಮಾನ ಮೆರೆದವರು. ದೇಶದ ಹಿತಕ್ಕಾಗಿ ಹಾಗೂ ಸಮಾಜದ ಏಳಿಗೆ ಗಾಗಿ ಕೆಲಸ ಮಾಡಿದವರು. ರಾಜಕಾರಣ ದಲ್ಲಿ ಒಳ್ಳೆಯವರು ಇದ್ದಾರೆ ಎಂಬುದನ್ನು ಇವರು ತೋರಿಸಿಕೊಟ್ಟಿದ್ದು, ಇಂತಹವ ರಿಗೆ ಇಂದು ಅಭಿನಂದಿಸಿರುವುದು ಸಮಾಜಕ್ಕೆ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಅಭಿನಂದನಾ ನುಡಿಗಳನ್ನಾಡಿದ ಆರ್‍ಎಸ್‍ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಮಾತನಾಡಿ, ತೋಂಟ ದಾರ್ಯ ಅವರೊಂದಿಗಿನ ನನ್ನ ಒಡನಾಟ 50 ವರ್ಷಗಳದ್ದು. ಅಂದಿನಿಂದಲೂ ನಮ್ಮಿಬ್ಬರ ಒಡನಾಟಕ್ಕೆ ಯಾವುದೇ ಅಡ್ಡಿ-ಆತಂಕ ಎದುರಾಗಿಲ್ಲ. ಸತ್ಕಾರ್ಯಗಳಲ್ಲಿ ತೊಡಗುವ ಜೆಎಸ್‍ಎಸ್ ಹಾಗೂ ಆರ್ ಎಸ್‍ಎಸ್ ಪರಿವಾರಗಳಲ್ಲಿ ತೋಂಟ ದಾರ್ಯ ಬೆಳೆದು ಬಂದವರು. ಅಲ್ಲದೆ, ಈ ಎರಡು ಪರಿವಾರಗಳ ಸಾಂಸ್ಕøತಿಕ ರಾಯಭಾರಿಯಂತೆ ಕೆಲಸ ಮಾಡಿದ್ದಾರೆ. ಆರ್‍ಎಸ್‍ಎಸ್ ಸದಸ್ಯರು ಕೇವಲ ಸದಸ್ಯ ರಾಗಿ ಮಾತ್ರ ಉಳಿಯುವುದಿಲ್ಲ. ಬದ ಲಾಗಿ ಆರ್‍ಎಸ್‍ಎಸ್ ಪರಿವಾರದ ಅವಿ ಭಾಜ್ಯ ಅಂಗವಾಗಿ ಒಡನಾಡಿಗಳಾಗಿರು ತ್ತಾರೆ. ತ್ಯಾಗ-ಬಲಿದಾನಕ್ಕೆ ಆರ್‍ಎಸ್‍ಎಸ್ ಎಂದೂ ಹಿಂದೇಟು ಹಾಕುವುದಿಲ್ಲ. ಅಂತಹ ಪರಿವಾರದ ಸಾಂಸ್ಕøತಿಕ ರಾಯ ಭಾರಿ ತೋಂಟದಾರ್ಯ. ಜೆಎಸ್‍ಎಸ್ ಹಾಗೂ ಆರ್‍ಎಸ್‍ಎಸ್ ಪರಿವಾರದ ಸಾಂಸ್ಕø ತಿಕ ಪ್ರಚಾರ ಕಾರ್ಯವನ್ನು ಅವರು ನಿರ್ವಿಘ್ನ ವಾಗಿ ಮುಂದುವರೆಸಲಿ ಎಂದು ಆಶಿಸಿದರು.

ಒಬ್ಬ ವ್ಯಕ್ತಿಗೆ ಜೀವನದಲ್ಲಿ ಪ್ರಚಾರ, ಸಂಪತ್ತು ಹಾಗೂ ಸ್ಥಾನಮಾನ ಏನೆಲ್ಲಾ ದಕ್ಕಿದರೂ ಬದ್ಧತೆ ಇಲ್ಲವಾದರೆ ಅದು ಉನ್ನತ ವ್ಯಕ್ತಿತ್ವ ಆಗಲಾರದು. ವ್ಯಕ್ತಿತ್ವ ಎಂದರೆ ತನ್ನ ಸಂಸ್ಥೆ ಹಾಗೂ ಅದರ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿರುವುದಾಗಿದ್ದು, ಅಂತಹ ವ್ಯಕ್ತಿತ್ವದೊಂದಿಗೆ ಅಜಾತಶತ್ರು ರಾಜಕಾರಣಿಯಾಗಿ ರೂಪುಗೊಂಡವರು ತೋಂಟದಾರ್ಯ. ಅವರ ಸೇವಾ ಹಿರಿತನ ಗುರುತಿಸಿ ವಿಧಾನ ಪರಿಷತ್ ಸದಸ್ಯ ಸ್ಥಾನವೂ ಅವರಿಗೆ ಒಲಿದು ಬಂದಿತು. ಈ ಸ್ಥಾನ ವನ್ನು ಅವರು ಅಧಿಕಾರ ಎಂದು ಭ್ರಮಿಸದೇ ಜವಾಬ್ದಾರಿ ಎಂದು ಸಮರ್ಥ ವಾಗಿ ನಿಭಾಯಿಸಿದರು. ಈ ಸಂದರ್ಭದಲ್ಲಿ ಪಕ್ಷಕ್ಕಾಗಿ ಅವರು ತೋರಿದ ಬದ್ಧತೆ ಎಲ್ಲರೂ ಮೆಚ್ಚುವಂತದ್ದು. ಎಂತಹ ವೇಳೆಯಲ್ಲೂ ಪಕ್ಷದ ಬಗೆಗಿನ ಅವರ ಬದ್ಧತೆ ಎಳ್ಳಷ್ಟು ಅಲುಗಾಡಿಲ್ಲ. ಎಂದೂ ಅವಕಾಶವಾದಿ ರಾಜಕಾರಣಿಯಾಗಿ ವರ್ತಿಸಿಲ್ಲ. ಇದು ಅವರ ರಾಜಕೀಯ ಬದ್ಧತೆಯ ಪ್ರತೀಕ ಎಂದು ಅಭಿಮಾನ ವ್ಯಕ್ತಪಡಿಸಿದರು.

`ಶಕ್ತಿ ವಿಶಿಷ್ಟಾದ್ವೈತ’ ಹಾಗೂ `ಪಂಚ ಪೀಠಗಳ ಪರಂಪರೆ’ ಕೃತಿಗಳನ್ನು ಬಿಡು ಗಡೆಗೊಳಿಸಿ ಮಾತನಾಡಿದ ಶ್ರೀ ಕುಂದೂರು ಮಠದ ಡಾ.ಶ್ರೀ ಶರತ್‍ಚಂದ್ರ ಸ್ವಾಮೀಜಿ, `ಪಂಚಪೀಠಗಳ ಪರಂಪರೆ’ ಕೃತಿ ಮೂಲತಃ ಸಂಶೋಧನಾ ಗ್ರಂಥ ಎನ್ನಲಾಗದು. ಆದರೆ ಪಂಚಪೀಠಗಳ ಬಗ್ಗೆ ಪರಿಚ ಯಾತ್ಮಕ ಕೃತಿಯಾಗಿದೆ. `ಶಕ್ತಿ ವಿಶಿಷ್ಟಾ ದ್ವೈತ’ ಕೃತಿ ವೀರಶೈವ ದರ್ಶನ ಮಾಡಿಸ ಲಿದೆ ಎಂದರಲ್ಲದೆ, ತೋಂಟದಾರ್ಯರು ಬಹಳ ಸರಳ ಸಜ್ಜನಿಕೆಯ ವ್ಯಕ್ತಿತ್ವದವ ರಾಗಿದ್ದು, ಮೃದು ಹಾಗೂ ಮಿತ ಭಾಷಿಗಳಾಗಿದ್ದಾರೆ. ಅವರು ಸಾಮಾಜಿಕ ಕಳಕಳಿಯೊಂದಿಗೆ ರಾಜಕಾರಣದಲ್ಲಿ ಇನ್ನಷ್ಟು ಉನ್ನತ ಸ್ಥಾನಮಾನ ಅಲಂಕರಿ ಸುವಂತಾಗಲಿ ಎಂದು ಹಾರೈಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಡಾ.ಗೊ.ರು. ಚನ್ನ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿ ವರೂ ಆದ ಶಾಸಕ ಎಸ್.ಎ.ರಾಮದಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅತಿಥಿಗಳಾಗಿ ಪಾಲ್ಗೊಂ ಡಿದ್ದರು. ಲೇಖಕ ಗುರು ಎಸ್.ಬಳೆ, ಅಭಿ ನಂದನಾ ಸಮಿತಿಯ ಗೊ.ರು.ಪರಮೇಶ್ವ ರಪ್ಪ ಸೇರಿದಂತೆ ವಿವಿಧ ಕ್ಷೇತ್ರದ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Translate »