ಶಾರದಾ ವಿಲಾಸ ಕಾಲೇಜಿನಲ್ಲಿ ರೋಬೋಟಿಕ್ಸ್ `ಐಐ’ ಕೋರ್ಸ್‍ಗೆ ಚಾಲನೆ
ಮೈಸೂರು

ಶಾರದಾ ವಿಲಾಸ ಕಾಲೇಜಿನಲ್ಲಿ ರೋಬೋಟಿಕ್ಸ್ `ಐಐ’ ಕೋರ್ಸ್‍ಗೆ ಚಾಲನೆ

January 12, 2020

ಮೈಸೂರು,ಜ.11(ಎಂಟಿವೈ)-ಬೇರೊಬ್ಬರು ಕಸಿದು ಕೊಳ್ಳಲಾಗದ ವಿದ್ಯೆಗೆ ಪರ್ಯಾಯ ಆಸ್ತಿ ಮತ್ತೊಂ ದಿಲ್ಲ. ತಪಸ್ಸಿನಂತೆ ವಿದ್ಯೆಯನ್ನು ಕಲಿಯಲು ಪಣ ತೊಟ್ಟಾಗ ಮಾತ್ರ ಯಶಸ್ಸು ಸಾಧಿಸಬಹುದು ಎಂದು ಸಂಸದ ಪ್ರತಾಪ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಶತಮಾನೋತ್ಸವ ಭವನದಲ್ಲಿ ಆಯೋಜಿ ಸಿದ್ದ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿರುವ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್‍ಗೆ ಚಾಲನೆ ನೀಡಿ, ಮಾತನಾಡಿದರು.

ಈ ಹಿಂದೆ ಕೊಲಂಬಿಯಾ ಹಾಗೂ ದೆಹಲಿ ವಿವಿ ಯಲ್ಲಿ ನಡೆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡಾಟಾ ಪೆÇ್ರಟೆಕ್ಷನ್‍ಗೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದೆ. ಇದೀಗ ಮೈಸೂರಿನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯಲ್ಲಿ ಈ ಕೋರ್ಸ್ ಅನ್ನು ಹೊಸದಾಗಿ ಆರಂಭಿಸಿರುವುದು ಮೈಸೂರಿನ ಹೆಮ್ಮೆ ಎನಿಸಿದೆ. ರಾಜರ ಆಳ್ವಿಕೆ ಕಾಲದಲ್ಲಿಯೇ ಮೈಸೂರು ರಾಜವಂಶಸ್ಥರು ಶತಮಾನದ ಹಿಂದೆಯೇ ಮೈಸೂರಿನಲ್ಲಿ ಶಿಕ್ಷಣ ಸಂಸ್ಥೆ ಗಳನ್ನು ಹುಟ್ಟು ಹಾಕುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯನ್ನು ಮೈಸೂರಿನ ಒಡೆಯರು ಪಾಲನೆ-ಪೆÇೀಷಣೆ ಮಾಡಿ ದ್ದಾರೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡು ತ್ತಿರುವ ವಿದ್ಯಾರ್ಥಿಗಳು, ನಿಶ್ಚಿತ ಗುರಿಯಿಟ್ಟುಕೊಂಡು ಕಠಿಣ ಪರಿಶ್ರಮದ ಮೂಲಕ ಏಳಿಗೆ ಸಾಧಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಡಾ.ಕೆ.ಎಂ.ಮಹದೇವನ್ ಮಾತನಾಡಿ, ವಿದ್ಯಾರ್ಥಿಗಳು ಲಕ್ಷ್ಮಿ ಹಿಂದೆ ಹೋಗದೆ ಶಾರದೆ ಹಿಂದೆ ಹೋಗಬೇಕು. ಇದರಿಂದ ವಿದ್ಯೆ ಒಲಿಯುತ್ತದೆ. ವಿದ್ಯೆ ಯನ್ನು ಬುದ್ಧಿಯಾಗಿ ಸಾಕ್ಷಾತ್ಕರಿಸಿಕೊಂಡು ಸಾಧಕ ರನ್ನು ಪ್ರೇರಣೆಯಾಗಿಟ್ಟುಕೊಳ್ಳಬೇಕು. ಪ್ರಸ್ತುತ ಸಂದರ್ಭ ದಲ್ಲಿ ತಂತ್ರಜ್ಞಾನ ಬಹಳ ಮುಖ್ಯವಾಗಿದೆ. ನಿರಂತರ ಅಧ್ಯಯನ ಹಾಗೂ ಹೊಸ ಅನ್ವೇಷಣೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.

ಇದೇ ವೇಳೆ `ಹಾಲೋಶೂಟ್ ರೋಬೋಟ್ ಗುರು’ ಸಂಸ್ಥೆಯ ಹರ್ಷ ಕಿಕ್ಕೇರಿ, ರೋಬೋಟ್ ಪ್ರಾತ್ಯಕ್ಷಿಕೆ ನೀಡಿದರು. ರೋಬೋಟನ್ನು ಮೈಸೂರಿನಲ್ಲಿಯೇ ಅಭಿ ವೃದ್ಧಿಪಡಿಸಲಾಗುತ್ತಿದೆ. ಯುಎಸ್‍ಎಯಲ್ಲಿ ನಡೆಯು ತ್ತಿರುವ ಅವತಾರ್ ಎಕ್ಸ್‍ಪೈಸ್ 70ಕೋಟಿ ರೂ. ಚಾಲೆಂಜ್ ನಲ್ಲಿ ನಮ್ಮ ಹಾಲೋಶೂಟ್ ರೋಬೋಟ್ ಗುರು ಸಂಸ್ಥೆಯು ಸೆಮಿಫೈನಲ್‍ಗೆ ಪ್ರವೇಶ ಪಡೆದಿದೆ ಎಂದರು.

ಜನವರಿ 15ರಂದು ಪ್ರಧಾನಿ ಮೋದಿ ಹಾಗೂ ಭಾರತೀಯ ಸೈನ್ಯದ ಹಿರಿಯ ಅಧಿಕಾರಿಗಳ ಸಮ್ಮುಖ ದಲ್ಲಿ ರೋಬೋಟ್ ಪ್ರದರ್ಶನ ನಡೆಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ, ಗೌರವ ಕಾರ್ಯ ದರ್ಶಿ ಹೆಚ್.ಕೆ.ಶ್ರೀನಾಥ್ ಆಡಳಿತ ಮಂಡಳಿ ಸದಸ್ಯ ರಾದ ವೈ.ಕೆ.ಭಾಸ್ಕರ್, ಸಿ.ಆರ್.ಕೃಷ್ಣ, ಎಸ್.ನಾಗರಾಜ್, ಪ್ರೊ. ಪಿ.ವಿ.ನರಹರಿ, ಎಂ.ವಿ.ಡೋಂಗ್ರೆ, ಎಸ್.ಎಲ್. ರಾಮಚಂದ್ರ, ಆರ್.ಎಸ್.ಮೋಹನ ಮೂರ್ತಿ ಹಾಗೂ ನಗರಪಾಲಿಕೆ ಸದಸ್ಯ ಮಾ.ವಿ.ರಾಮ ಪ್ರಸಾದ್, ಕೇಬಲ್ ಮಹೇಶ್ ಉಪಸ್ಥಿತರಿದ್ದರು. ಸಮಾ ರಂಭಕ್ಕೆ ವಿಷ್ಣುತೀರ್ಥ ಪ್ರಾರ್ಥಿಸಿದರೆ, ಗೌರವ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್ ವಂದಿಸಿದರು. ಪ್ರೊ.ಎಂ.ದೇವಿಕಾ ಹಾಗೂ ಶಿಕ್ಷಕ ವೆಂಕಟರಮಣ ಭಟ್ ಕಾರ್ಯಕ್ರಮ ನಿರೂಪಿಸಿದರು.

Translate »