ಹಾಸನದಲ್ಲಿ ಮನೆ ಮನೆ ಕಸ ಸಂಗ್ರಹ ವಾಹನಗಳಿಗೆ ಚಾಲನೆ
ಹಾಸನ

ಹಾಸನದಲ್ಲಿ ಮನೆ ಮನೆ ಕಸ ಸಂಗ್ರಹ ವಾಹನಗಳಿಗೆ ಚಾಲನೆ

January 4, 2019

ಹಾಸನ: ಮನೆ ಮನೆ ಕಸ ಸಂಗ್ರಹಣೆ ಮಾಡುವ ಅಫೆ ವಾಹನಕ್ಕೆ ಶಾಸಕ ಪ್ರೀತಮ್ ಜೆ. ಗೌಡ ಚಾಲನೆ ನೀಡಿದರು.

ನಗರದ ಹಾಸನಾಂಬ ದೇವಸ್ಥಾನದ ವೃತ್ತದಲ್ಲಿ ನಗರಸಭೆ ಮತ್ತು ಎಸ್.ಎಂ.ಪಿ. ಇವರ ಸಹಯೋಗದಲ್ಲಿ ಶುಕ್ರವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಮನೆ ಮನೆ ಕಸ ಸಂಗ್ರಹಣೆ ಮಾಡುವ 35 ವಾರ್ಡ್‍ಗಳ ಅಫೆ ವಾಹನಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನಗರದ 35 ವಾರ್ಡ್‍ಗಳ ಕಸವನ್ನು ಪ್ರತಿನಿತ್ಯ ಎಲ್ಲೆಂದರಲ್ಲಿ ಎಸೆಯಬೇಕಾಗಿತ್ತು. ಜೊತೆಗೆ ಕಸ ವಿಲೇವಾರಿ ಮಾಡುವ ಅಫೆ ವಾಹನವು ಕಸವನ್ನು ತುಂಬಿಕೊಂಡು ಅಗಿಲೆ ಗ್ರಾಮಕ್ಕೆ ಹೋಗಬೇಕಾಗಿತ್ತು. ಒಂದು ಬಾರಿ ಹೋಗಲು ಸುಮಾರು ಅರ್ಧಗಂಟೆ ಸಮಯ ವ್ಯಯ ವಾಗುತಿದ್ದು, ಎರಡನೇ ಬಾರಿ ಕಸದ ಲೋಡನ್ನು ನಗರದ ಸಂತೇಪೇಟೆ ವೃತ್ತದಲ್ಲೆ ಸುರಿದು ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿತ್ತು ಎಂದರು.

ಈಗ ಇಡೀ ಹಾಸನದ ಕಸದ ಜವಾಬ್ದಾರಿ ಯನ್ನು ಎಸ್.ಎಂ.ಪಿ. ಎಂಟರ್‍ಪ್ರೈಸಸ್ ತುಮಕೂರು ಇವರು ಪಡೆದಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿ ನಗರ ಸಭೆ ಜವಾಬ್ದಾರಿ ನೀಡಿದೆ. ಒಣ ಕಸ ಮತ್ತು ಹಸಿ ಕಸವನ್ನು ವಿಂಗಡಣೆ ಮಾಡಲಾಗು ತ್ತದೆ ಎಂದು ಹೇಳಿದರು. ನಗರದಿಂದ 5 ಕಿ.ಮೀ ದೂರದಲ್ಲಿ ಜಾಗ ಕೊಟ್ಟರೇ ಯಾವ ಕ್ರಿಮಿ ಕೀಟ ಹೋಗದಂತೆ ಕಸವನ್ನು ವಿಲೇ ವಾರಿ ಮಾಡಲಾಗುತ್ತದೆ. ಇದರಿಂದ ಕೃಷಿಗೆ ಅವಶ್ಯಕವಾಗಿರುವ ಗೊಬ್ಬರ ಅಂಶವಿರುವ ನೀರನ್ನು ತಯಾರಿಸಲಾಗುತ್ತದೆ. ಇದರಿಂದ ಇನ್ನು ಹೆಚ್ಚಿನ ಅನುಕೂಲಗಳು ಇದ್ದು, ಕಸದಿಂದ ರಸ ಮಾಡಲು ಯೋಚನೆ ಮಾಡಲಾಗಿದೆ. ಇದರಿಂದ ನಗರಸಭೆಗೆ ಯಾವ ನಷ್ಟವಾಗದೇ ಆಧಾಯ ತಂದುಕೊಡುತ್ತದೆ ಎಂದರು.

ನಗರಸಭೆ ಆಯುಕ್ತ ಬಿ.ಎ. ಪರಮೇಶ್ ಮಾತನಾಡಿ, ಕಸ ಎಂದರೇ ಯಾರಿಗೂ ಬೇಡವಾದದ್ದು, ಯಾರು ಮನೆಯಲ್ಲಿ ಕಸವನ್ನು ಇಟ್ಟುಕೊಳ್ಳದೇ ರಸ್ತೆ ಇಲ್ಲವೇ ಚರಂಡಿಗೆ ಎಸೆಯುತ್ತಾರೆ. ಆದರೇ ಸ್ವಂತ ಖರ್ಚಿನಿಂದ ಎಸ್.ಎಂ.ಪಿ. ಸಲೀಂ ಪಾಷ ರವರು ಕಸ ವಿಲೇವಾರಿ ಮಾಡಲು ಮುಂದಾ ಗಿದ್ದಾರೆ. ಇದಕ್ಕೆ ಜಿಲ್ಲಾಡಳಿತ, ಸಚಿವರು ಒಪ್ಪಿಗೆ ಕೊಟ್ಟಿದ್ದಾರೆ. ಉತ್ತಮ ನಿರ್ವಹಣೆ ಮಾಡುವ ಭರವಸೆ ಇದೆ ಎಂದರು.

ಪ್ರೀತಮ್ ಜೆ. ಗೌಡರು ಶಾಸಕರಾಗುವ ಮೊದಲು ವಿದ್ಯಾನಗರದಲ್ಲಿ 15 ಆಟೋ ಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಬಿಟ್ಟು ಕಸ ಸಂಗ್ರಹ ಮಾಡುವ ಮೂಲಕ ಗಮನ ನೀಡಿದ್ದರು. ಶಾಸಕರಾದರೇ ಕಸ ವಿಲೇ ವಾರಿಗೆ ಮುಕ್ತಿ ನೀಡುವುದಾಗಿ ವಿಧಾನಸಭೆ ಚುನಾವಣೆಗೆ ಮೊದಲು ಹೇಳಿದಂತೆ ಶಾಸಕರಾದ ಮೇಲೆ ಇಂದು ವಿನೂತನ ರೀತಿಯಲ್ಲಿ ಕಸ ವಿಲೇವಾರಿ ಮಾಡುವ ಮೂಲಕ ಜನರಿಗೆ ನೀಡಿದ ವಾಗ್ದಾನವನ್ನು ಈಡೇರಿಸಿದ್ದಾರೆ. ಎಸ್.ಎಂ.ಪಿ. ಜೊತೆ ಒಡಂಬಡಿಕೆ ಮಾಡಿಕೊಂಡು ನಗರಸಭೆ ಯಿಂದ ನಯಾಪೈಸೆ ಖರ್ಚು ಇಲ್ಲದೆ ಕಸವನ್ನು ಸಂಪೂರ್ಣ ವಿಲೇವಾರಿ ಮಾಡಲು ಕಾರ್ಯ ರೂಪಕ್ಕೆ ತರಲಾಗಿದೆ ಎಂದರು. ಈಗಾಗಲೇ ಸಂತೇಪೇಟೆ ವೃತ್ತ, ಗೊರೂರು ರಸ್ತೆಯ ಬದಿ ಇದ್ದ ಕಸದ ಗುಡ್ಡೆಯನ್ನು ಖಾಲಿ ಮಾಡ ಲಾಗಿದ್ದು, ಹಸಿರು ಹಾಸನ ಮಾಡಲು ಮುಂದಾ ಗಿರುವುದು ಜನರಲ್ಲಿ ಸಂತೋಷ ಮೂಡಿಸಿದೆ.

ಎಸ್.ಎಂ.ಪಿ. ಎಂಟರ್‍ಪ್ರೈಸಸ್ ಸಲೀಂ ಪಾಷ ರವರು ಮಾತನಾಡಿ, ಮನೆ ಮನೆ ಕಸ ಸಂಗ್ರಹಕ್ಕೆ ಎಲ್ಲರೂ ಸಹಕಾರ ನೀಡಿ ದ್ದಾರೆ. ಹಸಿ ಕಸ ಮತ್ತು ಒಣ ಕಸ ಎರಡನ್ನು ಬೇರ್ಪಡಿಸಿದರೇ ಉತ್ತಮ. ಆದರೇ ಚರಂಡಿಗೆ ಮತ್ತು ಬೀದಿಗೆ ಯಾರು ಎಸೆಯದೇ ಅಫೆ ವಾಹನಕ್ಕೆ ತಂದು ಹಾಕಬೇಕು ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಇಂಜಿನಿಯರ್ ಪುರುಷೊತ್ತಮ್ ಹಾಗೂ ನಗರಸಭೆ ವಾರ್ಡಿನ ಸದಸ್ಯರು ಪಾಲ್ಗೊಂಡಿದ್ದರು. ಸಂಗೀತ ವಿದ್ವಾಂಶ ರೋಹನ್ ಅಯ್ಯಾರ್ ಪ್ರಾರ್ಥಿಸಿದರು. ಸಮಾಜ ಸೇವಕ ಆರ್.ಕೆ. ಸ್ವರೂಪ್ ಸ್ವಾಗತಿಸಿದರು.

Translate »