ಹಿರಿಯರಿಗಾಗಿ ಕಿರಿಯರು ಸಮಯ ಮೀಸಲಿಡಿ: ಸಂತೋಷ್
ಹಾಸನ

ಹಿರಿಯರಿಗಾಗಿ ಕಿರಿಯರು ಸಮಯ ಮೀಸಲಿಡಿ: ಸಂತೋಷ್

May 15, 2019

ಅರಸೀಕೆರೆ: ಮನುಷ್ಯನಿಗೆ ವಯಸ್ಸು ಹೆಚ್ಚಾದಂತೆ ಮನಸ್ಸು ಪರಿಪಕ್ವ ವಾಗುತ್ತದೆ. 60ವರ್ಷ ದಾಟಿದ ಹಿರಿಯ ರನ್ನು ಗೌರವಿಸುವುದು ನಾಗರಿಕತೆಯಾ ಗಿದ್ದು, ಅವರನ್ನು ಕಾಯುವ ನಿಟ್ಟಿನಲ್ಲಿ ಕಿರಿಯರು ದಿನದಲ್ಲಿ ಸ್ವಲ್ಪ ಸಮಯವನ್ನಾ ದರೂ ಮೀಸಲಿಡಬೇಕು ಎಂದು ತಹಸೀ ಲ್ದಾರ್ ಸಂತೋಷ್‍ಕುಮಾರ್ ಹೇಳಿದರು.

ನಗರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲೂಕು ಹಿರಿಯ ನಾಗರಿಕರ ವೇದಿಕೆಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನಾಂಗಕ್ಕೆ ಹಿರಿಯರು ಮತ್ತು ಮಕ್ಕಳಿ ಗಾಗಿ ಸಮಯ ಮೀಸಲಿಡುವುದೇ ದೊಡ್ಡ ತಲೆ ನೋವಾಗಿದೆ. ಅಂದಿನ ಕಾಲದಲ್ಲಿ ನಮ್ಮ ಹಿರಿಯರು 9-10 ಮಕ್ಕಳನ್ನು ಸಾಕುತ್ತಿ ದ್ದರು. ದಿನವಿಡೀ ಎಷ್ಟೇ ಕೆಲಸಗಳಿದ್ದರೂ ಮಕ್ಕಳಿಗಾಗಿ ತಮ್ಮ ಸಮಯ ಮೀಸಲಾ ಗಿಡುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಅದು ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಬ್ಬರಲ್ಲೂ ಪ್ರೀತಿ-ವಿಶ್ವಾಸದ ಜೊತೆಗೆ ದ್ವೇಷ-ಅಸೂಯೆ ಎಂಬುದು ಇರುತ್ತದೆ. ಇವುಗಳಲ್ಲಿ ನಾವು ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯನ್ನು ಅಳವಡಿಸಿ ಕೊಳ್ಳಬೇಕು. ಕುಟುಂಬದಲ್ಲಿ ಏನೇ ಸಮಸ್ಯೆ ಆದರೂ ಪರಸ್ಪರ ಮಾತನಾಡಿ ಪರಿಹರಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತೀಯ ಅವಿಭಕ್ತ ಕುಟುಂಬ ಪದ್ಧತಿಯನ್ನು ವಿದೇಶಿಗರು ಒಪ್ಪಿಕೊಂಡಿ ದ್ದಾರೆ. ಆದರೆ, ನಾವು ವಿಭಕ್ತ ಕುಟುಂಬ ದತ್ತ ವಾಲುತ್ತಿದ್ದೇವೆ ಎಂದರು.

ನಗರಸಭೆ ಪೌರಾಯುಕ್ತ ಛÀಲಪತಿ ಮಾತನಾಡಿ, ತಾಲೂಕು ಕೇಂದ್ರ ಸ್ಥಾನ ಗಳಲ್ಲೂ ಕೂಡ ವೃದ್ಧಾಶ್ರಮಗಳು ತಲೆ ಎತ್ತುತ್ತಿರುವುದು ವಿಪರ್ಯಾಸವಾಗುತ್ತಿದೆ. ನಗರದಲ್ಲಿರುವ ವಯೋವೃದ್ಧರಿಗೆ ಉದ್ಯಾ ನವನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಉದ್ಯಾನವನಗಳಲ್ಲಿ ಪ್ರಕೃತಿ ಮಡಿಲಲ್ಲಿ ವ್ಯಾಯಾಮ ಮಾಡುವ ಶಾಶ್ವತ ಸೌಲಭ್ಯ ಗಳನ್ನು ಕೂಡ ನೀಡಲಾಗುತ್ತದೆ ಎಂದರು.

ನಗರ ಕಂತೇನಹಳ್ಳಿ ಕೆರೆ ಆವರಣದಲ್ಲಿ ಇರುವ ಉದ್ಯಾನವನದಲ್ಲಿ ಹಿರಿಯರಿ ಗಾಗಿಯೇ ವಿವಿಧ ಸೌಲಭ್ಯಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ನಮ್ಮ ಕಚೆÉೀರಿಗೆ ಆಗಮಿಸುವ ವೃದ್ಧರಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಒಂದು ಊರಿನ ಇತಿಹಾಸವನ್ನು ಅರಿ ಯಬೇಕಾದರೆ ಅಲ್ಲಿಯ ಹಿರಿಯರನ್ನು ಭೇಟಿ ಮಾಡಿದರೆ ಸಾಕು ಅನೇಕ ತಲೆ ಮಾರುಗಳ ಇತಿಹಾಸಗಳು ಲಭ್ಯವಾ ಗುತ್ತದೆ. ಹಿರಿಯರು ಆಯಾ ಊರುಗಳಿಗೆ ಅತ್ಯಮೂಲ್ಯ ಆಸ್ತಿಯಾಗಿದ್ದು ಅವರನ್ನು ಕಾಪಾಡಿಕೊಂಡು ಬರುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಕರ್ನಾಟಕ ಉಚ್ಛ ನ್ಯಾಯಾಲಯ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗ ರಾಜ ಗಂಗಾವತಿ ಮಾತನಾಡಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮಾರ್ಗದರ್ಶನ, ಸಿದ್ಧಾಂತ ಹಾಗೂ ಅವರು ಮಕ್ಕಳೊಂದಿಗೆ ಬೆರೆಯುತ್ತಿದ್ದ ಗುಣ ನನಗೆ ಸ್ಫೂರ್ತಿಯಾಯಿತು ಎಂದ ಅವರು, ಇಂದಿನ ಯುವ ಜನರಲ್ಲಿ ರಾಷ್ಟ್ರ ಪ್ರಜ್ಞೆ ಜಾಗೃತವಾಗಬೇಕು. ಆಗ ಮಾತ್ರ ತಂದೆ ತಾಯಿ ಸೇರಿದಂತೆ ವಯೋ ವೃದ್ಧರನ್ನು ಕಾಯುವ ಜಾಗೃತಿ ಪ್ರಜ್ಞೆ ಮೂಡುತ್ತದೆ ಎಂದರು.
60 ವರ್ಷಗಳು ಆದ ನಂತರ ಪ್ರತಿಯೊ ಬ್ಬರಿಗೂ ದೈಹಿಕ ನ್ಯೂನತೆಗಳು ಬರುವುದು ಸಹಜ. ಇಂತಹ ಸಮಯಗಳಲ್ಲಿ ಬೇರೆ ಯವರನ್ನು ಅವಲಂಬಿತರಾಗುವ ಸನ್ನಿ ವೇಶಗಳೇ ಹೆಚ್ಚಾಗಿರುತ್ತದೆ. ಇಂದಿನ ತಲೆ ಮಾರಿನ ಜನತೆಯೊಂದಿಗೆ ಹಿಂದಿನ ತಲೆ ಮಾರು ಹಿರಿಯರು ಹೊಂದಾಣಿಕೆ ಮನೋ ಭಾವನೆ ಇರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನಾಗರಿಕ ರಾಮಚಂದ್ರ ವಹಿಸಿ ದ್ದರು. ಗೌರವಾಧ್ಯಕ್ಷ ಚನ್ನಬಸಪ್ಪ, ಕಾರ್ಯ ದರ್ಶಿ ಬಿ.ಎಂ.ಕಾಂತರಾಜು, ಮುಖಂಡ ರಾದ ರೈಲ್ವೆ ಮಹದೇವ್, ಧನ್ವಂತರಿ ಸತ್ಯನಾರಾಯಣ, ರಂಗನಾಥ್, ಚಂದ್ರಪ್ಪ, ಕರವೇ ರಾಜು, ಕುಮಾರಸ್ವಾಮಿ, ದೊಡ್ಡ ಲಿಂಗಯ್ಯ, ದತ್ತಾತ್ರಿ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *