ಚಾಮರಾಜನಗರದಲ್ಲಿ ಮೊಸರು ಮಡಿಕೆ ಒಡೆಯುವ ಉತ್ಸವ
ಚಾಮರಾಜನಗರ

ಚಾಮರಾಜನಗರದಲ್ಲಿ ಮೊಸರು ಮಡಿಕೆ ಒಡೆಯುವ ಉತ್ಸವ

September 8, 2018

ಚಾಮರಾಜನಗರ:  ನಗರದ ಶ್ರೀಕೃಷ್ಣ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಗರದ ರಥಬೀದಿಯಲ್ಲಿ ಶ್ರೀಕೃಷ್ಣ ವಿಶೇಷ ಪೂಜೆ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಶುಕ್ರವಾರ ನಡೆಯಿತು. 3 ಯುವತಿಯರ ತಂಡ ಹಾಗೂ 7 ಯುವ ಕರ ತಂಡ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಎರಡು ಕಂಬ ಗಳ ನಡುವೆ ಸುಮಾರು 15ರಿಂದ 20 ಅಡಿ ಎತ್ತರದಲ್ಲಿ ಕಟ್ಟ ಲಾಗಿದ್ದ ಮೊಸರು ತುಂಬಿದ್ದ ಮಡಿಕೆಯನ್ನು ಯುವಕ, ಯುವತಿಯರ ತಂಡ ಪಿರಮಿಡ್ ಆಕಾರ ರಚಿಸಿಕೊಂಡು ಒಡೆಯುತ್ತಿದ್ದ ದೃಶ್ಯ ರೋಮಾಂಚನವಾಗಿತ್ತು. ಮೊಸರು ಮಡಿಕೆ ತುಂಬಿದ್ದ ಮಡಿಕೆಯನ್ನು ಒಡೆಯುವಂತೆ ಯುವಕರು ನೀರನ್ನು ರಭಸವಾಗಿ ಎರಚುತ್ತಿದ್ದರು. ಆದರೂ ಸಹ ತಂಡ ದವರು ಮಡಿಕೆ ಹೊಡೆದು ಸಂಭ್ರಮಿಸಿದರು.

ಚಾಮರಾಜನಗರದ ಸೇವಾ ಭಾರತಿ ಶಾಲೆಯ ಒಂದು, ಅಮಚವಾಡಿ ಪಿಯು ಕಾಲೇಜಿನ ಎರಡು ಯುವತಿಯರ ತಂಡ (ಮೂರು ತಂಡಗಳು) ಉತ್ಸವದಲ್ಲಿ ಪಾಲ್ಗೊಂಡಿತ್ತು. ಇದೇ ಮೊದಲ ಬಾರಿಗೆ 3 ಯುವತಿಯರು ತಂಡ ಉತ್ಸವ ದಲ್ಲಿ ಭಾಗವಹಿಸಿತ್ತು. ಇದಲ್ಲದೇ ಅಮಚವಾಡಿ ಕಾಲೇಜಿನ 2 ಯುವಕರ ತಂಡ, ಸೇವಾ ಭಾರತಿ ಕಾಲೇಜು, ಭಗತ್‍ಸಿಂಗ್, ಮಧುರ, ಮುರಳಿ ಹಾಗೂ ರಾಧಾ ಮುರಳಿ (ಒಟ್ಟು 7 ತಂಡ ಗಳ) ಯುವಕರ ತಂಡ ಉತ್ಸವದಲ್ಲಿ ಪಾಲ್ಗೊಂಡಿದ್ದವು.

ಪ್ರತಿ ತಂಡದಲ್ಲಿ 15 ಜನ ಇದ್ದರು. ಇವೆಲ್ಲಾ ಪಿರಮಿಡ್ ಆಕಾರ ರಚಿಸಿ ಎತ್ತರದಲ್ಲಿ ಕಟ್ಟಲಾಗಿದ್ದ ಮೊಸರು ತುಂಬಿದ್ದ ಮಡಿಕೆಯನ್ನು ಒಡೆಯಲು ಯತ್ನಿಸುತ್ತಿದ್ದರು. ಇದನ್ನು ವಿಫಲಗೊಳಿಸಲು ಯುವಕರು ನೀರನ್ನು ಮುಖಕ್ಕೆ ಎರ ಚುತ್ತಿದ್ದರು. ಆದರೂ ಸಹ ಕೆಲವು ತಂಡಗಳು ಮೊದಲ ಪ್ರಯತ್ನದಲ್ಲಿಯೇ ಯಶ ಕಂಡರೆ, ಮತ್ತೆ ಕೆಲವು ತಂಡಗಳು ಎರಡನೆ, ಮೂರನೇ ಪ್ರಯತ್ನದಲ್ಲಿ ಮಡಿಕೆ ಒಡೆದು ಸಂಭ್ರಮಿಸಿದವು.

ಕಳೆದ 9 ವರ್ಷಗಳಿಂದಲೂ ಸಹ ಶ್ರೀಕೃಷ್ಣ ಪ್ರತಿಷ್ಠಾನ ಈ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ಈ ಉತ್ಸವವನ್ನು ವೀಕ್ಷಿ ಸಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಮೊಸರು ಮಡಿಕೆ ಒಡೆಯುವ ಉತ್ಸವಕ್ಕೂ ಮುನ್ನ ವೇದಿಕೆ ಕಾರ್ಯಕ್ರಮ ನಡೆಯಿತು. ಇಸ್ಕಾನ್ ಗುರುಗಳಾದ ರಸಿಕ್ ಶೇಖರರಾಸ್, ಜಿಪಂ ಮಾಜಿ ಅಧ್ಯಕ್ಷ ಎಂ.ರಾಮ ಚಂದ್ರ, ಮೈಸೂರಿನ ಸಂಸ್ಕøತಿ ಪೋಷಕ ಡಾ.ರಘುರಾಂ ವಾಜಪೇಯಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ನಂ.ಶ್ರೀಕಂಠಕುಮಾರ್, ಭಾರತ್ ವಿಕಾಸ್ ಪರಿಷತ್ತಿನ ಅಧ್ಯಕ್ಷ ವೆಂಕಟನಾಗಪ್ಪಶೆಟ್ಟಿ, ಪಟೇಲ್ ಬಜಾಜ್ ಮಾಲೀಕ ವೃಷಬೇಂದ್ರಪ್ಪ, ಸುರೇಶ್ ಋಗ್ವೇದಿ, ಪ್ರದೀಪ್ ದೀಕ್ಷಿತ್, ವೈ.ಆರ್.ಮಹೇಶ್, ಅಜಿತ್, ಸುನೀಲ್, ಶ್ರೇಯಸ್, ಅನಿಲ್ ದೀಕ್ಷಿತ್ ಇತರರು ಉಪಸ್ಥಿತರಿದ್ದರು.

Translate »