ಪ್ರವಾಸೋದ್ಯಮದಲ್ಲಿ ರಾಜ್ಯ 7ನೇ ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನಪ್ರವಾಸೋದ್ಯಮದಲ್ಲಿ ರಾಜ್ಯ 7ನೇ ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ
ಮೈಸೂರು

ಪ್ರವಾಸೋದ್ಯಮದಲ್ಲಿ ರಾಜ್ಯ 7ನೇ ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನಪ್ರವಾಸೋದ್ಯಮದಲ್ಲಿ ರಾಜ್ಯ 7ನೇ ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ

October 6, 2018

ಮೈಸೂರು: ಪ್ರವಾ ಸೋದ್ಯಮದಲ್ಲಿ ದೇಶದಲ್ಲಿ 7ನೇ ಸ್ಥಾನ ಹೊಂದಿರುವ ಕರ್ನಾಟಕ ರಾಜ್ಯವನ್ನು 2ನೇ ಸ್ಥಾನಕ್ಕೆ ತರಲು ಸರ್ಕಾರ ಮುಂದಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ರುವ ಪೂಜಾ ಭಾಗವತ್ ಮೆಮೋರಿಯಲ್ ಮಹಾಜನ ಎಜುಕೇಷನ್ ಸೆಂಟರ್‌ನ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್ ಆಯೋಜಿಸಿದ್ದ `ಪ್ರವಾಸೋದ್ಯಮ ಮತ್ತು ಡಿಜಿಟಲ್ ರೂಪಾಂತರ’ ಕುರಿತ ಎರಡು ದಿನಗಳ `ಟ್ರಾವೆಲ್ ಲಾಗ್-18’ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ರಾಜ್ಯಕ್ಕೆ ವರ್ಷಕ್ಕೆ 22 ಲಕ್ಷ ಪ್ರವಾಸಿಗರು ಬರುತ್ತಾರೆ. ಬೇರೆ ದೇಶಗಳಿಂದ ಪ್ರತೀ ವರ್ಷ ಬರುವ ಹಣದ ವಹಿವಾಟು 3 ಸಾವಿರ ಕೋಟಿ. ತಮಿಳುನಾಡಿಗೆ ನಮಗಿಂತ ಮೂರು ಪಟ್ಟು ಅಂದರೆ 9000 ಕೋಟಿ ವಹಿವಾಟು ನಡೆಯುತ್ತದೆ. ಕೇರಳ ಸಹ ಪ್ರವಾಸಿಗರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾವು ಪ್ರವಾಸೋದ್ಯಮ ವನ್ನು ಅಭಿವೃದ್ದಿ ಪಡಿಸಲು ಹೆಚ್ಚಿನ ಒತ್ತು ನೀಡುತ್ತಿದ್ದು, ಸರ್ಕಾರ ಪ್ರವಾಸೋದ್ಯಮ ಅತಿಥಿ ನಿರ್ವಹಣೆಗೂ ಒತ್ತು ನೀಡಲಿದೆ ಎಂದರು.

ಹೊರಗಿನಿಂದ ಬರುವ ಜನರನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ಇಲ್ಲಿ ಮುಖ್ಯ. ಪ್ರವಾಸಿ ವಾಹನ ಮಾಲೀಕರು ಮತ್ತು ಚಾಲಕರನ್ನು ಆಕರ್ಷಿಸುವ ಕೆಲಸ ಆಗಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್ಚು ವಿಶೇಷ ಒತ್ತು ನೀಡಿದ್ದು, ಪ್ರವಾಸೋದ್ಯಮ ಇಲಾಖೆಗೆ ಹೆಚ್ಚು ಹಣ ಕೊಡುತ್ತಿದ್ದಾರೆ ಎಂದು ಹೇಳಿ ದರು. ನಿರುದ್ಯೋಗಿಗಳಿಗೆ ಹೆಚ್ಚು ಕೆಲಸ ಸಿಗುತ್ತಿರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಒಂದು ಹೋಟೆಲ್ ಕಟ್ಟಿದರೆ ನೇರವಾಗಿ 17 ಜನರಿಗೆ ಕೆಲಸ ದೊರೆಯುತ್ತದೆ. ಇಂತಹ ತರಬೇತಿ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇದಕ್ಕಾಗಿ ಸರ್ಕಾರ ಸಬ್ಸಿಡಿ ಮೂಲಕ ನೆರವಾಗುತ್ತಿದೆ ಎಂದರು.

ಈ ಬಾರಿಯ ದಸರಾಗೆ ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ 999 ರೂ. ಗಳಿಗೆ ಬೆಂಗಳೂರು ಮತ್ತು ಮೈಸೂರು ನಡುವೆ ವಿಮಾನ ಹಾರಾಟ ನಡೆಸಲಾಗುತ್ತಿದೆ. ಉಳಿದ ಹಣವನ್ನು ಸರ್ಕಾರವೇ ಭರಿಸಲಿದೆ ಎಂದರು. ವಾರದ ಶನಿವಾರ, ಭಾನುವಾರ ಮಾತ್ರ ಇದ್ದ ಮೈಸೂರು ಅರಮನೆಯ ದೀಪದ ವ್ಯವಸ್ಥೆಯನ್ನು ಉಳಿದ 5 ದಿನವೂ ಬೆಳಗಿಸಿ, ಅದರ ವಿದ್ಯುತ್ ಬಿಲ್ ಅನ್ನು ಪ್ರವಾಸೋದ್ಯಮ ಇಲಾಖೆ ನೀಡಲಿದ್ದು, 7 ದಿನವೂ ವಿದ್ಯುತ್ ವ್ಯವಸ್ಥೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ನಮ್ಮ ಪ್ರವಾಸೋದ್ಯಮ ಇನ್ನೂ ಎತ್ತರಕ್ಕೆ ಬೆಳೆಯ ಬೇಕಾಗಿದೆ. ಮಾಹಿತಿ ತಂತ್ರಜ್ಞಾನದ ಸಹಯೋಗದಲ್ಲಿ ಸ್ಥಳೀಯ ಸಂಪನ್ಮೂಲ ಬಳಸಿ ಕೊಳ್ಳಬೇಕಿದೆ. ಜೊತೆಗೆ ಉದ್ಯೋಗಾವಕಾಶ ಗಳಿಗೂ ಅವಕಾಶವಾಗಲಿದೆ.

ರಾಜ್ಯ ಸರ್ಕಾರ ಕೌಶಲ್ಯ, ಪ್ರವಾ ಸೋದ್ಯಮಕ್ಕೆ ಒತ್ತು ನೀಡುತ್ತಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಪ್ರವೇಶ ಪಡೆದುಕೊಳ್ಳಬೇಕು.ಯುವ ಸಮೂಹ ಇದರಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮಲ್ಲಿರುವ ವಿಫುಲ ಅವಕಾಶ ವನ್ನು ಬಳಸಿಕೊಳ್ಳಬೇಕು ಎಂದರು.

Translate »