ಎನ್.ಆರ್.ಕ್ಷೇತ್ರದಲ್ಲಿ ಪ್ರತಾಪ ಸಿಂಹ ಚಾಲನೆ
ಮೈಸೂರು

ಎನ್.ಆರ್.ಕ್ಷೇತ್ರದಲ್ಲಿ ಪ್ರತಾಪ ಸಿಂಹ ಚಾಲನೆ

February 26, 2019

ಮೈಸೂರು: `ಮೇರಾ ಪರಿವಾರ್-ಬಿಜೆಪಿ ಪರಿವಾರ್’ ಕಾರ್ಯ ಕ್ರಮಕ್ಕೆ ಸಂಸದ ಪ್ರತಾಪಸಿಂಹ ಸೋಮ ವಾರ ಮೈಸೂರಿನ ನರಸಿಂಹರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕ್ಯಾತಮಾರನಹಳ್ಳಿ ಟೆಂಟ್ ಸರ್ಕಲ್‍ನಲ್ಲಿ ಚಾಲನೆ ನೀಡಿದರು.

ಪಕ್ಷದ ಮುಖಂಡರು, ಕಾರ್ಯಕರ್ತ ರೊಂದಿಗೆ ಮನೆ ಮನೆಗೆ ತೆರಳಿ ಮನೆಗಳ ಮೇಲೆ ಪಕ್ಷದ ಬಾವುಟಗಳನ್ನು ಹಾರಿಸಿ ದರು. ಈ ವೇಳೆ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದರು. ಬಿಜೆಪಿ ಮೈಸೂರು ವಿಭಾ ಗೀಯ ಉಸ್ತುವಾರಿ ಎನ್.ವಿ.ಫಣೀಶ್, ನಗರ ಪಾಲಿಕೆ ಸದಸ್ಯ ಸಾತ್ವಿಕ್ ಸ್ವಾಮಿ, ಎನ್.ಆರ್. ಕ್ಷೇತ್ರ ಬಿಜೆಪಿ ಅಧ್ಯಕ್ಷ ಸು.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ, ಮಂಜುಗೌಡ, ಪಕ್ಷದ ಅಲ್ಪಸಂಖ್ಯಾತರ ವಿಭಾಗದ ನಗರಾಧ್ಯಕ್ಷ ಡಾ.ಅನಿಲ್ ಥಾಮಸ್, ಮುಖಂಡರಾದ ಹೆಚ್.ಜಿ.ಗಿರಿಧರ್, ಪದ್ಮ ನಾಭನ್, ಅಶೋಕ್, ಈಶ್ವರ್, ಶಿವಕುಮಾರ್, ಜವರಪ್ಪ, ಪುಟ್ಟರಾಜು, ಪಿ.ರಮೇಶ್, ಯುವ ಮೋರ್ಚಾ ಅಧ್ಯಕ್ಷ ನಾರಾಯಣ್, ಯೋಗೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »