ಮೈಸೂರು: ಪಾರಂ ಪರಿಕ ಕಟ್ಟಡಕ್ಕೆ ಧಕ್ಕೆ ಬರುತ್ತಿದೆ ಎಂದು ಆರೋಪಿಸಿರುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಅವರು ಮೈಸೂರಿನ ರೈಲು ನಿಲ್ದಾ ಣದ ನವೀ ಕರಣ ಕಾಮ ಗಾರಿಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ರೈಲ್ವೆ ಇಲಾ ಖೆಯು ಮೈಸೂರು ರೈಲು ನಿಲ್ದಾಣದ ಆವರಣದ ರಸ್ತೆಯನ್ನು ಅಗಲೀಕರಿಸಿ ದ್ವಿಪಥದ ರಸ್ತೆಯನ್ನಾಗಿಸುವುದು, ಪಾರ್ಕಿಂಗ್ ಸ್ಥಳವನ್ನು ವಿಸ್ತಾರಗೊಳಿಸಿ ಮಾರ್ಕ್ ಮಾಡುವುದು, ಲ್ಯಾಂಡ್ ಸ್ಕೇಪಿಂಗ್, ಟಿಕೆಟ್ ರಿಸರ್ವೇಷನ್ ಕೌಂಟರ್ ಸ್ಥಳಾಂತರ, ಡಿಆರ್‍ಎಂ ಕಚೆÉೀರಿ ಕಾಂಪೌಂಡ್ ಅನ್ನು ತೆರವು ಗೊಳಿಸಿ ಹೊಸದಾಗಿ ಕಬ್ಬಿಣದ ಗ್ರಿಲ್ ಅನ್ನು ಅಳವಡಿಸುವುದು, ರೈಲ್ವೇ ಸ್ಟೇಷನ್ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಮಂಗಳೂರು ಹೆಂಚಿನ ಶೆಡ್ ರೂಫಿಂಗ್ ತೆಗೆದು ಹೊಸ ಛಾವಣಿ ಅಳವಡಿಸು ವುದು ಸೇರಿದಂತೆ ವಿವಿಧ ನವೀಕರಣದ ಕಾಮಗಾರಿಗೆ ಎರಡು ತಿಂಗಳ ಹಿಂದೆ ಯಷ್ಟೇ ಸಂಸದ ಪ್ರತಾಪ್ ಸಿಂಹ ಶಂಕು ಸ್ಥಾಪನೆ ನೆರವೇರಿಸಿದ್ದರು.
ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಸೋಮವಾರ ಬೆಂಗಳೂರಿಗೆ ರೈಲಿನಲ್ಲಿ ಹೋಗಲು ರೈಲ್ವೇ ಸ್ಟೇಷನ್‍ಗೆ ತೆರಳಿದಾಗ ಕೆಲಸ ನೋಡಿದ ಸಾ.ರಾ.ಮಹೇಶ್, ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗು ತ್ತಿದೆಯಾದ್ದರಿಂದ ಕೆಲಸ ಸ್ಥಗಿತಗೊಳಿಸಿ ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಸಂಪರ್ಕಿಸಿದ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಸಚಿವ ಸಾ.ರಾ.ಮಹೇಶ, ಪಾರಂಪರಿಕ ಕಟ್ಟಡ ಗಳ ಕಾಮಗಾರಿ ನಡೆಸುವ ಮೊದಲು ಜಿಲ್ಲಾ ಮಟ್ಟದ ಪಾರಂಪರಿಕ ಸಮಿತಿ ಯಿಂದ ಅನುಮತಿ ಪಡೆಯಬೇಕು. ಆದರೆ ಅನುಮತಿ ಪಡೆಯದೆಯೇ ರೈಲ್ವೇ ಸ್ಟೇಷನ್ ಪಾರಂಪರಿಕ ಕಟ್ಟಡದ ಕೆಲ ಭಾಗಗಳನ್ನು ಒಡೆದು ಹಾಕಿ ಮನ ಬಂದಂತೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ ಅಳವಡಿಸಿದ್ದ ಪಾರಂ ಪರಿಕ ಶೈಲಿಯ ಡಿಆರ್‍ಎಂ ಕಚೇರಿ ಕಟ್ಟಡದ ಕಾಂಪೌಂಡ್ ಗ್ರಿಲ್‍ಗಳನ್ನು ತೆಗೆದು ಹಾಕಿ ಕಬ್ಬಿಣದ ಗ್ರಿಲ್‍ಗಳನ್ನು ಅಳವಡಿಸುತ್ತಿರುವುದರಿಂದ ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾ ಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದೂ ಸಾ.ರಾ.ಮಹೇಶ್ ತಿಳಿಸಿದರು.
ಸಚಿವರ ಸೂಚನೆ ಮೇರೆಗೆ ಸದ್ಯ ನವೀಕರಣ ಕಾಮಗಾರಿಯನ್ನು ಸ್ಥಗಿತ ಗೊಳಿಸಲಾಗಿದ್ದು, ಸಾ.ರಾ.ಮಹೇಶ ಅವರಿಗೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿ ಮನವರಿಕೆ ಮಾಡಿಕೊಡಲು ರೈಲ್ವೇ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.