ಪಾಲಿಕೆಯಿಂದ ಒಣಗಿದ ಮರದ ರೆಂಬೆ ತೆರವು ಕಾರ್ಯಾಚರಣೆ
ಮೈಸೂರು

ಪಾಲಿಕೆಯಿಂದ ಒಣಗಿದ ಮರದ ರೆಂಬೆ ತೆರವು ಕಾರ್ಯಾಚರಣೆ

May 15, 2019

ಮೈಸೂರು: ಭಾರೀ ಗಾಳಿ ಸಹಿತ ಮಳೆಗಾಲ ಆರಂಭವಾಗಿರುವುದರಿಂದ ಮೈಸೂರು ನಗರದಲ್ಲಿ ಒಣಗಿದ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರದ ರೆಂಬೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಯನ್ನು ಮೈಸೂರು ಮಹಾನಗರ ಪಾಲಿಕೆ ಆರಂಭಿಸಿದೆ.

ರೆಂಬೆಗಳನ್ನು ಕತ್ತರಿಸುವ ಉಪ ಕರಣ ಹಾಗೂ ಟ್ರೆಕ್‍ಗಳನ್ನು ಬಳಸಿ ರೈಲ್ವೆ ಸ್ಟೇಷನ್ ಸರ್ಕಲ್‍ನಿಂದ ಆಯು ರ್ವೇದ ಕಾಲೇಜು ಸರ್ಕಲ್‍ವರೆಗೆ ಇಂದು ಬೆಳಿಗ್ಗೆ ಪಾಲಿಕೆ ಸಿಬ್ಬಂದಿ ಒಣಗಿದ ರೆಂಬೆಗಳನ್ನು ಕತ್ತರಿಸಿ ತೆರವುಗೊಳಿಸಿ ದರು. ಗಾಳಿ, ಮಳೆ, ಸಿಡಿಲಿಗೆ ಒಣಗಿದ ರೆಂಬೆಗಳು ವಾಹನಗಳು, ಜನರ ಮೇಲೆ ಮುರಿದು ಬಿದ್ದು ಅಪಾಯ ಸಂಭವಿಸುವುದರಿಂದ ಮುಂಜಾಗ್ರತೆ ಯಾಗಿ ಮೈಸೂರು ನಗರದಾದ್ಯಂತ ಎಲ್ಲಾ ಪ್ರಮುಖ ರಸ್ತೆಗಳ ಎರಡೂ ಕಡೆ ಇರುವ ಮರಗಳ ಒಣಗಿದ ಕೊಂಬೆಗಳನ್ನು ತೆರವುಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ತಿಳಿಸಿದ್ದಾರೆ.

Translate »