ಚಾಮರಾಜನಗರದಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ
ಚಾಮರಾಜನಗರ

ಚಾಮರಾಜನಗರದಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ

February 15, 2019

ಚಾಮರಾಜನಗರ: ಚಾಮರಾಜನಗರದ ಸಂತೇಮರಹಳ್ಳಿ ರಸ್ತೆ ಯಲ್ಲಿ ಇರುವ ಮುಖ್ಯ ಅಂಚೆ ಕಚೇರಿ ಯಲ್ಲಿ ಶುಕ್ರವಾರ ಪಾಸ್‍ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭಗೊಂಡಿತು.

ಭಾರತೀಯ ಅಂಚೆ ಇಲಾಖೆಯು ಈ ಸೇವಾ ಕೇಂದ್ರವನ್ನು ಭಾರತೀಯ ವಿದೇ ಶಾಂಗ ಖಾತೆಯ ಸಹಭಾಗಿತ್ವದಲ್ಲಿ ಪ್ರಾರಂ ಭಿಸಲಾಗಿದ್ದು, ಈ ಕೇಂದ್ರವು ಸೋಮವಾರ ದಿಂದ ಶುಕ್ರವಾರದವರೆಗೆ (ಅಧಿಕೃತ ರಜ ದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ಕಾರ್ಯ ನಿರ್ವ ಹಿಸಲಿದೆ. ನಗರದಲ್ಲಿ ಆರಂಭವಾದ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಸಂಸದ ಆರ್.ಧ್ರುವನಾರಾಯಣ್ ಉದ್ಘಾಟಿಸಿ ದರು. ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಬೆಳವಣಿಗೆ ದೃಷ್ಟಿಯಿಂದ ಈ ಪಾಸ್‍ಪೋರ್ಟ್ ಸೇವಾ ಕೇಂದ್ರ ಆರಂಭ ವಾಗಿರುವುದು ಒಳ್ಳೆಯದು. ಜಿಲ್ಲೆಯ ಜನರು ಪಾಸ್‍ಪೋರ್ಟ್‍ಗಾಗಿ ಬೆಂಗಳೂರು ಅಥವಾ ಮೈಸೂರಿಗೆ ತೆರಳಬೇಕಾಗಿತ್ತು. ಇದರಿಂದ ಹೆಚ್ಚಿನ ಹಣ ಖರ್ಚು ಆಗುವುದರ ಜೊತೆಗೆ ಪ್ರಯಾಣಕ್ಕೆ ಸಮಯ ಪೋಲಾಗುತ್ತಿತ್ತು. ಇದನ್ನು ಅರಿತು ಬಹಳ ಶ್ರಮವಹಿಸಿ ಈ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯ ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿ ದರು. ಪಾಸ್‍ಪೋರ್ಟ್ ಪಡೆಯುವುದು ವಿದೇಶಕ್ಕೆ ಹೋಗುವುದಕ್ಕೆ ಮಾತ್ರ ಅಲ್ಲ. ಈ ಹಿಂದೆ ಸಿರಿವಂತರಿಗೆ ಮಾತ್ರ ಪಾಸ್ ಪೋರ್ಟ್ ಎನ್ನುವ ಪರಿಸ್ಥಿತಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬ ನಾಗ ರಿಕನೂ ಪಾಸ್‍ಪೋರ್ಟ್ ಪಡೆಯುವುದು ಅವಶ್ಯವಾಗಿದೆ. ಕಾಲೇಜು, ಇಂಜಿನಿಯ ರಿಂಗ್, ವೈದ್ಯಕೀಯ ಹಾಗೂ ಇತರ ವೃತ್ತಿ ಪರ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲೇ ಪಾಸ್‍ಪೋರ್ಟ್‍ನ್ನು ಪಡೆ ಯುವುದು ಅತ್ಯಂತ ಅವಶ್ಯಕವಾಗಿದೆ ಎಂದರು.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಚಾಮರಾಜನಗರದಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಆರಂಭಗೊಳ್ಳುವುದರ ಮೂಲಕ ನಗರದ ಘನತೆ ಹೆಚ್ಚಿದೆ. ಇದರ ಶ್ರೇಯಸ್ಸು ಸಂಸದ ಆರ್.ಧ್ರುವನಾರಾಯಣ್ ಅವ ರಿಗೆ ಸಲ್ಲುತ್ತದೆ ಎಂದರು.

ಬೆಂಗಳೂರಿನ ರೀಜಿನಲ್ ಪಾಸ್ ಪೋರ್ಟ್ ಅಧಿಕಾರಿ ಭರತ್‍ಕುಮಾರ್ ಕುತಟಿ ಮಾತನಾಡಿ, ದೇಶದಲ್ಲಿ ಒಟ್ಟು 348, ಕರ್ನಾ ಟಕದಲ್ಲಿ 17 ಪಾಸ್‍ಪೋರ್ಟ್ ಸೇವಾ ಕೇಂದ್ರ ಗಳು ಕಾರ್ಯನಿರ್ವಹಿಸುತ್ತಿವೆ. ಪಾಸ್ ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ 20 ದಿನದ ಒಳಗೆ ಪಾಸ್‍ಪೋರ್ಟ್ ನಿಮ್ಮ ಕೈ ಸೇರಲಿದೆ ಎಂದರು.

ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಮಾತನಾಡಿ, ಪಾಸ್‍ಪೋರ್ಟ್ ಪಡೆ ಯುವುದು ಬರೀ ಪ್ರವಾಸ ಮಾಡುವುದಕ್ಕೆ ಅಲ್ಲ. ಅದೊಂದು ನಾನೊಬ್ಬ ಭಾರತ ದೇಶದ ಪ್ರಜೆ ಎನ್ನುವುದಕ್ಕೆ ಮಹತ್ವದ ದಾಖಲೆ ಆಗಿದೆ ಎಂದರು.

ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಜಿ.ಬಸವಣ್ಣ, ನಗರಸಭಾ ಸದಸ್ಯೆ ಚಂದ್ರಕಲಾ, ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕಿ ಎಸ್.ಅಣ್ಣಾಲಕ್ಷ್ಮಿ, ಎಸ್ಪಿ ಧರ್ಮೇಂ ದರ್ ಕುಮಾರ್ ಮೀನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಅಣ್ಣಾಲಕ್ಷ್ಮಿ ಸ್ವಾಗತಿ ಸಿದರು. ಎಂ.ಮನುಕುಮಾರ್ ವಂದಿಸಿದರು.

Translate »