ಮಾಜಿ ಸಚಿವ ವಿಶ್ವನಾಥ್ ವಿರುದ್ಧ ಹೇಳಿಕೆ: ಸಾರಾ ಮಹೇಶ್  ಬಹಿರಂಗ ಕ್ಷಮೆ ಯಾಚನೆಗೆ  ಜೆಡಿಎಸ್ ಮುಖಂಡರ ಆಗ್ರಹ
ಮೈಸೂರು

ಮಾಜಿ ಸಚಿವ ವಿಶ್ವನಾಥ್ ವಿರುದ್ಧ ಹೇಳಿಕೆ: ಸಾರಾ ಮಹೇಶ್  ಬಹಿರಂಗ ಕ್ಷಮೆ ಯಾಚನೆಗೆ  ಜೆಡಿಎಸ್ ಮುಖಂಡರ ಆಗ್ರಹ

July 25, 2019

ಮೈಸೂರು,ಜು.24(ಪಿಎಂ)-ಶಾಸಕ ಎ.ಹೆಚ್.ವಿಶ್ವನಾಥ್ ಅವರ ಕುರಿತು ಮಾಜಿ ಸಚಿವ ಸಾ.ರಾ.ಮಹೇಶ್ ತೇಜೋವಧೆ ಮಾಡಿದ್ದು, ಕೂಡಲೇ ಸಾ.ರಾ. ಮಹೇಶ್ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ರೇವಣ್ಣ ಆಗ್ರಹಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಮತ್ತು ರಾಜಕಾರಣದ ಜೀವನದಲ್ಲಿ ಎಂದೂ ಕಪ್ಪು ಚುಕ್ಕೆ ಹೊಂದದ ಎ.ಹೆಚ್.ವಿಶ್ವನಾಥ್ ಅವರ ಬಗ್ಗೆ ಲಘುವಾಗಿ ಸಾ.ರಾ.ಮಹೇಶ್ ಮಾತನಾಡಿದ್ದಾರೆ. ವಿಶ್ವನಾಥ್ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಸಾ.ರಾ.ಮಹೇಶ್ ಅವರಿಗಿಲ್ಲ ಎಂದರು. ಸಾ.ರಾ.ಮಹೇಶ್ ಈ ಹಿಂದೆ ಹೇಗಿದ್ದರು ಎಂಬುದು ಮೈಸೂರು ಜನತೆಗೆ ಗೊತ್ತಿದೆ. ತುಘಲಕ್ ದರ್ಬಾರ್ ನಂತೆ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವರಿಗೂ ಗೌರವ ನೀಡದೇ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಓಲೈಸಿ ಕೊಂಡು, ಅವರಿಗೆ ಚಾಡಿ ಹೇಳುತ್ತಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ನಗರ ಕ್ಷೇತ್ರದಿಂದ ಸಾ.ರಾ.ಮಹೇಶ್ ಗೆಲುವು ಸಾಧಿಸಲು ವಿಶ್ವನಾಥ್ ಅವರ ಸಹಾಯ-ಸಹಕಾರವೇ ಕಾರಣ ಎಂದು ಪ್ರತಿಪಾದಿಸಿದರು. ಜೆಡಿಎಸ್ ಸಂಚಾಲಕರಾದ ಕೆ.ರಾಜೇಂದ್ರ, ಪಾರ್ಥಸಾರಥಿ, ಕಾರ್ಯಕರ್ತ ಆರ್.ಉಮಾಮಹೇಶ್ವರ ಗೋಷ್ಠಿಯಲ್ಲಿದ್ದರು.

ಚಾಮರಾಜಪುರಂನಲ್ಲಿ `ವಿಶ್ವ ಮಾನವ’ ಎಕ್ಸ್‍ಪ್ರೆಸ್ ನಿಲುಗಡೆಗೆ ರೈಲ್ವೆ ಸಚಿವರ ಒಪ್ಪಿಗೆ
ಮೈಸೂರು, ಜು.24-ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಮಾರ್ಗವಾಗಿ ಶಿವ ಮೊಗ್ಗಕ್ಕೆ ಸಂಚರಿಸುವ `ವಿಶ್ವ ಮಾನವ’ ಎಕ್ಸ್‍ಪ್ರೆಸ್ ರೈಲು ಚಾಮರಾಜಪುರಂ ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಒಪ್ಪಿಗೆ ನೀಡಿದ್ದಾರೆ.

ಈ ರೈಲನ್ನು ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಿದರೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ವಾಗುತ್ತದೆ. ಆದ್ದರಿಂದ ನಿಲುಗಡೆಗೆ ಅವಕಾಶ ಕಲ್ಪಿಸಬೇ ಕೆಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ ಮನವಿಯನ್ನು ರೈಲ್ವೆ ಸಚಿವರು ಪುರಸ್ಕರಿಸಿದ್ದಾರೆ.

Translate »