ಜೂನ್ 2ರಿಂದ ಬಂಡೀಪುರ ಸಫಾರಿ ಸೇವೆ ಸ್ಥಳಾಂತರ
ಮೈಸೂರು

ಜೂನ್ 2ರಿಂದ ಬಂಡೀಪುರ ಸಫಾರಿ ಸೇವೆ ಸ್ಥಳಾಂತರ

May 15, 2019

ಮೈಸೂರು: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗ ಸೂಚಿಗಳನ್ವಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದಲ್ಲಿ ಹಾಲಿ ನಡೆಸುತ್ತಿರುವ ಪರಿಸರ ಪ್ರವಾಸೋದ್ಯಮದ ಸಫಾರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಜಿ.ಎಸ್ ಬೆಟ್ಟ ವಲಯದ ಮೇಲುಕಾಮನಹಳ್ಳಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 181ರ ಪಕ್ಕದ ವಿಶೇಷ ಹುಲಿ ಸಂರಕ್ಷಣಾದಳದ ಕ್ಯಾಂಪಸ್‍ಗೆ ಜೂನ್ 2ರಿಂದ ಕಾರ್ಯರೂಪಕ್ಕೆ ಬರುವಂತೆ ಸ್ಥಳಾಂತರ ಮಾಡಲಾಗುವುದು.

ಸಫಾರಿ ಕೈಗೊಳ್ಳಲು ಇಚ್ಛಿಸುವವರು ಹಾಗೂ ಸಾರ್ವಜನಿಕರು ಜೂನ್ 2 ರಿಂದ ಸ್ಥಳಾಂತರಗೊಂಡ ಸ್ಥಳದಲ್ಲಿ ಸಫಾರಿ ಸೇವೆಗಳನ್ನು ಉಪಯೋಗಿಸಿ ಕೊಳ್ಳುವಂತೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »