ಮಾನ ಇದ್ದರೆ ಸೋಮವಾರ ಸದನಕ್ಕೆ ಬಂದು ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಿ
ಮೈಸೂರು

ಮಾನ ಇದ್ದರೆ ಸೋಮವಾರ ಸದನಕ್ಕೆ ಬಂದು ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಿ

July 21, 2019

ಮೈಸೂರು, ಜು.20-ನನ್ನ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿರುವ ಶಾಸಕ ಎ. ಹೆಚ್. ವಿಶ್ವನಾಥ್ ಅವ ರಿಗೆ ಮಾನ ಇದ್ದರೆ ಸೋಮವಾರ ಸದನಕ್ಕೆ ಬಂದು ನನ್ನ ವಿರುದ್ಧ ಹಕ್ಕು ಚ್ಯುತಿ ಮಂಡಿಸಲಿ ಎಂದು ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ.

ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು, ವಿಶ್ವನಾಥ್ ತಾನು ಕಳಂಕ ರಹಿತ ಎಂದು ಮುಂಬೈ ನಲ್ಲಿ ಕುಳಿತು ಹೇಳಿದರೆ ಸಾಲದು. ಸದನಕ್ಕೆ ಬಂದು ಹೇಳಲಿ ನೋಡೋಣ. ನನ್ನ ಆರೋ ಪದಲ್ಲಿ ತಪ್ಪು ಇದೆ ಎಂದು ಸಾಬೀತು ಪಡಿಸಿದರೆ ರಾಜ್ಯದ ಜನರ ಕ್ಷಮೆ ಕೋರಿ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಘೋಷಿಸಿದರು.

ನಾನು ಪ್ರಾಮಾಣಿಕವಾಗಿದ್ದು, ನೇರ ವಾಗಿ ಮಾತನಾಡುತ್ತಿರುವುದರಿಂದ ನನ್ನನ್ನು ದುರಹಂಕಾರಿ ಎಂದಿದ್ದಾರೆ. ಆದರೆ ರಾಜ ಕೀಯ ವ್ಯಭಿಚಾರವನ್ನು ಜನರು ಒಪ್ಪುವು ದಿಲ್ಲ ಎಂದು ಗುಡುಗಿದರು. ನಾನು ರಿಯಲ್ ಎಸ್ಟೇಟ್ ಡೆವಲಪರ್ ಎಂಬುದು ನಿಜ. ನನಗೆ ವ್ಯವಹಾರವಿದೆ. ನಾನು ಒಮ್ಮೆ ಚುನಾ ವಣೆಯಲ್ಲಿ ಸೋತು ಮೂರು ಬಾರಿ ಸತತ ವಾಗಿ ಗೆದ್ದು ಬಂದಿದ್ದೇನೆ. ಆದರೆ ನಿಮಗೆ (ವಿಶ್ವನಾಥ್) ಯಾವುದೇ ವ್ಯವಹಾರವಿಲ್ಲ. ಒಂಭತ್ತು ಚುನಾವಣೆಗಳಲ್ಲಿ ನಾಲ್ಕು ಬಾರಿ ಸೋತು ಐದು ಬಾರಿ ಗೆದ್ದಿದ್ದೀರಿ. ಅದಕ್ಕೆ ಹಣ ಎಲ್ಲಿಂದ ಬಂತು? ಎಂದು ಗುಡುಗಿದರು.

ನಾನು ಹೊಲಸು ರಾಜಕಾರಣ ಮಾಡಲ್ಲ. ನಾನು ಮಾಡಿರುವ ಆರೋಪ ನಿಜವೆಂದು ಯಾವುದೇ ದೇವಸ್ಥಾನಕ್ಕೆ ಕರೆದರೂ, ಬಂದು ಪ್ರಮಾಣ ಮಾಡುತ್ತೇನೆ. ಅವರು ಯಾರಿಂ ದಲೂ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ. ಹಾಗೆ ಪ್ರಮಾಣ ಮಾಡುವ ತಾಕತ್ತು ಇದೆಯೇ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಇಂದಿನ ಸ್ಥಿತಿಗೆ ನಾನೇ ಕಾರಣವಾಗಿಬಿಟ್ಟಿದ್ದೇನೆ. ಕಾಂಗ್ರೆಸ್‍ನಲ್ಲಿ ಕಡೆಗಣಿಸಲ್ಪಟ್ಟು ಮೂಲೆಗುಂಪಾಗಿದ್ದ ವಿಶ್ವನಾಥ್ ಅವರನ್ನು ಜೆಡಿಎಸ್‍ಗೆ ಸೇರಿಸಿಕೊಳ್ಳಲು ಜಿ.ಟಿ.ದೇವೇಗೌಡರ ವಿರೋಧದ ನಡುವೆಯೂ ನಾನು ಒಪ್ಪಿಕೊಂಡೆ. ಒಂದು ವೇಳೆ ಅಂದು ನಾನು ಒಪ್ಪದಿದ್ದರೆ ಇಂದು ಕುಮಾರಣ್ಣ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಹುಣಸೂರಿನಲ್ಲಿ ಪ್ರಜ್ವಲ್ ರೇವಣ್ಣ ಇಲ್ಲವೆ ಜಿ.ಟಿ.ದೇವೇಗೌಡರ ಪುತ್ರ ಹರೀಶ್‍ಗೌಡ ಇವರಿಬ್ಬರಲ್ಲಿ ಒಬ್ಬರು ಸ್ಪರ್ಧಿಸಬೇಕಾಗಿತ್ತು. ಆದರೆ ಹಿರಿಯ ಮುಖಂಡರು ಎಂಬ ಕಾರಣಕ್ಕಾಗಿ ಇವರಿಗೆ ಟಿಕೆಟ್ ನೀಡಿ ಹಗಲು-ರಾತ್ರಿ ಕೆಲಸ ಮಾಡಿ ಗೆಲ್ಲಿಸಿದೆವು. ಅದಕ್ಕಾಗಿ ಇವರು ಆಪರೇಷನ್ ಕಮಲಕ್ಕೆ ಒಳಗಾಗಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದರು ಎಂದು ಆರೋಪಿಸಿದರು.

ವಿಶ್ವನಾಥ್ ಅವರೊಂದಿಗೆ ನನ್ನ ತೋಟದ ಮನೆಯಲ್ಲಿ ಮಾತುಕತೆ ನಡೆಸಿದಾಗ `ನಿಮಗೆ ಅಧಿಕಾರ ಬೇಕಿದ್ದರೆ ಹೇಳಿ, ನಾನೇ ರಾಜೀನಾಮೆ ಕೊಡುತ್ತೇನೆ. ನಿಮಗೆ ಅವಕಾಶ ಸಿಗಲಿ’ ಅಂದಿದ್ದೆ. ಆಗ ಅವರು `ನನಗೆ ಯಾವ ಅಧಿಕಾರದ ಆಸೆಯೂ ಇಲ್ಲ. ಜೀವಿತಾವಧಿಯ ಕೊನೇ ಅವಧಿಯಲ್ಲಿ ಶಾಸಕನಾಗಿದ್ದರೆ ಅಷ್ಟೇ ಸಾಕು’ ಎಂದಿದ್ದರು. ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರ ಆರು ಮಂದಿ ಹಿಂಬಾಲಕರಿಗೆ ಟಿಕೆಟ್ ನೀಡಲಾ ಗಿತ್ತು. ಒಂದು ವೇಳೆ ತಾನು ತಪ್ಪು ಮಾಡಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ ಬಹುದಾಗಿತ್ತು. ಆದರೆ ವೈಯಕ್ತಿಕವಾಗಿ ಮೂರ್ನಾಲ್ಕು ಬಾರಿ ಬಹಿರಂಗವಾಗಿ ಟೀಕಿಸಿದರು. ನಾನು ಆಕಸ್ಮಿಕವಾಗಿ ಬಿಜೆಪಿ ನಾಯಕರನ್ನು ಭೇಟಿ ಆದರೆ ನನ್ನನ್ನು ಬಿಜೆಪಿಯ ಹಳೆಯ ಗಿರಾಕಿ ಎಂದರು. ಆದರೆ ತನಗೆ ರಾಜಕೀಯ ಪುನರ್‍ಜನ್ಮ ನೀಡಿದ ಜೆಡಿಎಸ್‍ಗೆ ದ್ರೋಹ ಮಾಡಿ ಬಿಜೆಪಿಯಿಂದ ಹಣ ಪಡೆದು ಆಪರೇಷನ್ ಕಮಲಗೆ ಒಳಗಾಗಿ ಮುಂಬೈನಲ್ಲಿ ಹೋಗಿ ಕುಳಿತ್ತಿದ್ದಾರೆ ಎಂದು ಸಾ.ರಾ.ಮಹೇಶ್ ಹರಿಹಾಯ್ದರು.

ಯಾರ್ರಿ ಸಾರಾ ಮಹೇಶ್, ಆತ ಓರ್ವ ದುಡ್ಡಿನ ದಲ್ಲಾಳಿ…
ಬೆಂಗಳೂರು, ಜು.20- 28 ಕೋಟಿ ರೂ.ಗೆ ಆಪರೇಷನ್ ಕಮಲಕ್ಕೆ ಒಳಗಾಗಿ ದ್ದಾರೆ ಎಂದು ತಮ್ಮ ವಿರುದ್ಧ ಆರೋಪಿಸಿ ರುವ ಪ್ರವಾಸೋ ದ್ಯಮ ಸಚಿವ ಸಾ.ರಾ. ಮಹೇಶ್ ಓರ್ವ ದುಡ್ಡಿನ ದಲ್ಲಾಳಿಯಾ ಗಿದ್ದು, ಮುಖ್ಯಮಂತ್ರಿಗಳಿಗೆ ಹಣ ಸರಬ ರಾಜು ಮಾಡುತ್ತಿದ್ದಾರೆ ಎಂದು ಶಾಸಕ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ತಮ್ಮನ್ನು ಸಂಪರ್ಕಿಸಿದ ಮಾಧ್ಯಮ ಗಳ ಜೊತೆ ದೂರವಾಣಿಯಲ್ಲಿ ಮಾತ ನಾಡಿದ ಅವರು, ಸಾ.ರಾ.ಮಹೇಶ್ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಲ್ಲದೇ `ನೀನು ಗಂಡಸಾಗಿದ್ದರೆ ಈಚೆ ಬಂದು ಮಾತನಾಡು. ಮೈಸೂರಿನ ಪ್ರೆಸ್ ಕ್ಲಬ್‍ನಲ್ಲಿ ಇಬ್ಬರೂ ಕುಳಿತು ಮಾತನಾಡೋಣ. ಯಾರ್ಯಾರಿಗೆ ನೀನು ದುಡ್ಡಿನ ದಲ್ಲಾಳಿ ಎಂಬುದನ್ನು ಬಿಚ್ಚಿಡುತ್ತೇನೆ’ ಎಂದು ಸಾ.ರಾ.ಮಹೇಶ್ ಅವರಿಗೆ ಸವಾಲೆಸೆದರು. ವಿಧಾನಸಭೆಯೊಳಗೆ ಮಾಡಿದ ಆರೋಪಗಳ ಆಧಾರದ ಮೇಲೆ ನಾವು ಕಾನೂನು ಕ್ರಮ ಕೈಗೊಳ್ಳಲಾಗುವುದಿಲ್ಲ. ಆದ್ದರಿಂದ ಸಾ.ರಾ.ಮಹೇಶ್ ಹೊರಗೆ ಬಂದು ಮಾತನಾಡಲಿ ಎಂದರು. ನಾನು ಬೆಂಗಳೂರಿಗೆ ಬರುತ್ತೇನೆ. ಅವರ ಆರೋಪಗಳಿಗೆಲ್ಲಾ ಉತ್ತರಿಸುತ್ತೇನೆ ಎಂದರು. ಹೆಚ್.ಡಿ.ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಶಾಸಕನಾಗಿ, ಮಂತ್ರಿಯಾಗಿ, ಸಂಸದನಾಗಿ ದೇವರಾಜ ಅರಸರು ಗರಡಿಯಲ್ಲಿ ದೀಕ್ಷೆ ಪಡೆದು ಕಳೆದ 40 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ನಾನು, ವಿಶ್ವನಾಥ್ ಎಂದರೆ ಏನು ಎಂಬುದು ಜನರಿಗೆ ಗೊತ್ತಿದೆ. ಈ ಸಾ.ರಾ.ಮಹೇಶ್ ಯಾರು? ನಾನು ಶಾಸಕನಾಗಿದ್ದಾಗ ಮುಡಾ ಅಧ್ಯಕ್ಷರಾಗಿದ್ದ ಪಿ.ಗೋವಿಂದರಾಜು ಮನೆಯಲ್ಲಿ ಲೋಟ ತೊಳೆಯುತ್ತಿದ್ದವನು. 15 ವರ್ಷಗಳ ಹಿಂದೆ ನೀನು ಹ್ಯಾಗಿದ್ದೆ? ಎಂದು ಸಾ.ರಾ.ಮಹೇಶ್ ಅವರನ್ನು ಪ್ರಶ್ನಿಸಿದರು.

ಸಾ.ರಾ.ಮಹೇಶ್ ತೋಟಕ್ಕೆ ನಾನು ಹೋಗಿದ್ದುದು ನಿಜ. ನನಗೆ ಸಾಲ ಇರುವುದೂ ನಿಜ. ಅದರ ಬಗ್ಗೆ ಮಾತನಾಡಿದ್ದೇನೆ. ಆದರೆ ಸಾ.ರಾ.ಮಹೇಶ್ ಬೇರೆಯದೇ ಕಥೆ ಹೇಳುತ್ತಿದ್ದಾರೆ ಎಂದು ವಿಶ್ವನಾಥ್ ಹೇಳಿದರು. ವಿಶ್ವಾಸ ಮತಕ್ಕಾಗಿ ನಾನು ವಿಧಾನಸಭೆಗೆ ಬರುವು ದಿಲ್ಲ, ಮತ ಹಾಕುವುದೂ ಇಲ್ಲ, ಈ ಸರ್ಕಾರ ಉಳಿಯುವುದೂ ಇಲ್ಲ ಎಂದ ಅವರು, ರಾಮಲಿಂಗಾರೆಡ್ಡಿ ಅವರು ಮೋಸ ಮಾಡಿದ್ದರು ಎಂದು ಇಲ್ಲಿರುವ (ಮುಂಬೈ) ಶಾಸಕರು ಮಾತನಾಡುತ್ತಿದ್ದಾರೆ. ಅವರು ಹೀಗೆ ಮಾಡಬಾರದಾಗಿತ್ತು ಎಂದು ಹೇಳಿದರು.

Translate »