ಮಾವಿನಕಾಯಿ ಮಾರಾಟ ಮಳಿಗೆಗಳಿಗೆ ತಹಸೀಲ್ದಾರ್ ಭೇಟಿ, ಪರಿಶೀಲನೆ
ಹಾಸನ

ಮಾವಿನಕಾಯಿ ಮಾರಾಟ ಮಳಿಗೆಗಳಿಗೆ ತಹಸೀಲ್ದಾರ್ ಭೇಟಿ, ಪರಿಶೀಲನೆ

May 15, 2019

ಹಾಸನ: ಅರಸೀಕೆರೆ ನಗರದಲ್ಲಿ ಮಾವಿನಕಾಯಿಗಳನ್ನು ಕೃತಕ ಹಣ್ಣು ಮಾಡುವಿಕೆ ವಿಧಾನದ ಅನುಮಾನದ ಮೇರೆಗೆ ಮೇ 13ರಂದು ತಹಸೀಲ್ದಾರ್ ಸಂತೋಷ ಕುಮಾರ್ ಮತ್ತು ತಾಲೂಕು ಆಹಾರ ಸುರಕ್ಷಾತಾಧಿಕಾರಿ ಡಾ.ಜಿ.ಎಸ್. ನಾಗಪ್ಪ ಜಂಟಿಯಾಗಿ ಸಿಬ್ಬಂದಿಯೊಡನೆ ಮಾವಿನಕಾಯಿ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾವಿನ ಹಣ್ಣುಗಳಿಗೆ ವಿಷಕಾರಿ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿ ಅವುಗಳನ್ನು ಕೃತಕ ರೀತಿಯಲ್ಲಿ ಹಣ್ಣು ಮಾಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಈ ರೀತಿಯ ಪ್ರಕರಣಗಳಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ತಿಳಿಸಲಾಯಿತು. ಕೊಳೆತ ಹಣ್ಣುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡು ವಂತೆ ಮತ್ತು ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ಹಾಗೂ ನಗರ ಸಭೆ ವತಿಯಿಂದ ಸ್ಥಳ ಪರವಾನಿಗೆ ಪಡೆದಿದ್ದರೂ ಸಹ ಕಡ್ಡಾಯವಾಗಿ ಆಹಾರ ಸುರಕ್ಷತೆಗೆ ಸಂಬಂಧಿಸಿದ ಈSSಂI ಪರವಾನಗಿ ಪಡೆಯದೆ ವ್ಯಾಪಾರ ನಡೆಸಿದರೆ ತಮ್ಮ ಮೇಲೆ ದಂಡ ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದರು.

Translate »