ಪೌರ ಕಾರ್ಮಿಕರ ಧರಣಿ ಸ್ಥಳಕ್ಕೆ ಶಾಸಕ ರಾಮದಾಸ್ ಭೇಟಿ
ಮೈಸೂರು

ಪೌರ ಕಾರ್ಮಿಕರ ಧರಣಿ ಸ್ಥಳಕ್ಕೆ ಶಾಸಕ ರಾಮದಾಸ್ ಭೇಟಿ

October 6, 2018

ಮೈಸೂರು:  ಮುಷ್ಕರ ನಿರತ ಪೌರಕಾರ್ಮಿಕರನ್ನು ಶುಕ್ರವಾರ ಭೇಟಿ ಮಾಡಿದ ಕೃಷ್ಣ ರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿಕೊಂಡರು.

ನಿಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನೂ ಭೇಟಿ ಮಾಡಿ ಅವರ ಗಮನಕ್ಕೂ ತಂದಿದ್ದೇನೆ. ಪೌರ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಗಮನಹರಿಸಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಲ್ಲೂ ಮನವಿ ಮಾಡಿದ್ದೇವೆ ಎಂದು ರಾಮದಾಸ್, ಪ್ರತಿ ಭಟನಾನಿರತ ಕಾರ್ಮಿಕರಿಗೆ ತಿಳಿಸಿದರು.

ನಿಮ್ಮ ಸಮಸ್ಯೆಗಳು, ನೋವಿನ ಬಗ್ಗೆ ನಮಗೆ ತಿಳಿ ದಿದೆ. ನಿಮ್ಮೊಂದಿಗೆ ನಾವು ಸದಾ ಇದ್ದೇ ಇರುತ್ತೇವೆ. ನಿಮ್ಮ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ನಿರತರಾಗಿದ್ದೇವೆ. ಆದರೆ ದಸರಾ ಮಹೋತ್ಸವ ಆರಂಭ ವಾಗುತ್ತಿದ್ದು, ಈ ಸಂದರ್ಭದಲ್ಲಿ ನೀವು ಪ್ರತಿಭಟನೆ ಮುಂದುವರಿಸಿದರೆ ನಾಗರಿಕ ಸಮಸ್ಯೆಗಳು ಉಲ್ಬಣ ವಾಗುತ್ತವೆ. ದಸರೆಗೆ ದೇಶ-ವಿದೇಶಗಳಿಂದ ಆಗಮಿ ಸುವ ಲಕ್ಷಾಂತರ ಪ್ರವಾಸಿಗರಿಗೆ ನಿರಾಸೆಯಾಗುವಂ ತಹ ಸನ್ನಿವೇಶ ಸೃಷ್ಟಿಯಾಗಬಾರದು. ನಿಮಗೆ ಭರವಸೆ ನೀಡಿ, ದೂರ ಸರಿಯುವ ಪ್ರಶ್ನೆಯೇ ಇಲ್ಲ. ನಿಮ್ಮೊಂ ದಿಗೆ ನಾವೂ ಇರುತ್ತೇವೆ. ದಯಮಾಡಿ ಪ್ರತಿಭಟನೆ ಯನ್ನು ಹಿಂಪಡೆದುಕೊಳ್ಳಿ ಎಂದು ಮನವಿ ಮಾಡಿಕೊಂಡರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡರು, ನಾಳೆ (ಅ.6) ಸಭೆ ನಡೆಸುವ ಭರ ವಸೆ ನೀಡಿರುವ ಹಿನ್ನೆಲೆಯಲ್ಲಿ ಸದ್ಯ ಪೌರಕಾರ್ಮಿ ಕರು ಪ್ರತಿಭಟನೆ ಮುಂದುವರಿಸಿದ್ದಾರೆ.

Translate »